ಮನಕ್ಕೆ ಬೇರೆ ಕೆಲಸವಿಲ್ಲ.. ಇಂತಹುದೇ ತರ್ಕ ನಿತ್ಯ ಮನದೊಳಗೆ
------------------------------------------------
“Aunty, please tell me, where is the dustbin?”
ಏಳು ವರ್ಷದ ಆ ಹುಡುಗಿ ಸುಮಾರು ಹತ್ತು ನಿಮಿಷ ಸಿಕ್ಕವರ ಹತ್ತಿರವೆಲ್ಲ ಕೇಳುತ್ತಿದ್ದಳು ಕೈಯಲ್ಲಿ ಚೊಕೊಲೆಟ್ ರ್ಯಾಪರ್ ಹಿಡಿದುಕೊಂಡು!
ನಾನು ಅವಳನ್ನೇ ಗಮನಿಸುತ್ತಿದ್ದೆ.
ಅವಳಿಗೆ ಯಾರೂ ತೋರ್ಸಿಸಿಲ್ವೋ ಏನೋ..
ನನಗೆ ಕುತೂಹಲ ಏನು ಮಾಡ್ಬಹುದು ಅಂತ..
ಕೊನೆಗೂ ಕಪ್ಪು ಪ್ಲಾಸ್ಟಿಕ್ ತೊಟ್ಟಿಯನ್ನು ಹುಡುಕಿ ಅಲ್ಲಿ ಹಾಕಿದಳು..
ಈ ಹುಡುಗಿ ಭಾರತೀಯಳು..
ಆದರೆ ಹುಟ್ಟಿನಿಂದಲೂ ವಿದೇಶದಲ್ಲಿದ್ದಾಳೆ.
ಹೆಚ್ಚು ಕಮ್ಮಿ ಪ್ರತಿವರ್ಷ ಭಾರತ ಮತ್ತು ಅಜ್ಜಿ ಮನೆಯಲ್ಲಿ ಎರಡೆರಡು ತಿಂಗಳು ವಾಸ.
ಇಲ್ಲಿ ಮಾತೃ ಭಾಷಯಲ್ಲೇ ವ್ಯವಹರಿಸುತ್ತಾಳೆ.
ಅಲ್ಲಿ ಆಂಗ್ಲ ಭಾಷೆ..
ನಾನು ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳಿಗೆ ಎಷ್ಟು ಬಾರಿ ತಿಳುವಳಿಕೆ ಹೇಳಿದರೂ ಹೊರಗೆ ತೊಟ್ಟಿಯಲ್ಲಿ ಬಿಸಾಡದೇ ಅಲ್ಲೇ ಮಾರ್ಗದ ಬದಿಯಲ್ಲೇ ಚೊಕೊಲೆಟ್ ರ್ಯಾಪರ್ ಬಿಸಾಡಿ ಹೋಗುತ್ತಾರೆ..
ಶಾಲೆಯಲ್ಲಿ ಪರಿಸರ ಮಾಲಿನ್ಯ, ಕಾರಣ, ಮತ್ತು ಅದನ್ನು ತಡೆಗಟ್ಟುವಿಕೆಯ ಬಗ್ಗೆ ಪ್ರಶ್ನೋತ್ತರ..
ಬರೀ ಉರು ಹೊಡೆಯಲೇ!!!
ಯಾವಾಗ ಯಾವಾಗ ನಾವು ನಮ್ಮನ್ನು ತಿದ್ದಿಕೊಳ್ಳುವುದು???
ಈ ಮಕ್ಕಳದು ತಪ್ಪಲ್ಲ.. ಅವರಿಗೆ ಮಾದರಿ ಅವರವರ ಮನೆಯವರು ಮತ್ತು ನಿತ್ಯ ಭೇಟಿಯಾಗುವವರು..
ಇಂತಹ ಪ್ರಜೆಗಳ ಆಳುವ ರಾಜಕಾರಣಿ ಭ್ರಷ್ಟಾಚಾರಿಯಾಗಿರದೆ ಮತ್ತೇನಾಗಬಲ್ಲ!
ನಮ್ಮಲ್ಲೂ ವಿದೇಶಗಳಲ್ಲಿದ್ದ ಹಾಗೆ ಬಿಗಿಯಾದ ಕಾನೂನು ಇದ್ದಿದ್ದರೆ...

No comments:
Post a Comment