ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 March, 2014

ಮುಂಜಾವು


ಮನ ಹಂಬಲಿಸುತಿದೆ ಮುಂಗಾರು ಮುಂಜಾವು..
--------------------------------------

|| ಶರಧಿಯ ಶಂಖ ನಾದದ ಮೊರೆತ ||
|| ’ತಟಪಟ’ ’ತಟಪಟ’ ಹನಿಗಳ ನರ್ತನ ||
|| ಆಗೀಗ ಸುಯ್ಯೆಂದು ಬೀಸಿ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಸಂದೇಶ ವಿನಿಮಯ ಮಾಡುವ ಮರುತ ||
|| ಕಪ್ಪೆ ಜೀರುಂಡೆಗಳ ಸಂಗೀತ ಕಛೇರಿ ||
|| ಕ್ಷೀಣವಾಗಿ ಕೇಳುವ ಹಕ್ಕಿಗಳ ಚಿಲಿಪಿಲಿ ಸುಪ್ರಭಾತ ||
|| ಮುಗಿಲು ಬುವಿಗಳ ಮಿಲಕ್ಕಡ್ಡಿಯಾಗದಂತೆ ಮರೆಯಲೇ ನಿಂತು ಮಂದ ಬೆಳಕು ಚೆಲ್ಲುವ ದಿನಕರ ||

-ತನ್ನೂರಿನ ಮುಂಗಾರಿನ ಮುಂಜಾನೆಗೆ ಸಾಕ್ಷಿ ಈ ಭಾವುಕ ಮನ.

 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...