ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

05 March, 2014

ಸುಭಾಷಿತ

ನಿತ್ಯವೂ ಓದಿ ಬೆನ್ನು ತಟ್ಟಿ, ಹುರಿದುಂಬಿಸಿ ಮತ್ತಿಷ್ಟು ಬರೆಸುವ ಸಹ ಓದುಗರಿಗಾಗಿ..

ತಮ್ಮದೇ ಪದಗುಚ್ಛದ ಹೆಮ್ಮೆ
ಭಾವಕೆ ಮಾತಾದ ಅನುಭೂತಿ
ಶಬ್ದ ಬಳಕೆಯಲಿ ತೋರುವ ಜಾಣ್ಮೆ
ವೀಣಪಾಣಿಯ ಅನುಗ್ರಹಕೆ ಕೃತಜ್ಞತೆ

ಪರರ ಭಾವಕೂ ತಲೆದೂಗಿ
ಎಲ್ಲವನೂ ಆಸ್ವಾದಿಸುವ ಹುಮ್ಮಸು
ಸಾಹಿತ್ಯ ಸಿರಿಯಲಿ ಮುಳುಗೇಳುವ ಮನಸು
ಬೆನ್ನು ತಟ್ಟಿ ಹುರಿದುಂಬಿಸುವ ಸೊಗಸು

ರಸಭರಿತ ಗಂಧದ ಹೂತೇರು
ಮೈತುಂಬ ಪೊತ್ತ ಮಾವಿನ ತರು
ಆಶಿಸುವುದಿಲ್ಲವೇ ಹುಲು ಮನುಜನರು
ಉಣಿಸಲೆನಗೆ ಮಡಕೆ ತುಂಬಾ ನೀರು!

ಅಪಿ ಮುದಮುಪಯಾಂತೋ ವಾಗ್ವಿಲಾಸೈಃ  ಸ್ವಕೀಯೈಃ |
ಪರಭಣಿತಿಷು ತೋಷಂ ಯಾಂತಿ ಸಂತಃ ಕಿಯಂತಃ |
ನಿಜಘನಮಕರಂದಸ್ಯಂದಪೂರ್ಣಾಲವಾಲಃ |
ಕಲಶಸಲಿಲಸೇಕಂ ನೇಹತೇ ಕಿಂ ರಸಾಲಃ ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...