ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
25 December, 2012
ನಾವ್ಯಾಕೆ ನಮ್ಮ ನಮ್ಮ ಊರಿನಲ್ಲಿ helping networks ಮಾಡಿಕೊಳ್ಳಬಾರದು!
ಏನಾದರೂ ಮಾಡಬೇಕು...ಹೌದು, ನಾನು ಈ ನಿಟ್ಟಿನಲ್ಲಿ ವಿಫಲಳಾಗಲೂಬಹುದು..ಆದರೂ ಏನಾದರೂ ಮಾಡಿ ಒಂದಿಷ್ಟು ಬದಲಾವಣೆ ತರಲೇಬೇಕು..ಇಂತಹ ದುರ್ಘಟನೆಗಳ ಸಂಖ್ಯೆಯಾದರೂ ಕಡಿಮೆಯಾಗಬೇಕು....ಇದೇ ಆಲೋಚನೆ ರಾತ್ರಿ ಮಲಗಿದವಳಿಗೆ...ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿಬಂತು. ಬೆಳಿಗ್ಗೆ ತಿಂಡಿ ತಿನ್ನುವಾಗ ಮಕ್ಕಳೊಂದಿಗೆ ಆ ವಿಷಯವನ್ನು ಪ್ರಸ್ಥಾವಿಸಿದೆ...ಉತ್ತೇಜಿತ ಉತ್ತರ ಬರಲಿಲ್ಲ. ಅವರಿಬ್ಬರು ಹೇಳಿದ್ದೂ ಸರಿಯೇ ಆಗಿತ್ತು..ಆದರೂ ಇಂತಹ ಪ್ರಯತ್ನಗಳು ಒಂದಿಷ್ಟು ಕ್ರೌರ್ಯತಡೆಗೆ ಸಹಾಯಕವಾಗುವುದೆಂದು ನನ್ನ ಅಭಿಪ್ರಾಯ.
ಹೌದು, ಈಗ ನಮ್ಮ ನಮ್ಮ ಜಂಗಮವಾಣಿ, ಸಾಮಾಜಿಕ ಜಾಲತಾಣಗಳು, ನಮ್ಮ ಸ್ನೇಹಿತರ ನಿಜವಾದ ಉಪಯೋಗವಾಗುವುದು..ನಾವ್ಯಾಕೆ ನಮ್ಮ ನಮ್ಮ ಊರಿನಲ್ಲಿ ಒಂದು helping network ಮಾಡಿಕೊಳ್ಳಬಾರದು. ಒಂದು ವೇಳೆ ಯಾವುದೇ ಹೆಣ್ಣು ಮಗಳು, ಅಥವಾ ಹುಡುಗನೇ ಬೇಕಾದರೂ ಇರಲಿ, ರಾತ್ರಿ ಹೊತ್ತು ಒಂಟಿಯಾಗಿ ಬರಬೇಕಾದ ಪ್ರಸಂಗ ಒದಗಿದರೆ ಅವರು ಆಯಾಯ ಸ್ಥಳದಲ್ಲಿರುವ ನಮ್ಮ ಜಾಲದಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಸಹಾಯಪಡಕೊಳ್ಳಬಹುದಲ್ಲವೆ! ಹಲವು ಸಾರಿ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಪ್ರಯಾಣ ಮಾಡಿ, ತಾವು ತಲುಪಬೇಕಾದ ಸ್ಥಳವನ್ನು ಮುಂಜಾನೆ ಇನ್ನೂ ಕತ್ತಲಿರುವಾಗ ತಲುಪಿದರೆ, ಅವರನ್ನು ಅವರ ಹಾಸ್ಟೆಲಿಗೋ ಅಥವಾ ಅವರ ರೂಮಿಗೋ ತಲುಪಿಸಬಹುದು. ( ರಿಕ್ಷಾದವರನ್ನೂ, ಪೋಲಿಸರನ್ನೂ ನಂಬಲು ಸಾಧ್ಯವಿಲ್ಲವಲ್ಲ.)
ನನ್ನ ಮಗ- ಅಮ್ಮ ಅವರೇ kidnap ಮಾಡಿಬಿಟ್ಟರೆ! ನನ್ನ ಮಗನಿಗೂ ಆ ಶಬ್ದದ ಅಲರ್ಜಿ!
ಮಗಳೂ ಧ್ವನಿಗೂಡಿಸಿದಳು- ಅಮ್ಮ, ನೀನೇನೋ ಟೀಮ್ ಅಂತ ಮಾಡ್ತಿ..ಅದರಲ್ಲಿ ಇದ್ದವರೆಲ್ಲ ಒಳ್ಳೆಯವರೇ ಅಂತ ಗ್ಯಾರಂಟಿ ಏನು?
ಅವರಿಬ್ಬರು ಹೇಳುವುದು ಸರಿಯೇ...ಇಂತಹ ಕೆಲಸಗಳಿಗೆ ಮುಂದೆ ಬರುವವರು ಕಡಿಮೆಯೇ...ಯಾರಿಗೆ ಬೇಕು ಇಂತಹ ಜವಾಬ್ದಾರಿ! ನಾನು ನನ್ನ ಮಗನಿಗೆ ಕೇಳಿದೆ...ಒಂದು ವೇಳೆ ನಿನಗೆ ನಾನು ಯಾರಿಗಾದರು ಸಹಾಯ ಮಾಡಲು ಹೋಗು ಅಂದರೆ ಹೋಗುವಿಯಾ? ಮಾತೇ ಇಲ್ಲ..ಆದರೂ ನನಗೊತ್ತು ಅವನು ಆ ಹೊತ್ತಿನಲ್ಲಿ ಹೋಗದೇ ಇರಲಾರ....ಅವನು ಸಹಾಯ ಮಾಡಿದ ಜನರ ಪಟ್ಟಿ ನನ್ನಲ್ಲಿದೆಯಲ್ಲವ!
______________________________________________
ದಯಮಾಡಿ ಒಂಟಿಯಾಗಿರುವಾಗ ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ. ಹಲವು ಸಾರೆ ಪುರುಷನ "ಹಮ್" ಕೆಣಕಿದರೆ ಅಪಾಯ ತಪ್ಪಿದಲ್ಲ.. ಅವನು ಕಾಮುಕನಾಗಿರದಿದ್ದರೂ ನಿಮ್ಮ ಮೇಲೆ ಎರಗಬಹುದು...ಅಲ್ಲಿ ಅವನಿಗೆ ನಿಮಗೆ ಬುದ್ಧಿ ಕಲಿಸಬೇಕು ಎಂಬ ಹವಣಿಕೆ. ಯಾಕೆಂದರೆ ಹೆಣ್ಣಿಗೆ ಮಾನ ಮುಖ್ಯ..ಅದೇ ಪುರುಷನು ನಿಮ್ಮನ್ನು ಸೋಲಿಸಲು ಇರುವ ಮುಖ್ಯ ಆಯುಧ! ಅನೇಕ ಅತ್ಯಾಚಾರಗಳಿಗೆ ಈ "ಅಹಂ"ವೇ ಮುಖ್ಯ ಕಾರಣವಾಗಿದೆ.
Subscribe to:
Post Comments (Atom)
1 comment:
ದೆಹಲಿ ಪ್ರಕರಣ ಆದಾಗಿನಿಂದ ತಮ್ಮ ತಂದೆ ಅಣ್ಣ ತಮ್ಮಂದಿರನ್ನು ಮರೆತು ಪುರುಷರೆಲ್ಲರೂ ರೇಪಿಸ್ಟುಗಳು ಎಂಬಂತೆ ಅರಚಾಡುತ್ತಿರುವ ಮಹಿಳಾಮಣಿಗಳೇನಕರ ನಡುವೆ ನಿಜವಾಗಿಯೂ ರೇಪಿಗೆ ಹಲವು ಬಾರಿ ಏನು ಕಾರಣವಾಗಬಹುದು ಅಂತ ತಿಳಿದುಕೊಂಡಿರುವ sensible ಮಹಿಳೆಯರು ಇದ್ದಾರೆ ಎಂಬುದೇ ಸಮಾಧಾನದ ಸಂಗತಿ. ಧನ್ಯವಾದಗಳು.
Post a Comment