ಅಂತರಂಗದ ತುಂಬಾ ನೀನೇ
ವ್ಯಾಪಿಸಿದೆಯಲ್ಲೋ ನನ್ನೀಶ!
ನಿನ್ನ ಪಾಡಿ ನಲಿಯುವ ಸುಖವ
ಮತ್ಯಾವುದರಲ್ಲೂ ನಾ ಕಾಣೆ, ಸರ್ವೇಶ!
ನಿನ್ನೊಡನೆ ಅಷ್ಟಿಷ್ಟು, ಇಷ್ಟಿಷ್ಟು
ಆಡಿದರೂ ಉಳಿಯುವುದಿಷ್ಟೋ ಶೇಷ!
ತಪ್ಪು ಒಪ್ಪುಗಳ ಹಂಗಿಲ್ಲೆನಗೆ
ಪಾಲಿಸುತ್ತಿರುವೆ ನಿನ್ನದೇ ಆದೇಶ!
ಆ ದಿವ್ಯ ಚರಣ ಸ್ಪರ್ಶಿಸುವಾಸೆ
ಪೂರೈಸುವೆಯಾ, ಶೈಲೇಶ!
3 comments:
ಒಳ್ಳೆ ಹಾಡಿಕೊಳ್ಳಬಲ್ಲ ಕವನ ಕೊಟ್ಟಿದ್ದೀರಿ.
ನಿಮ್ಮ ಭಕ್ತಿಯ ಮುಂದೆ ನಾವೆಲ್ಲ ಲವಲೇಷ!!!!
ಬದರಿ...ಶೀಲಾವ್ರು...ಲವ್-ಈಶಾ ಅಂದ್ರೆ ನೀವು ಲವ್-ಲೇಸಾ ಅಂತೀರಲ್ಲಾ.... ಚನ್ನಾಗಿದೆ ಶೀಲಾ ಕವನ ...
ಒಬ್ಬರು ಲವ-ಲೇಷ ಅಂದ್ರೆ ಮತ್ತೊಬ್ಬರು ಲವ್- ಲೇಸಾ ಅಂತೀರಲ್ಲ....ನಾನೇನ್ಮಾಡಬೇಕು???
ಒಬ್ಬರು ಭಕ್ತಿ ನೋಡಿದ್ರೆ ಮತ್ತೊಬ್ಬರು ಲವ್ ನೋಡಿಬಿಟ್ರು...ಅಂತೂ ಬರೆದದ್ದು ಸಾರ್ಥಕ ಆಯ್ತಪ್ಪಾ!!!
:-)))))
Post a Comment