ಮತ್ತೇನಿದೆ ಈ ಜಗದಲಿ, ನಿನ್ನ
ಆ ಚೆಲುವಾದ ಕಣ್ಗಳ ಹೊರತು!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!
ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ
ನನ್ನೀ ಜೀವನ್ಮರಣ ಅನ್ನುವೆ
ಮತ್ತೇನಿದೆ ಈ ಜಗದಲಿ, ನಿನ್ನ
ಆ ಚೆಲುವಾದ ಕಣ್ಗಳ ಹೊರತು||
ಕಣ್ಣೆವೆಗಳ ಹಾದಿಯಲಿ ತೋರಣವಿರಲಿ
ನಗೆಮೊಗ ತೋರುವ ವಸಂತನಿರಲಿ!
ಕಾಣುತಿರುವೆ ನಿನ್ನೀ ಕಣ್ಣೊಳು,
ಕನಸುಗಳ ನಗರಿಯ ನೆಲೆಯನು!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!
ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ
ನನ್ನೀ ಜೀವನ್ಮರಣ ಅನ್ನುವೆ
ಮತ್ತೇನಿದೆ ಈ ಜಗದಲಿ, ನಿನ್ನ
ಆ ಚೆಲುವಾದ ಕಣ್ಗಳ ಹೊರತು||
ತೋರುತಿವೆ ನಿನ್ನೀ ಕಣ್ಗಳು,
ಮುಂಬರುವ ದಿನಗಳ ಛಾಯೆಯನು!
ಬರೆದಿದೆ ಈ ಪ್ರೇಮದ ಕಾಡಿಗೆಯು,
ನನ್ನ ಮುಂದಿನ ದಿನಗಳ ನಡೆಯನು!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!
ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ
ನನ್ನೀ ಜೀವನ್ಮರಣ ಅನ್ನುವೆ
ಮತ್ತೇನಿದೆ ಈ ಜಗದಲಿ, ನಿನ್ನ
ಆ ಚೆಲುವಾದ ಕಣ್ಗಳ ಹೊರತು||
ಹೇಗೋ, ಏನೋ ಇವುಗಳ ಛಾಯೆಯು
ನನ್ನೆದೆಯಿಂದ ಇನ್ನೆಂದೂ ದೂರವಾಗಲಾರವು!
ಇವುಗಳ ಹೊರತು ನಾನೆನನ್ನು ಕಾಣಲಾರೆ
ಮತ್ತೇನನ್ನು ನೋಡಲು ಬಯಸಲಾರೆ!
ಬೆಳಕು ಬೆಳಗುವುದು, ನೀ ಕಣ್ತೆರೆಯಲು!
ಕತ್ತಲು ಕವಿಯುವುದು, ನೀ ಕಣ್ಮುಚ್ಚಲು!
ನಿನ್ನೀ ಕಣ್ಣೆವೆಗಳನ್ನೇ ಆಶ್ರಯಿಸಿವೆ
ನನ್ನೀ ಜೀವನ್ಮರಣ ಅನ್ನುವೆ
ನನ್ನೀ ಜೀವನ್ಮರಣ ಅನ್ನುವೆ
ಮತ್ತೇನಿದೆ ಈ ಜಗದಲಿ, ನಿನ್ನ
ಆ ಚೆಲುವಾದ ಕಣ್ಗಳ ಹೊರತು||
ಭಾವಾನುವಾದ- ಚಿರಾಗ್ ಚಿತ್ರದ ಮೊಹಮ್ಮದ್ ರಫಿ ಮತ್ತು ಲತಾ ಮಂಗೇಶ್ಕರ ಹಾಡಿದ ತೆರಿ ಆಂಖೋಕೆ ಸಿವಾ ಇಸ್ ದುನಿಯಾ ಮೈ ರಖ್ಖಾ ಕ್ಯಾ ಹೈ....
No comments:
Post a Comment