ಮಗಳ ಘನಕಾರ್ಯ....
ಅದೇನೋ ನಿನ್ನೆ ಬೆಳಿಗ್ಗೆಯಿಂದ ಬಿಡಿಸುತ್ತಾ ಕೂತಿದ್ದಾಳೆ ನನ್ನ ಮಗಳು...ಅಪರೂಪವಾದ ಈ ನೋಟ....ಕೇಳಿದೆ ಮಗಳ ಬಳಿ....ಹುಂ, ಏನು ಚಿತ್ರ ಗಿತ್ರ...ಏನು ವಿಶೇಷ???? ನಿಧಾನವಾಗಿ ಬಾಯಿಬಿಟ್ಟಳು, ತನ್ನ ಸ್ನೇಹಿತನ ಜಾಲದಲ್ಲಿ ಹಾಕಲು ಚಿತ್ರ ಮಾಡ್ತಿದ್ದೇನೆ..ಕೇಳಿದ ತಪ್ಪಿಗೆ ಒಂದಿಷ್ಟು ಸಲಹೆನೂ ಉಚಿತವಾಗಿ ಕೊಡಬೇಕಾಯಿತು. ಸ್ಕಾನಿಂಗ್ ಕೆಲಸನೂ ಅಮ್ಮನಿಗೇ ಅಂಟಿಸಿದಳು...ಜೊತೆಗೆ ವಾರ್ನಿಂಗ್- ಫೇಸ್ ಬುಕ್ಕಿನಲ್ಲಿ ಹಾಕಿದರೆ ನೋಡು!!! ಹೋಗೆ ನಿಂಗೆ ಹೆದರ್ತೇನೆಯಾ ...ಆದರೂ ಹಾಕಲಿಕ್ಕೆ ಹೋಗಲಿಲ್ಲ...ನನ್ನ ಬ್ಲಾಗ್ ಇದೆಯಲ್ಲವಾ...ಅದರಲ್ಲಿ ಹಾಕ್ತೇನೆ...{ ನನ್ನ ಮಕ್ಕಳು ಏನು ಮಾಡಿದರು ನನಗದು ಘನಕಾರ್ಯನೇ...:-)}
ಅಂದ ಹಾಗೆ ಈ Beat Beans....ಈ ಲೋಗೋ ಮಾಡಿದ್ದು ಕೂಡ ನನ್ನ ಮಗ ಪಿಕಾಸು!
ಇಲ್ಲಿ ವಿಶೇಷವೇನೆಂದರೆ ನೋಡಲು ಚಿತ್ರ ಕಡ್ಡಿ ಮನುಷ್ಯರಂತೆ ಕಂಡರೂ..ಇದೆಲ್ಲಾ ಕಾಪಿ ಮಾಡಿದಲ್ಲ..ಅವಳದೇ ಐಡಿಯಾ!!! ಅದು ನನಗೆ ಬಹಳ ಖುಶಿ ಕೊಟ್ಟಿತು.
4 comments:
ಬಹಳ ಚಂದ ಉಂಟು ಮನ್ನು,thumbs up
ಮಕ್ಕಳು ಮಾಡಿದ್ದೆಲ್ಲವೂ ಅಮ್ಮನಿಗಿಷ್ಟ
ಅಕ್ಕ ಬರೆದದ್ದೆಲ್ಲವೂ ತಮ್ಮನಿಗಿಷ್ಟ
ತಮ್ಮನಿಗಿಷ್ಟ ಆಯ್ತಂತ ತಿಳಿದು
ಅಕ್ಕನಿಗಾಯ್ತು ಬಲು ಖುಷಿ!
:-)
ಚೆನ್ನಾಗಿದೆ. ನಿಮ್ಮ ಕಲೆ ಮಕ್ಕಳಿಗೂ ಬಂದಿದೆ ಅಂತ ಈ ಚಿತ್ರಗಳು ಹೇಳುತ್ತಿವೆ.
ವಿಕಾಸ್,:-)
Post a Comment