“ಕುಹೂ” ಕೋಗಿಲೆಯ ನಲ್ಮೆಯ ಕರೆಯಲಿ..
ನವಿಲುಗರಿಯ ಕಣ್ಣಿನ ಹಸಿರು ನೀಲಿ ಚೆಲುವಿನಲಿ..
“ಅಂಬಾ” ಕರೆಯ ವಾತ್ಸಲ್ಯದಲಿ..
ಮುಂಜಾವು-ಮುಸ್ಸಂಜೆಯ ಚಿತ್ತಾರದ ಮೋಹದಲಿ..
ಬಿದಿಗೆ ಚಂದಿರನ ಮಾದಕತೆಯಲಿ..
ಮುಂಗಾರು ವರ್ಷದ ನಾಟ್ಯದಲಿ..
ಶಿಶಿರನ ಬಿಗಿಯಪ್ಪುಗೆಯ ರೋಮಾಂಚನದಲಿ..
ವಸಂತ ಮತ್ತೇರಿಸುವ ಪುಷ್ಪ ಘಮದಲಿ..
ವೈಶಾಖದ ದಿನಕರ ಬಿರುನೋಟದಲಿ..
ಬೀಸುವ ಮರುತನ ಝೇಂಕಾರದಲಿ..
ಶರಧಿಯ ಶಂಖ ನಾದದ ಓಂಕಾರದಲಿ..
ಹಸುರು ಹುಲ್ಲಿನ ಮೇಲಿನ ತಣ್ಣಗಿನ ನಡಿಗೆಯಲಿ..
ಹಬ್ಬ-ಹರಿದಿನಗಳ ಆಚರಣೆಯ ಸಂಭ್ರಮದಲಿ..
ನೆಂಟ-ಮಿತ್ರರ ಒಡನಾಟದ ಸವಿಯಲಿ..
ಮಾಧವ, ನಿನ್ನಿರುವಿನ ಅಂಕಿತ ಎಲ್ಲೆಲ್ಲೂ..
ಒಲವಿನ ಮುರಳಿಯ ನಿನಾದ ನನ್ನಲ್ಲೂ..
No comments:
Post a Comment