ಚಿನ್ನದ ಬೆಲೆ ಗಗನಕ್ಕೇರುತ್ತಿದೆ!
ಓದುತ್ತಿದ್ದೆ ಇಂದು ಬೆಳಿಗ್ಗೆ
ಕೇಳಿದ ಅವನು ಬಂದು
ಕುಳಿತು ಬಿಡುವುದೇ, ಅಟ್ಟವೇರಿ
ಅಟ್ಟಹಾಸ ತೋರುವುದೇ!
ಅಚ್ಚರಿಯಾಯ್ತೆನಗೆ, ಪ್ರಶ್ನಾರ್ಥಕ
ನೋಟವನ್ನೆಸೆದೆ ಆತನೆಡೆಗೆ!
ಆತನೆಂದ; ಅಲ್ಲ, ನೀ ನನ್ನ
ಕರೆಯುವುದೇ ಚಿನ್ನ, ಬಂಗಾರವೆಂದಲ್ಲ!
ಅದಕ್ಕೆ ಸಿಗದೆ ನಿನ್ನ ಕೈಗೂ
ನೋಡು ಮೇಲೇರಿದೆ!
ಅಯ್ಯೋ ಮಂಕೆ, ಅಂದೆ ನಾನು
ಇಲ್ಲವೇನೂ ನನಗೆ ಶಂಕೆ!
ಮಾರುವೆನೆಂದರು ನಿನ್ನನ್ನು
ಇರುವರೇ ಕೊಳ್ಳುವವರು!
೬೦ರ ಮಾಡೆಲು ನೀನು,
ಬೇಡೆನ್ನುವರೇನೋ ಬಿಟ್ಟಿ ಕೊಡಲು!
ತೋರುತಿಹೆಯಲ್ಲವೋ ವೃದ್ಧಾಪ್ಯದ ಚಿನ್ಹೆ
ನಿನ್ನ ಮೂಸುವವರಾರಿಲ್ಲವೋ!
ನನ್ನ ಹೊರತು ನಿನಗಿಲ್ಲ
ಮತ್ತ್ಯಾರು ಇಳಿ ಎಲ್ಲ ಮರೆತು!
ಸೂರೆ ಆಯ್ತೆಂಬಂತೆ ಇಳಿದನವನು
ಹಾಕಿ ಹ್ಯಾಪೆ ಮೋರೆ!
8 comments:
hahaha, bombat :-)
kiran...:-)
ಹ್ಹ ಹ್ಹ ಹ್ಹಾ..........
ಪಾಪ ಕಣ್ರೀ,
ಅದರೂ ಹುಣಸೆ ಮರ ಮುಪ್ಪಾದರೂ ಹುಳಿ.........????
ಚನ್ನಾಗಿದೆ,
Thanks Praveen,:)
ಹತ್ತಿದವನ ಹತ್ತಿಯೇ ಇರಲು ಬಿಟ್ಟು ಹತ್ತಿಯ ಆಸೆಯ ಬಿಟ್ಟು ಚಿನ್ನಕೇ ಜೋತು ಬಿದ್ರೆ ಕಷ್ತ ಅಂತ ಹತ್ತಿದವರು ಇಳಿದರು...ಹಹಹಹ ಶೀಲಾವ್ರೆ...ತುಂಬಾ ಮಜ ಸಿಗ್ತುರೀ ನಿಮ್ಮ ಕವನ...ಹಹಹಹ
ಹಾಗಲ್ಲ ಆಜಾದ್ ಭಾಯಿ, ಚಿನ್ನದ ಬೆಲೆ ಹೆಚ್ಚಿದೆ ಎಂದರಿತಾಗ ತನ್ನನ್ನು ಮಾರುತ್ತಾಳೋ ಅಂತ ಭ್ರಮೆಯಿಂದ ಮೇಲೆ ಹತ್ತಿದವನಿಗೆ ನಿಜ ಸ್ಥಿತಿ ಅರುಹಿದಾಗ ಮುಖ ಸಪ್ಪೆಯಾಗದೇ ಏನಾದಿತು. { ನಿಜ ಚಿನ್ನಕ್ಕೆ ಜೋತು ಬೀಳುವುದು ಸಾಧ್ಯವಿಲ್ಲವಲ್ಲ. ನಮ್ಮ ಮಕ್ಕಳೇ ನಮ್ಮ ಚಿನ್ನ..:-) }! ಹೇಗಾದರೂ ಇರಲಿ, ನಿಮಗೆ ಮಜ ಸಿಕ್ಕಿತಲ್ಲಾ..ಅಂದ ಹಾಗೆ ತೆರೆದ ಮನದ ಪುಟಗಳಿಗೆ ಹಾರ್ಧಿಕ ಸ್ವಾಗತ ಆಜಾದ್ ಭಾಯಿ!
Ha Ha ha
ಗೋವಿಂದ್ ರಾವ್ ಸರ್,
ತೆರೆದ ಮನದ ಪುಟಗಳಿಗೆ ಇಣುಕಿದ ತಮ್ಮ ಮೊಗದಲ್ಲಿ ನಗು ಮೂಡಿದನ್ನು ನೋಡಿ ಖುಶಿಯಾಯಿತು. ಮುಂದೆಯೂ ತಮ್ಮ ಮಾರ್ಗದರ್ಶನವಿರಲಿ ನನ್ನ ಪುಟಗಳಿಗೆ!
Post a Comment