ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 May, 2012

ಮಿನಿ ಕತೆಗಳು!



      ಬೆಳಿಗ್ಗೆ ಬೆಳಿಗ್ಗೆ ಅವನ ಪಿರಿಪಿರಿ ಕೇಳಿ ಹೊರಬಂದು ನೋಡಿದರೆ ಸ್ಕೂಟರ್ ಮೇಲೆ ಇರುವ ನಾಲ್ಕು ಗೆರೆಗಳಿಗಾಗಿ ಬೊಬ್ಬೆ... ನನ್ನನ್ನು ನೋಡಿ, "ಎಲ್ಲಾ ನಿನ್ನಿಂದಲೇ... ಅವುಗಳನ್ನು ಅಟ್ಟಕ್ಕೇರಿಸಿ ಇಟ್ಟಿದಿಯಾ. ನೋಡು, ನಿನ್ನ ಬೆಕ್ಕು ಹೇಗೆ ಸೀಟ್  ಹರಿದಿದೆ." ಅಂದ. ಅದರ ದಿನ ಸರಿಯಿಲ್ಲ ಕಾಣುತ್ತೆ.. ಬಂತು ನನ್ನ ಕಾಳು ಅಲ್ಲಿಗೆ ಆಗಲೇ. ದೊಡ್ಡ ಕಲ್ಲೊಂದನ್ನು ತೆಗೆದು ಗುರಿಯಿಟ್ಟು ಬೀಸಿದ. ಕಾಳು ಈ ಮೊದಲೇ ಒಂದೆರಡು ಸಲ ಪೆಟ್ಟಿನ ರುಚಿ ನೋಡಿತ್ತು. ಅದು ಓಡಿ ಹೋಗುವಷ್ಟರಲ್ಲಿ ಕಲ್ಲು ಗುರಿ ತಲುಪಿತ್ತು... ನನ್ನ ಕಣ್ಣಲ್ಲಿ ನೀರು ಚಿಮ್ಮಿತ್ತು!

 ಮರುದಿನ ಬೆಳಿಗ್ಗೆ ಇನ್ನೂ ದೊಡ್ಡ ದೊಂಡೆ... ಇಡೀ ಸೀಟೇ ಹರಿದು ಹೋಗಿಬಿಟ್ಟಿದೆ. ಇನ್ನು ೩೦೦ ರೂಪಾಯಿ ಖೋತಾ... ಅಂತ ಕೇಳಿತು! ನಾನು ಹೊರಗೆ ಹೋಗ್ಲೇ ಇಲ್ಲ.. ನನ್ನ ಮುಖದಲ್ಲಿ ಸುಂದರ ಮಂದಹಾಸ!

                      ***********************

       ಆ ನಟಿ ನಮ್ಮವಳಲ್ಲ. ಅಂದರೆ ನಮ್ಮ ದೇಶದವಳಲ್ಲ. ಆದರೂ ನಮ್ಮವರಿಗೆ ಅವಳೆಂದರೆ ತುಂಬಾ ಅಭಿಮಾನ. ಯಾಕೆಂದರೆ ಅವಳ ಖರ್ಚು ತುಂಬಾ ಕಮ್ಮಿ. (ಬಟ್ಟೆಯ ಖರ್ಚು ಇಲ್ಲವೆಂದೇ ಹೇಳಬಹುದು) ಅಲ್ಲದೆ ನಿರ್ದೇಶಕ ಮತ್ತು ನಿರ್ಮಾಕಪರಿಗೆ ಬೇಕಾದ ಹಾಗೆ ನಟಿಸುತ್ತಾಳೆ. ತುಂಬಾ ಟೇಕ್ ಕೂಡ ತಕ್ಕೊಳಲ್ಲ. ಅಂದ ಮೇಲೆ ರೀಲು ಕಮ್ಮಿನೇ ಉಪಯೋಗಿಸಬಹುದಲ್ಲವಾ.  ಮತ್ತೆ ನಮ್ಮ ಜನರಿಗೂ ಆಕೆಯೆಂದರೆ ತುಂಬಾ ಅಭಿಮಾನ. ಇಷ್ಟು ಸಹಕಾರ ಕೊಡುವ  ನಟೀಮಣಿಯರು ನಮ್ಮಲ್ಲಿ ಇದ್ದಾರ? 
       ಅಸಲು ಕತೆ ಈಗ ಪ್ರಾರಂಭ. ಅಂತ್ಯ ಮಾತ್ರ ಇಲ್ಲ ಇದಕ್ಕೆ..ನೀವೇ ಕಲ್ಪಿಸಿಕೊಳ್ಳಿ. ಇಲ್ಲ ಬರೀರಿ! ಆ ನಟೀಮಣಿ ನಮ್ಮ ಗಾಂಧಿನಗರಕ್ಕೂ ಪ್ರವೇಶಿದ್ದಾಳೆ.  ಅಲ್ಲಿ ಅವಳಿಗೆ ಸೀರೆ, ತಾಂಬೂಲ ಕೊಟ್ಟು ಸ್ವಾಗತಿಸಲಾಗಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭ!........ಮುಂದುವರಿಯುವುದು ..
ಯಾರು ಬೇಕಾದರೂ ಕತೆಯನ್ನು ಮುಂದುವರಿಸಬಹುದು...

ನನ್ನ ತಮ್ಮ ಕಿರಣ್ ಮುಂದುವರಿಸಿದ್ದಾನೆ ಕತೆ ...ಓದಿ ನೋಡಿ...

 ........ಹೀಗೆ ನಾಲ್ಕು ದಿನಗಳು ಕಳೆದವು...ನಟಿಮಣಿ ಅಲ್ಪಸ್ವಲ್ಪ ಕನ್ನಡವನ್ನೂ ಕಲಿತಳು, ಬೇಡದೆ ಇರೋ wrong reasons ಗೆಲ್ಲ ಸುದ್ದಿಯಾದಳು, ಸುದ್ದಿಯೇ ಅವಳಾದಳು. ಕನ್ನಡವನ್ನ ಗುತ್ತಿಗೆ ತೆಗೆದು ಕೊಂಡಿರೋ ಕೆಲವು ಸಂಘಗಳಿಂದ ರಾಜ್ಯೋಸ್ಥವ (?) ಕ್ಕೆ ಭಾಷಣ ಮಾಡಲು ಆಹ್ವಾನ ಕೂಡ ಬಂತು, ಅಲ್ಪ ಕಾಲದಲ್ಲೇ ಕನ್ನಡ ಕಲಿತಿರುವ ಇವರು ಗ್ರೇಟ್, ಮುಂದಿನ ಜನ್ಮದಲ್ಲಿ ಈ ಮಣ್ಣಿನಲ್ಲೇ ಹುಟ್ಟಲಿ ಎಂದು ಯಾರೋ ರಿಯಲ್ ಎಸ್ಟೇಟ್ ಧಣಿಯೊಬ್ಬ ಉಲಿದ, ಆಕೆ, ಕನ್ನಡ ಕಲಿತದ್ದು work out ಆಯಿತೆಂದು ತುಟಿಯಂಚಿನಲ್ಲಿ ನಗುತ್ತಿದ್ದದ್ದನ್ನು ಯಾರೂ ಗಮನಿಸಲೇ ಇಲ್ಲ.

6 comments:

ಮನದಾಳದಿಂದ............ said...

Paapa Yajmanru......:(

Badarinath Palavalli said...

ಮೊದಲ ಕಥೆಯಲ್ಲಿ ಬೆಕ್ಕು ಬಹುಶಃ ಪುರುಷ ವಿರೋಧಿ ಇದ್ದೀತು!!!

ಎರಡನೇ ಕಥೆಯಲ್ಲಿ ಆಮದು ನಟಿಯ ಪ್ರವರ ಓದಿ, ಯಾರಪ್ಪಾ ಈಕೆ ಎನ್ನುವ ಕುತೂಹಲವಾಯಿತು. ಹುಡುಕಿ ನೋಡುತ್ತೇನೆ.

Anonymous said...

ಹೀಗೆ ನಾಲ್ಕು ದಿನಗಳು ಕಳೆದವು...ನಟಿಮಣಿ ಅಲ್ಪಸ್ವಲ್ಪ ಕನ್ನಡವನ್ನೂ ಕಲಿತಳು, ಬೇಡದೆ ಇರೋ wrong reasons ಗೆಲ್ಲ ಸುದ್ದಿಯಾದಳು, ಸುದ್ದಿಯೇ ಅವಳಾದಳು.
ಕನ್ನಡವನ್ನ ಗುತ್ತಿಗೆ ತೆಗೆದು ಕೊಂಡಿರೋ ಕೆಲವು ಸಂಘಗಳಿಂದ ರಾಜ್ಯೋಸ್ಥವ (?) ಕ್ಕೆ ಭಾಷಣ ಮಾಡಲು ಆಹ್ವಾನ ಕೂಡ ಬಂತು, ಅಲ್ಪ ಕಾಲದಲ್ಲೇ ಕನ್ನಡ ಕಲಿತಿರುವ ಇವರು ಗ್ರೇಟ್, ಮುಂದಿನ ಜನ್ಮದಲ್ಲಿ ಈ ಮಣ್ಣಿನಲ್ಲೇ ಹುಟ್ಟಲಿ ಎಂದು ಯಾರೋ ರಿಯಲ್ ಎಸ್ಟೇಟ್ ಧಣಿಯೊಬ್ಬ ಉಲಿದ,
ಆಕೆ, ಕನ್ನಡ ಕಲಿತದ್ದು work out ಆಯಿತೆಂದು ತುಟಿಯಂಚಿನಲ್ಲಿ ನಗುತ್ತಿದ್ದದ್ದನ್ನು ಯಾರೂ ಗಮನಿಸಲೇ ಇಲ್ಲ....ಮುಂದುವರೆಯುವುದು

Sheela Nayak said...

ಬದರಿ, ಅವಳು ವೀಣಾ ಮಲ್ಲಿಕ್..ನಿನ್ನೆ ಪತ್ರಿಕೆಯಲ್ಲಿ ಓದಿದೆ..ಅವಳನ್ನು ಸೀರೆ ತಾಂಬೂಲದಿಂದ ಸ್ವಾಗತಿಸಲಾಯಿತೆಂದು!
ಅರೇ ಅದು ಪುರುಷ ವಿರೋಧಿ ಅಲ್ರೀ..ಪಾಪ ಅದು ಸುಮ್ಮನೆ ಹಾಯಾಗಿ ಸೀಟ್ ಮೇಲೆ ಮಲ್ಗತ್ತಿರ್ತಿತ್ತು...ಒಂದೆರಡು ಗೆರೆ ಬರುತ್ತಪ್ಪಾ..ಅದೇನೆ ದೊಡ್ಡ ಸಂಗತಿಯಲ್ಲವಲ್ಲ..:-)

ಕಿರಣ್, ನೀನು ಯಾವ ನಟೀಮಣಿ ಕುರಿತು ಹೇಳ್ತಿ ಅಂತ ಗೊತ್ತಾಗ್ಲಿಲ್ಲ..ನಮ್ಮಲ್ಲಿ ಆಮದಾಗುವ ನಟೀಮಣಿ ತುಂಬಾ ಅಲ್ಲ...ಹಾಗಾಗಿ ಹೆಸರು ನೆನಪಿಡೋದು ಕಷ್ಟ ಕಣೋ...:-)

ಪ್ರವೀಣ್, ನಿಜವಾಗಿ ನಡೆದದ್ದೇನೆಂದು ಗೊತ್ತಾಯ್ತಾ? ಯಾರು ಹರಿದದ್ದು ಆ ಸೀಟ್ ಅಂತ?:-)

Sheela Nayak said...

ಕಿರಣ್, ಕತೆ ಮಾತ್ರ ಚೆನ್ನಾಗಿ ಮುಂದುವರಿಸಿದ್ದಿ..ಕುಶ್ಶಿಯಾಯ್ತು...ಓದಿ..

Anonymous said...

ಮಿನಿಕತೆಗಳು ಚೆನ್ನಾಗಿದೆ ... ಓದುಗರನ್ನು ಹಿಡಿದಿಟ್ಟುಕೊಳ್ಳುವ ತಾಕತ್ತಿದೆ ನಿಮ್ಮ ಕತೆಗಳಿಗೆ

ಹುಸೇನ್(nenapinasanchi.wordpress.com)

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...