ಬೆಂಗಾಡಿನಲ್ಲಿ ಅಲೆದಾಟ!
ನೀರಡಿಕೆಯ ಕಾಟ!
ಒಯಸಿಸ್ನ ನೋಟ!
ಮನಕೆ ತಂದಿತು ಮಾಟ!
****************
ಪ್ರೀತಿ ಮತ್ತೇನನ್ನು ಬೇಡುವುದಿಲ್ಲ
ಪ್ರೀತಿಯ ಹೊರತು,
ಮತ್ತೇನಲ್ಲದಿದ್ದರೂ ಒಂದಿಷ್ಟು ನಗು,
ಒಂದಿಷ್ಟು ಒಲವಿನ ಮಾತು,
ಮತ್ತಿಷ್ಟು ಅಪ್ಪುಗೆ,
ಸಾಕಷ್ಟು ಮುತ್ತು,
ಸಾಕಪ್ಪ! ಇವುಗಳ ಮುಂದೆ
ಅಷ್ಟೈಶ್ವರ್ಯವೂ ಕಸಕೆ ಸಮಾನ!
********************
ಈ ಮನಸೋ
ಸಂಶಯದ ಗೂಡು,
ಸಂಶಯದ ಗೂಡು,
ಹೃದಯದಲ್ಲಾದರೋ
ಸಂತಸದ ಹಾಡು,
ಸಂತಸದ ಹಾಡು,
ಇವೆರಡರ ಮಧ್ಯೆ
ಹೇಗಿರಬಹುದು ನನ್ನ ಪಾಡು?
ಹೇಗಿರಬಹುದು ನನ್ನ ಪಾಡು?
******************
ಅಧಿಕಾರದ ಲಾಲಸೆ,
ಹಣದ ಅಭಿಲಾಷೆ,
ಇನ್ನಿಲ್ಲದ ದುರಾಶೆ,
ಎಲ್ಲಾ ಕುಲಗೆಟ್ಟು ಹೋಗಿದೆ.
ರಾಡಿಯಾಗಿದೆ ಬಾಳು.
****************
ಬಳಿ ಸಾರುವ ದಿನಕರನ ಮೋಹದ
ನೋಟಕ್ಕೆ ಬಿಸಿಯೇರುವಳು ಇಳೆ!
ತಣ್ಣಗಾಗಿಸಲು ಅವಳ,
ಸುರಿಸುವನು ಅವನು ಮಳೆ!
ನೀನೇನು ಕಡಿಮೆಯಿಲ್ಲ ಬಿಡು,
ದೂರವಿದ್ದೇ ಬಿಸಿಯೇರಿಸುವೆ!
ಬಳಿಸಾರಿ ಮುತ್ತಿನ ಮಳೆ ಕೊಡು,
ಆಗುವೆ ಆಗ ನಾ ಸಂತೃಪ್ತಳು!
****************
****************
ನನ್ನವನ ನಗುವೆಂದೂ ಮಾಸದಿರಲಿ;
ಸದಾ ನಿನ್ನಯ ಅನುಗ್ರಹವಿರಲಿ;
ನನ್ನನ್ನಾಲಿಸುವೆ ಎಂಬ ಬಯೆಕೆಯಲಿ;
ನಾನಾಗ್ರಹಿಸುವೆ ನನ್ನೊಡೆಯನಲಿ!
*****************
ಮಾಸದಿರಲಿ ನಗುವೆಂದೂ ನನ್ನ;
ಅನುಗ್ರಹವಿರಲಿ ಸದಾ ನಿನ್ನ;
ಆಲಿಸು ಬಯಕೆಯ ಎನ್ನ;
ಎಂದಾಗ್ರಹಿಸುವೆ ಒಡೆಯನನ್ನ!
*******************
5 comments:
ಹಹಹಹ ಶೀಲಾ, ತುಂಬಾ ಚನ್ನಾಗಿವೆ ಗುಟುಕುಗಳು...ಅದರಲ್ಲೂ ಅಷ್ಟೈಶ್ವರ್ಯ...ಯಾರಿಗೆ ಬೇಡ ಹೇಳಿ...
Thank you Ajad!
Super 😁
Nice ri
Nice ri
Post a Comment