ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 May, 2012

ಕ..ಕಾ..ಕಿ..ಗುಣಿತದ ಪದ್ಯ!



ಹಿಂದೆ ಸುಧಾ ಪುಸ್ತಕದಲ್ಲಿ ಓದಿದ ಕಾಗುಣಿತದ ಪದ್ಯ ನನ್ನ ಗಮನ ಸೆಳೆದಿತ್ತು. ಡ್ರಾಫ್ಟನಲ್ಲಿ ಉಳಿಸಿಟ್ಟಿದ್ದೆ, ಮರೆತೂ ಬಿಟ್ಟಿದ್ದೆ. ಇಂದು ಏನೋ ಹುಡುಕಲು ಹೋಗಿ ಈ ಪದ್ಯ ಕಣ್ಣಿಗೆ ಕಾಣಿಸಿತು. ಪಬ್ಲಿಶ್ ಮಾಡಿಬಿಡೋಣ ಎಂದು ಹಾಕುತ್ತಿದ್ದೇನೆ.  ಸಹ ಬ್ಲಾಗಿಗರು ಓದಿ ಮತ್ತೊಮ್ಮೆ ತಮ್ಮ ತಮ್ಮ ಸಿಹಿ ಬಾಲ್ಯದ ನೆನಪು ಮಾಡಿ ಮನಕೆ ಮುದ ನೀಡಲಿ ಎಂದು!


ಕಪ್ಪಿನ ಬಣ್ಣದ ಹಕ್ಕಿಯು ಅಹ!ಹಾ!
ಕಾ ಕಾ ಎನ್ನುತ ಹಾರುತಿದೆ.
ಕಿಟ್ಟನ ಮನೆಯ ಅಂಗಳದಲ್ಲಿಹ
ಕೀಟಗಳನದು ತಿನ್ನುತಿದೆ.
ಕುಲವೇ ಕಲಿತಹ ಹಿರಿಗುಣವೊಂದಿದೆ
ಕೂಟವ ಕಟ್ಟುವ ಓ ಬುದ್ಧಿ.
ಕೆಲಸದಿ ಶ್ರದ್ಧಾ ಭಕ್ತಿಯು ತುಂಬಿದೆ
ಕೇಳಿರಿ ನಿಮಗಿದು ಸದ್ಬುದ್ಧಿ.
ಕೈಗದು ಬಾರದು ದಾಸ್ಯವನೊಪ್ಪದು
ಕೊಟ್ಟೇ ತಿಂಬುದ ಯೋಚಿಸಿರಿ.
ಕೋಗಿಲೆಯಂಥಾ ಮೈ ಬಣ್ಣದ ಅದು
ಕೌ ಎನ್ನಲು ಕಲ್ಲೆಸಯದಿರಿ.
ಕಂಠವು ಕರ್ಕಶವಾದರೂ ಕಾಗೆಯು
ಕಃಫಿಕವಲ್ಲೈ ಹಳೆಯದಿರಿ.

5 comments:

kiran said...

ಮಜಾ ಏನ್ ಅಂದ್ರೆ ..!!! ಕಃಫಿಕವಲ್ಲೈ ಪದದ ಅರ್ಥ ಹುಡ್ಕೋಕೆ google ನಲ್ಲಿ ಹಾಕಿದ್ರೆ, ಈ ಪದ್ಯ ನೆ high ranking ನಲ್ಲಿರೋದೇ..!!! :-)

Sheela Nayak said...

ಮತ್ತೆ, ಏನಂತ ತಿಳಿಕೊಂಡಿದಿಯಾ ನನ್ನ! ಹೋಗಲಿ ಬಿಡು...ಅರ್ಥ ಸಿಕ್ಕಿತಾ?
:-)

Sheela Nayak said...

ಸಂಸ್ಕೃತದಲ್ಲಿ ಕಃ ಅಂದ್ರೆ ಕಶ್ಚಿತ್ ಅನ್ನುವ ಅರ್ಥ, ಪಿಕ ಅಂದ್ರೆ ಕೋಗಿಲೆ. ಒಟ್ಟುಗೂಡಿಸಿದರೆ, "ಕಾಗೆ ಸುಮ್ಮನೆ ಹಾಡುವ ಕೋಗಿಲೆಯ ಹಾಗಲ್ಲ, ಉಪಕಾರಿ ಹಕ್ಕಿ, ಹಳಿಯದಿರಿ" ಅಂತಲೆ? ನನ್ನ ಊಹೆ ಮಾತ್ರ. - ಎಂದು 'ಹರಿವ ಲಹರಿ'ಯ ಜ್ಯೋತಿ ಮಹಾದೇವನ್ ಅವರ ಊಹೆ! ನನಗೂ ಇದು ಸರಿ ಎಂದು ತೋರುತ್ತೆ ಕಿರಣ್!

kiran said...

ಅರ್ಥ ಇನ್ನೇನ್ ಸಿಕ್ತು ಅನ್ಕೊಂಡೆ ಯಾವ್ದೋ ನಿಶು ಮನೆ ಅನ್ನೋ blog ನಲ್ಲಿ, ನೋಡಿದ್ರೆ ಅಲ್ಲೂ ನಿಮ್ಮದೇ ಕೈಚಳಕ :-) :D
ಇದರ ಅರ್ಥ ನ prof g ವೆಂಕಟಸುಬ್ಬಯ್ಯ ನವರನ್ನೇ ಕೇಳಬೇಕು
ಹ್ಮ್ಮ್ ನೋಡೋಣ vl keep searching

Sheela Nayak said...

ok..best of luck Kiran! :-D

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...