ಭಾರತದದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ವಿಶ್ವದ ಎಲ್ಲೆಲ್ಲಿಂದಲೂ ವಿರೋಧ ಕೇಳಿ ಬರುತ್ತಿದೆ...ರಾಜಕಾರಣಿಗಳ ಮೇಲೆಲ್ಲರೂ ಉಗಿಯುತ್ತಿದ್ದಾರೆ...ಸರಿ! ಆದರೆ ಇದಕ್ಕೆ ಪರಿಹಾರ ಎಲ್ಲಿ?? ಹಾಗಾದರೆ ಎಲ್ಲ ರಾಜಕಾರಣಿಗಳು ಭ್ರಷ್ಟರೇ? ಅಲ್ಲ ಎಂದರೆ ಎಲ್ಲರೂ ಒಪ್ಪುತ್ತಾರೆ ತಾನೆ! ಆದರೆ ಏನು ಮಾಡುವುದು? ಅವರೆಲ್ಲರೂ ಕೈಕಟ್ಟಿ ಕುಳಿತುಕೊಂಡಿದ್ದಾರೆ ತಾನೆ? ಇದಕ್ಕೆ ಮುಖ್ಯ ಕಾರಣ ಏನು? ನಮಗೆ ಸ್ವಾತಂತ್ರ್ಯ ಸಿಕ್ಕಿದ ನಂತರ ನಮ್ಮನ್ನು ಆಳಿದವರು ಹೇಗಿದ್ದರು?? ಅವರೂ ಕೂಡ ತಮ್ಮ ತಮ್ಮ ಪೀಳಿಗೆಯವರಿಗೆ ಗದ್ದುಗೆ ಸಿಗುವಂತ ಎಲ್ಲಾ ವ್ಯವಸ್ಥೆ ಮಾಡಿದ್ದರು ತಾನೆ! ರಾಜಗೋಪಾಲಾಚಾರಿ, ಜೆ ಪಿ ನಾರಾಯಣ್, ವಲ್ಲಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಮೊದಲಾದ ಕೆಲವೇ ಬೆರೆಳೆಣಿಯಷ್ಟೆ ಮಹಾನ್ ಜನರು ಕಾಣಸಿಗುವರು.( ಕೆಲವೇ ಮಂದಿಯನ್ನು ಹೆಸರಿಸಿದ್ದೇನೆ......:) ನನಗನಿಸುವುದಿಷ್ಟು..ಈ ಬೆಳವಣಿಗೆಯಲ್ಲಿ ಉದ್ಯಮಿಗಳ ಪಾಲು ದೊಡ್ಡದೆಂದು...ಅಲ್ಲವೆ? ರಾಜಕಾರಣಿಗಳಿಗೆ ಹಣದ ರುಚಿಯನ್ನು ತೋರಿಸಿದ್ದೇ ಈ ಉದ್ಯಮಿಗಳು...ಅಂಕೆ ಸಂಖ್ಯೆಯನ್ನು ನೋಡಿದರೆ ಭಾರತದಲ್ಲಿ ಕೋಟಿಯಾಧಿಪತಿಗಳ ಸಂಖ್ಯೆ ಗಣನೀಯವಾಗಿ ಕೆಲವೇ ದಶಕಗಳಲ್ಲಿ ಹೆಚ್ಚಿದೆ. ಪ್ರಾಮಾಣಿಕವಾಗಿ ಇಂತಹ ಸಂಪತ್ತನ್ನು ಗುಡ್ಡೆಮಾಡಲಾಗುತ್ತದೆಯೇ! ರಾಜಕಾರಣಿಗಳು ಸರಕಾರಿ ನೌಕರರು...ಸಾಮಾನ್ಯರೂ ಕೂಡಾ ಇವರಿಗೆ ತಮ್ಮ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ತೆಗೆಯಲು ಸಹಾಯ ಮಾಡಿದರೆಂದರೆ ಹೇಗೆ ತಪ್ಪಾಗುತ್ತದೆ! ಹೀಗೆ ಭಾರತದ ಮಿಲಿಯಾಧಿಪತಿಗಳ ಸಂಖ್ಯೆ ಹೆಚ್ಚಲು ನಮ್ಮ ಧಾರ್ಮಿಕ ನಾಯಕರು, ಮಠಾಧೀಶರೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.( ಹಾಗಂತ ಎಲ್ಲರೂ ಹಾಗೆ ಅಂತ ಹೇಳಲಿಕ್ಕಾಗುವುದಿಲ್ಲ...ಇದು ಅಕ್ಕಿಯಲ್ಲಿ ಸಿಗುವ ಬತ್ತದ ಹೊಟ್ಟು ಹುಡುಕುವಷ್ಟೆ ಕಷ್ಟ!)
ಮೊದಮೊದಲು ಉದ್ಯಮಿಗಳು ತೆರೆಮರೆಯಲ್ಲಿ ತಮ್ಮ ಮೂಗು ತೂರುತ್ತಿದ್ದರು....ಸಂಪತ್ತಿನ ರುಚಿ ನೋಡಿಯಾಯಿತು....ಇನ್ನೇನು ಹೊಸತು....ಹೊಸ ರುಚಿಯ ಹುಡುಕಾಟದಲ್ಲಿರುವ ಇವರಿಗೆ ಈ ರಾಜಕಾರಣಿಗಳು ತಮ್ಮ ಗದ್ದುಗೆಯಲ್ಲಿ ಪಾಲು ಕೊಟ್ಟದೇ ತಡ, ಅದರ ರುಚಿಹತ್ತಿದೆ...ಉದಾಹರಣೆಗೆ ಬೆಳ್ಳಾರಿಯ ರೆಡ್ಡಿ ಗ್ಯಾಂಗ್.. ಇವರ ಅಹಂಕಾರ ಮಿತಿಮೀರಿ ಹೋಗಿತ್ತು...ಕಾಲ ಬಿಡುತ್ತದೆಯೇ...ಮೇಲಿರುವವನ ಕೋರ್ಟಿನಲ್ಲಿ ಎಲ್ಲರಿಗೂ ಸಮಾನವಾದ ನ್ಯಾಯ ತಾನೆ! ಆದರೂ ಜೈಲಿನಲ್ಲಿ ಸಹ ಅವರು ಪಶ್ಚಾತ್ತಾಪ ಪಟ್ಟಿಲ್ಲವೆಂದು ತೋರುತ್ತದೆ...ಭಾ ಜ ಪದ ವರಿಷ್ಟರ ಮೇಲು ಒತ್ತಡ ತರಲು ನೋಡುತ್ತಿದ್ದಾರೆ! ಅಬ್ಬಾ ಇವರ ಅಹಂವೆಷ್ಟು? ಇಷ್ಟಾದರೂ ಕುಮಾರಸ್ವಾಮಿ ಹಾಗೂ ಯೆಡಿಯ್ಯೂರಪ್ಪ ಬುದ್ಧಿ ಕಲಿತಿಲ್ಲವೆಂದು ಕಾಣುತ್ತದೆ..ಬಹುಶಃ ತಿಹಾರ್ ಜೈಲಿನ ರುಚಿಯ ಆಸೆಯಾಗಿರಬಹುದು!!! ಮುಂದೊಂದು ದಿನ ಆ ಜೈಲಿಗೆ ಹೋಗುವುದು ರಾಜಕಾರಣಿಗಳಿಗೆ ಒಂದು ಪ್ರತಿಷ್ಟಿತ ವಿಷಯವಾದರೆ ಆಶ್ಚರ್ಯವೇನಿಲ್ಲ!!!

4 comments:
ಅಯ್ಯೊ, ಇವರಿಗೆಲ್ಲ ಶಿಕ್ಷೆಯಾಗಿಯೇ ಬಿಡುತ್ತದೆ ಎಂದು ನೀವು ನಂಬಿದಂತಿದೆ! ಹಾಗೇನೂ ಆಗುವುದಿಲ್ಲ ಶೀಲಾರವರೆ. ಇದು ಇಂಡಿಯಾ! ಇವರೇ ನಮ್ಮನ್ನು ಮುಂದೆಯೂ ಆಳುತ್ತಾರೆ, ಪ್ರತ್ಯಕ್ಷವಾಗಿ ಅಲ್ಲದಿದ್ದರೆ ಪರೋಕ್ಷವಾಗಿ. ಜನಮನದಲ್ಲೇ ಮೌಲ್ಯಗಳ ಪತನ ಯಾವತ್ತೋ ಆಗಿರುವಾಗ ಯಾರನ್ನೇನು ಅಂದು ಏನು ಪ್ರಯೋಜನ ಹೇಳಿ!
ನಿಜ ಪೈಯವರೇ, ಆದರೂ ಆಶೆ...ಎಲ್ಲಿಯಾದರೂ ಯಾರಾದರೂ ಬಂದು ದೀವಟಿಗೆಯ ತೋರುವರೆಂದು!!!
@ "ಆದರೂ ಆಶೆ...."
ಆಷೆಯೇ ದುಃಖಕ್ಕೆ ಮೂಲ - ಭಗವಾನ್ ಬುದ್ಧ
We get the government we deserve.
So, if we want a good government then we must better ourselves collectively.
Whatever happened to the values we were taught in elementary school like satyameva jayate? Are we truly truthful? Always? Don't we utter white lies now and then?
Hello Aram,
Very true....was hoping that some genie would change our prejudiced mind set & would change the future of India.but alas ....now seeing the present scenario....all hopes have drained...
Yes...We do lie a lot...everything is ok until it doesnt harm anyone's life..thats my belief....
thanks for your encouragement.
Shiela
Post a Comment