ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 July, 2015

“ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ.. “

“ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ.. “

ಬೆಳಗಿನಿಂದಲೂ ಸುಮ್ ಸುಮ್ನೆ ಬುಸುಗುಟ್ಟುತ್ತಿದ್ದಳು..
ಗವಾಕ್ಷಿಯಿಂದಲೇ ಒಳಗೆ ನುಸುಳಿದ ಒಲವಿಗೆ ಎಂದಿನ ನಸುನಗೆಯ ಸ್ವಾಗತವಿಲ್ಲ.
ದೋಸೆ ಹುಯ್ದು, ಮಸಾಲೆ ಮೇಲೆ ಒಂದಿಷ್ಟು ಹೆಚ್ಚೇ ಚಟ್ನಿ ಸುರಿದು, ಒಲವಿನ ಮುಂದೆ ಕುಕ್ಕಿದಳು. ಜತೆಗೆ ದಟ್ಟಕಪ್ಪು ಬಣ್ಣದ ಕಾಫಿಯ ಕಪ್ಪೂ!
“ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ.. “
ಒಲವು ಗೊಣಗುಟ್ಟಿತು.
“ಅಂದ್ರೆ!”

ಕೇಳಿದವಳಿಗೆ ಮುಗಿಲಲಲ್ಲಿ ಹರಡಿದ ಬೂದಿ ಬಣ್ಣದ ಮಸುಕು ಮುಂಜಾವನ್ನು ತೋರಿಸಿತು ಒಲವು!

13 July, 2015

“ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ... “

“ಕೋಣನ  ಮುಂದೆ ಕಿನ್ನರಿ ಬಾರಿಸಿದ ಹಾಗೆ... “
____________________________________

“ಹುಡುಗನ ಕಡೆಯವರು ಏನೂ ಕೇಳಿಲ್ಲವೇನು ಸರಿ, ಆದರೆ ಬೋಳು ಕುತ್ತಿಗೆಯಲ್ಲಿ ಕನ್ಯಾದಾನ ಮಾಡೋಕ್ಕಾಗುತ್ತಾ! ನೀವು ಸ್ವಲ್ಪ ಸಮಯ ನಿಮ್ಮ ಹವ್ಯಾಸಗಳಿಗೆ ನಾಕಾಬಂದಿ ಮಾಡ್ಕೊಳ್ಳಿ... "
ಬಾಯಿ ಒಣಗುವ ತನಕ ಹೇಳುತ್ತಲೇ ಇದ್ದಳು.
ತಲೆ ಅತ್ತಿತ್ತ ತೂಗಾಡಿತು...
ಮರುದಿನ ಮಾಲುತ್ತಾ ಬಂದವನನ್ನೂ, ಅವನ ಖಾಲಿ ಕಿಸೆಯನ್ನೂ ನೋಡಿ,
“ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.. “
ಅತ್ತೆ ಗೊಣಗಿದರು!

ಹ್ರಸ್ವ ಕತೆ..


ಇಬ್ಬರೂ ಪೈಪೋಟಿಯಲ್ಲಿ ಎಳೆದಾಗ ಮೊದಲೇ ಶಿಥಿಲವಾಗಿದ್ದ ರೇಶ್ಮೆ ಪತ್ತಲ ಎರಡು ಭಾಗ!
’ಹ್ಮ್, ಅವನಿಗೆ ಬೇಡವಾದದ್ದು ನನಗೂ ಯಾಕೆ! ನಾನೇನು ಕಡಿಮೆ, ಹೊಸತೇ ಕೊಳ್ಳುವೆ.’
ರಸ್ತೆ ದಾಟಿ ಕಸದ ಬುಟ್ಟಿಯತ್ತ ನಡೆದವಳಿಗೆ ತಾನೇ ನೇಯ್ದ ಕಸೂತಿ ಕಾಣಿಸಿತು..
ಕೈ ತಡೆಯಿತು, ಕಾಲು ಬಂದ ದಾರಿಯಲ್ಲೇ ಮತ್ತೆ ಸಾಗಿತು.
ತೇಪೆ ಹಚ್ಚಲು ಕುಳಿತವಳ ಕಣ್ಣಲ್ಲಿ ಮತ್ತೆ ಹೊಸ ಬೆಳಕು!


"Take the road less travelled", they said.
She checked the travelogue and called travel office, booked her tickets to home.
- Priyanka

ಇಬ್ಬರೂ ಎಳೆದಾಡಿ ಹರಿದ ರೇಶ್ಮೆ ಪತ್ತಲದೊಂದಿಗೆ ಹೊಸ್ತಿಲು ದಾಟಿದವಳಿಗೆ ತಾನೇ ನೇಯ್ದ ಕಸೂತಿ ಬೇಡಿಯಾಯ್ತು. ಮತ್ತೆ ಅದೇ ಬದುಕಿನೊಂದಿಗೆ ಹೊರಾಡುವ ಸಂಕಲ್ಪದೊಂದಿಗೆ ಮನೆಯೊಳಗೆ ನಡೆದಳು!

12 July, 2015

ಮಿರ್ಜಾ ಗಾಲಿಬ್!

ಊರು-ಕೇರಿ ಬದಲಾಯಿತು;
ವೇಷ-ಭೂಷಣದಲ್ಲೂ ವೈವಿಧ್ಯ;
ಬಂಧು-ಬಾಂಧವ್ಯದಲ್ಲಿ ಮಾರ್ಪಾಟು;
ಸ್ನೇಹ-ಸಂಬಂಧಗಳೂ ಹೊಸದಾದವು;
ಮನ ಈಗಲೂ ಅದೇ ಚಿಂತೆ-ಕಂತೆಗಳ ಸಂತೆ..
ಲೋಕದಲಿ ಬದಲಾವಣೆಗಳ ಬಯಸಿದೆ,
ನಾ ಬದಲಾಗಲೇ ಇಲ್ಲ..

ಗಾಲಿಬ್ ಹೇಳುತ್ತಾರೆ,
ಹುಟ್ಟಿದಾಗಿಂದಲೂ ಇದೇ ತಪ್ಪುಗಳ ಪುನರಾರ್ವತನೆ,
ಕನ್ನಡಿಯನ್ನು ತಿಕ್ಕುತ್ತಲೇ ಕುಳಿತೆ..
ಮುಖದ ಕಲೆ ಹಾಗೇ ಉಳಿಯಿತು!

-ಮಿರ್ಜಾ ಗಾಲಿಬ್

ಕಬೀರ...

ಕಾಳಿನೊಳಗಿನ ಎಣ್ಣೆ, ಕಲ್ಲಿನೊಳಗಿನ ಬೆಂಕಿ ಕಂಡವನು ನೀನು      
ನಿನ್ನೊಳಗಿರುವ ಅವನನೂ ಕಾಣಬಲ್ಲೆ ಏನು!

-ಕಬೀರ 

09 July, 2015

ಅಂತರಂಗ ಪಯಣ

ಒಲವೇ,

ಈ ಅಂತರಂಗದ ಪಯಣ
ಧೀ ಶಕ್ತಿಯ ಉದ್ದೀಪನ
ನಮ್ಮೀ ಅನುರಾಗಕೆ ನವಚೇತನ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...