ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
18 November, 2015
||ಭಜ ಗೋವಿಂದಮ್||
ಮಾ ಕುರು ಧನಜನ
ಯೌವನ ಗರ್ವಂ
ಹರತಿ ನಿಮೇಷಾತ್-ಕಾಲಃ
ಸರ್ವಮ್|
ಮಾಯಾಮಯಮಿದಮ್-ಅಖಿಲಂ
ಹಿತ್ವಾ
ಬ್ರಹ್ಮಪದಂ ತ್ವಂ
ಪ್ರವಿಶ ವಿದಿತ್ವಾ||
-
ಶ್ರೀ
ಶಂಕರಾಚಾರ್ಯ
07 November, 2015
ಯಾಕೆ ಹೀಗೆ ನನ್ನೊಲವೇ?
ಯಾಕೆ ಹೀಗೆ ನನ್ನೊಲವೇ,
ಕ್ಷಣದ ಹಿಂದೆ ನಡೆದುದನು ಬದಲಾಯಿಸಲಾಗದವರು
ಕ್ಷಣದ ನಂತರ ನಡೆಯುವುದನು ತಿಳಿಯದವರು
ಭ್ರಮೆಯಲಿ ಹುಕುಂ ಚಲಾಯಿಸಿದರೆ
ಜೋರಾಗಿ ನಗದೇ ಇನ್ನೇನು ಮಾಡಲಿ, ಹೇಳು!
06 November, 2015
ಲಕ್ಷ್ಮಣ ರೇಖೆಗಳ ದಾಟಿದವಳು..
"So many lines are drawn at threshhold... am I seethe!", she was wondering..
ಅವಳ ದೃಷ್ಟಿ ಹೊಸ್ತಿಲ ಬಳಿ ಎಳೆದ ರೇಖೆಗಳ ಮೇಲೆ..
ಅವಳಿವಳು ಅವನಿವನು ಅಡ್ಡಾದಿಡ್ಡಿ ರೇಖೆಗಳನ್ನೆಳೆದು ಬಿಟ್ಟಿದ್ದಾರೆ..
ಇವು ಲಕ್ಷ್ಮಣ ರೇಖೆಗಳೇ!
ಅಂಗಣದಾಚೆ ಇರುವವರೆಲ್ಲಾ ರಾವಣರೇ, ಶೂರ್ಪನಖಿಯರೇ?
ಇಲ್ಲಿಲ್ಲ..
ರಾಮನೂ, ಕೃಷ್ಣನೂ ಇರುವರಲ್ಲಿ
ರಾವಣ, ದುಶ್ಯಾಸನರ ನಡುವಿನಲ್ಲಿ..
ಮತ್ತೆ ಸೀತೆಯೂ, ರಾಧೆಯೂ
ಶೂರ್ಪನಖಿ, ಮಂಥರೆಯರೆಡೆಯಲ್ಲಿ
ಹೆಜ್ಜೆ ಮೊದಲು ತಡವರಿಸಿತು...
ಆದರೆ,
ತಂಗಾಳಿ ಮುಂಗುರಳ ಸರಿಸಿತು..
ಗಂಧವಿಳಿಯಿತು ಎದೆಯೊಳಗೆ
ರತಿ ಮದನರ ಸಲ್ಲಾಪ ಹೂಗಿಡಗಳೆಡೆಯಲ್ಲಿ..
ದೂರದಲ್ಲಿ ಕೋಗಿಲೆಯ ಪಂಚಮ ಗಾನ..
ಎದೆಯೊಳಗೇಕೆ ಮಿಂಚಿನ ಸಂಚು!
ಒಲವಿನ ಕರೆಯೇ...
ಕ್ಷಣ ಮಾತ್ರದಲಿ
ದಾಟಿ ನಡೆದವಳು ರೇಖೆಗಳನು..
ಕೊನೆಗೂ ಆತ್ಮಕರೆಗೆ ಮಣಿದಳು!
ಗೋಪಿಯಾದಳು ಗೋಪಾಲನ ಮುರಳಿಯ ನಾದಕೆ..
ಶಿವೆಯಾದಳು ಸದಾಶಿವನ ಡಮರಿನ ನಾದಕೆ..
ನದಿಯಾದಳು ಸಾಗರನ ಶಂಖ ನಾದಕೆ..
ಬದುಕನ್ನೇ ಪಣಕ್ಕಿಟ್ಟು
ಅಮರಳಾದಳು ಒಲವಿನ ಅಮೃತಕೆ!
ಅವಳ ದೃಷ್ಟಿ ಹೊಸ್ತಿಲ ಬಳಿ ಎಳೆದ ರೇಖೆಗಳ ಮೇಲೆ..
ಅವಳಿವಳು ಅವನಿವನು ಅಡ್ಡಾದಿಡ್ಡಿ ರೇಖೆಗಳನ್ನೆಳೆದು ಬಿಟ್ಟಿದ್ದಾರೆ..
ಇವು ಲಕ್ಷ್ಮಣ ರೇಖೆಗಳೇ!
ಅಂಗಣದಾಚೆ ಇರುವವರೆಲ್ಲಾ ರಾವಣರೇ, ಶೂರ್ಪನಖಿಯರೇ?
ಇಲ್ಲಿಲ್ಲ..
ರಾಮನೂ, ಕೃಷ್ಣನೂ ಇರುವರಲ್ಲಿ
ರಾವಣ, ದುಶ್ಯಾಸನರ ನಡುವಿನಲ್ಲಿ..
ಮತ್ತೆ ಸೀತೆಯೂ, ರಾಧೆಯೂ
ಶೂರ್ಪನಖಿ, ಮಂಥರೆಯರೆಡೆಯಲ್ಲಿ
ಹೆಜ್ಜೆ ಮೊದಲು ತಡವರಿಸಿತು...
ಆದರೆ,
ತಂಗಾಳಿ ಮುಂಗುರಳ ಸರಿಸಿತು..
ಗಂಧವಿಳಿಯಿತು ಎದೆಯೊಳಗೆ
ರತಿ ಮದನರ ಸಲ್ಲಾಪ ಹೂಗಿಡಗಳೆಡೆಯಲ್ಲಿ..
ದೂರದಲ್ಲಿ ಕೋಗಿಲೆಯ ಪಂಚಮ ಗಾನ..
ಎದೆಯೊಳಗೇಕೆ ಮಿಂಚಿನ ಸಂಚು!
ಒಲವಿನ ಕರೆಯೇ...
ಕ್ಷಣ ಮಾತ್ರದಲಿ
ದಾಟಿ ನಡೆದವಳು ರೇಖೆಗಳನು..
ಕೊನೆಗೂ ಆತ್ಮಕರೆಗೆ ಮಣಿದಳು!
ಗೋಪಿಯಾದಳು ಗೋಪಾಲನ ಮುರಳಿಯ ನಾದಕೆ..
ಶಿವೆಯಾದಳು ಸದಾಶಿವನ ಡಮರಿನ ನಾದಕೆ..
ನದಿಯಾದಳು ಸಾಗರನ ಶಂಖ ನಾದಕೆ..
ಬದುಕನ್ನೇ ಪಣಕ್ಕಿಟ್ಟು
ಅಮರಳಾದಳು ಒಲವಿನ ಅಮೃತಕೆ!
05 November, 2015
ಮೂರ್ತನಾದ ನಿನ್ನಲ್ಲೂ ಕಂಡೆ ಅವನದೇ ಬಿಂಬ!
“Don’t you feel tired!” He inquired.
ಹ್ಮ್.. ಹಿಂದೊಮ್ಮೆ ಹೇಳಿದನ್ನೇ ಪುನರುಚ್ಚರಿಸಲು ಇಲ್ಲ ಒಂದಿನಿತೂ ಬೇಸರ,
“ಒಲವೇ,
ನಿನ್ನ ಹಾದಿಯ ಪಯಣಿಗಳಾಗಲು,
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ!”
ಹಾಗೂ ನನಗಿದರದೂ ಅರಿವಿದೆ,
ಒಲವು ಕೊಡಲೂ ಮತ್ತು ಪಡೆಯಲೂ
ಪೂರ್ಣ ಶರಣಾಗತಿ ಸ್ಥಿತಿಯೇ ಸರಿ!
ಅಮೂರ್ತನಾದ “ಅವನಿ”ಗೂ
ಮೂರ್ತನಾದ ನಿನಗೂ ಇದು ಅನ್ವಯ,
ಹುಬ್ಬೇರಿಸಬೇಡ,
ಕಂಡಿರುವೆ ನಿನ್ನಲ್ಲೂ “ಅವನ”ದೇ ಬಿಂಬ!
ಹ್ಮ್.. ಹಿಂದೊಮ್ಮೆ ಹೇಳಿದನ್ನೇ ಪುನರುಚ್ಚರಿಸಲು ಇಲ್ಲ ಒಂದಿನಿತೂ ಬೇಸರ,
“ಒಲವೇ,
ನಿನ್ನ ಹಾದಿಯ ಪಯಣಿಗಳಾಗಲು,
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ!”
ಹಾಗೂ ನನಗಿದರದೂ ಅರಿವಿದೆ,
ಒಲವು ಕೊಡಲೂ ಮತ್ತು ಪಡೆಯಲೂ
ಪೂರ್ಣ ಶರಣಾಗತಿ ಸ್ಥಿತಿಯೇ ಸರಿ!
ಅಮೂರ್ತನಾದ “ಅವನಿ”ಗೂ
ಮೂರ್ತನಾದ ನಿನಗೂ ಇದು ಅನ್ವಯ,
ಹುಬ್ಬೇರಿಸಬೇಡ,
ಕಂಡಿರುವೆ ನಿನ್ನಲ್ಲೂ “ಅವನ”ದೇ ಬಿಂಬ!
04 November, 2015
ಮತ್ತೆ ಮುಗುಳುನಗದೇ ಇನ್ನೇನು ಮಾಡಲಿ!
ಒಲವೇ,
ಮುಗುಳುನಗದೇ ಮತ್ತೇನು ಮಾಡಲಿ,
ಸುಖಾ ಸುಮ್ಮನೆ ಗಂಟಲು ಹರಿದುಕೊಳ್ಳುವಿಯಲ್ಲ..
ಮತ್ತೆ ಮತ್ತೆ ಅದೇ ಹೇಳುತ್ತ, ಗೊಣಗುತ್ತ
ನಿನ್ನ ಸಾಧನೆಯಲ್ಲ ಮಣ್ಣು ಪಾಲಾಯಿತು, ಅಷ್ಟೇ!
ತ್ಯಾಗ ಬಲದಲ್ಲಿ ತ್ರಿವಿಕ್ರಮನೆತ್ತರಕೆ
ನೀನು ಬೆಳೆದದು ನೋಡುತ್ತಾ
ಕುತ್ತಿಗೆ ಉಳುಕಿದೆ ಅವನದು, ಇವನದು, ಅವರದು..
ಅದರ ಮೇಲೆ ಅಹಂಗೆ ಉಳಿಯ ಧಾಳಿ
ಅವನೊಬ್ಬನೇ ಅಲ್ಲ... ನೋಡು,
ಅವನಂತವರ ದಂಡೇ ಇದೆ ಮುಂದೆ, ಹಿಂದೆ...
ಹೆಣ್ಣು ಮುಷ್ಟಿಯೊಳಗೇ ಇರಲಿ
ಎಂಬ ಹಂಬಲ ಅವರಿಗೆಲ್ಲ
ಮತ್ತೆ ಮುಗುಳುನಗದೇ ಏನು ಮಾಡಲಿ ಹೇಳು!
ಮುಗುಳುನಗದೇ ಮತ್ತೇನು ಮಾಡಲಿ,
ಸುಖಾ ಸುಮ್ಮನೆ ಗಂಟಲು ಹರಿದುಕೊಳ್ಳುವಿಯಲ್ಲ..
ಮತ್ತೆ ಮತ್ತೆ ಅದೇ ಹೇಳುತ್ತ, ಗೊಣಗುತ್ತ
ನಿನ್ನ ಸಾಧನೆಯಲ್ಲ ಮಣ್ಣು ಪಾಲಾಯಿತು, ಅಷ್ಟೇ!
ತ್ಯಾಗ ಬಲದಲ್ಲಿ ತ್ರಿವಿಕ್ರಮನೆತ್ತರಕೆ
ನೀನು ಬೆಳೆದದು ನೋಡುತ್ತಾ
ಕುತ್ತಿಗೆ ಉಳುಕಿದೆ ಅವನದು, ಇವನದು, ಅವರದು..
ಅದರ ಮೇಲೆ ಅಹಂಗೆ ಉಳಿಯ ಧಾಳಿ
ಅವನೊಬ್ಬನೇ ಅಲ್ಲ... ನೋಡು,
ಅವನಂತವರ ದಂಡೇ ಇದೆ ಮುಂದೆ, ಹಿಂದೆ...
ಹೆಣ್ಣು ಮುಷ್ಟಿಯೊಳಗೇ ಇರಲಿ
ಎಂಬ ಹಂಬಲ ಅವರಿಗೆಲ್ಲ
ಮತ್ತೆ ಮುಗುಳುನಗದೇ ಏನು ಮಾಡಲಿ ಹೇಳು!
Subscribe to:
Posts (Atom)