ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 September, 2015

ಗೌರಿ ಗಣೇಶ!




ಕಡೆಗಣಿಸಬೇಡ, ನನ್ನೊಲವೇ!

ಒಲವೇ,

ಕಡೆಗಣಿಸಬೇಡವೇ,
ದೂರದ, ಕೈಗೆಂದೂ ನಿಲುಕದ
ಚುಕ್ಕಿಯ ಹೊಳಪಿಗೆ ಮರುಳಾಗಿ
ಬದುಕು ನಿನ್ನ ಸೆರಗಿನ ಅಂಚಿಗೆ
ಗಂಟು ಹಾಕಿದ ಮುತ್ತು, ಮಾಣಿಕ್ಯಗಳ ಕಡೆಗಣಿಸಬೇಡವೆ,
ಆ ಮುತ್ತು, ಮಾಣಿಕ್ಯಗಳ!

ಕೇಳಿಲ್ಲಿ, ನಿನಗರಿವಿದೆ ತಾನೇ,
ಆ ಚುಕ್ಕಿಯ ವ್ಯಾಪ್ತಿ
ನಿನ್ನ ನನ್ನ ಎಣಿಕೆಗೂ
ಮೀರಿದ್ದು.
ಮತ್ತು ಅದು ನೀಡುವ
ಅನುಪಮ
ಬೆಳಕಷ್ಟೇ ನಮಗೆ
ಸೇರಿದ್ದು!

07 September, 2015

ಕ್ಷಮೆಯಿರಲಿ ಒಲವೇ,

 


ಒಲವೇ,

ಕ್ಷಮಿಸಿ ಬಿಡು,
ಅಂದಿನ ದಿನ ಹಾಗೇ ಉಳಿದಿದೆಯೆಂಬ ಭ್ರಮೆ..
ಒಂದಿಷ್ಟು ಅತಿಕ್ರಮಿಸಲು ಹೊರಟೆ
ಹ್ಮ್.. ನನ್ನ ನಗುವಿನ ಪಾಲು ನಿನಗೂ ಕೊಡಲಷ್ಟೇ.

ಇರಲಿ ಬಿಡು, ನಿನ್ನ ಬದುಕು ನಿನ್ನದು.
ನೆನಪಿರಲಿ, ನನ್ನ ಒಲವು
ಬದಲಾಗದು..
ನಾನಳಿಯುವರೆಗೂ ನನ್ನಲ್ಲಿಯೇ

ಅದರ ಬೀಡು!

03 September, 2015

ಕಾಲ ಚಕ್ರ!

ಒಲವೇ,
ಹೌದು, ಈಗೀಗ ದಿನಗಳು ಬಲು ಕಠಿಣ,
ಎಲ್ಲರ ತಪ್ಪುಗಳಿಗೂ ನೀನೇ ಹೊಣೆ ಅನ್ನುವವರೇ ಸುತ್ತಲೂ

ಆಪಾದನೆಗಳ ಬೆಟ್ಟದ ಭಾರ ಇನ್ನು ಹೊರಲಾರೆ
ಎಂದು ಬೆನ್ನು ಹಾಕಿ ಹೊರಟೆಯಲ್ಲ,

ಸ್ವಲ್ಪ ತಡೆ, ಕೊನೆಯ ಮಾತು ಕೇಳು
ಬಹುಶಃ ನೀನು ಮರೆತಿರುವೆ,

ಕಾಲ ಮತ್ತು ಹಾದಿ, ಬದಲಾಗುವಿಕೆ
“ಆತನ” ನಿಯಮ!
-ರೂಮಿ ಪ್ರೇರಣೆ

When you go through a hard period,
 When everything seems to oppose you,
When you feel you cannot even bear one more minute,
Never give up,

Because it is the time and place that the course will divert.

01 September, 2015

ಕಠಿಣ ಶ್ರಮ ಮತ್ತು ಪ್ರಾಮಾಣಿಕ ಯತ್ನವಿಲ್ಲದೆ ಕಾರ್ಯ...

ಯಥಾ ಏಕೇನ ಹಸ್ತೇನ ತಾಲಿಕಾ ನ ಸಂಪ್ರಪದ್ಯತೆ|
ತಥೋದ್ಯಮ ಪರಿತ್ಯಕ್ತ ಕರ್ಮಂ ನೋತ್ಪಾದ್ಯತೆ ಫಲಂ||

ಒಂದು ಹಸ್ತವು ಚಪ್ಪಾಳೆಯನ್ನು ಉತ್ಪಾದಿಸದು. ಅಂತೆಯೇ, ಕಠಿಣ ಮತ್ತು ಪ್ರಾಮಾಣಿಕ ಯತ್ನವಿಲ್ಲದ ಕಾರ್ಯ 

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...