ಮಿಠಾಯಿ ಹೂ ಅಂತ ಸಾಮಾನ್ಯವಾಗಿ ಕರೆಯುವ ಈ ಹೂವಿನ ಇಂಗ್ಲಿಷ್ ಹೆಸರು ಗೋಲ್ಡನ್ ಟ್ರಂಪೆಟ್ ಅಂತ. ಅಲ್ಲಮಂಡ ಕತಾರ್ಟಿಕ ಅಂತ ವೈಜ್ಞಾನಿಕ ಹೆಸರು. ಸಾಮಾನ್ಯವಾಗಿ ವರ್ಷವೆಲ್ಲ ಹೂ ಕೊಡುವ ಈ ಹೂವು ನನಗೆ ಬಹಳ ಇಷ್ಟ. ಸಾಮಾನ್ಯವಾಗಿ ಹಳದಿ ಬಣ್ಣದ ಹೂವಿನ ಗಿಡ ಎಲ್ಲೆಡೆ ಕಾಣಬರುವುದಾದರೂ ಇತ್ತೀಚೆಗೆ ಇನ್ನೆರಡು ಬಣ್ಣಗಳು ಸೇರ್ಪಡೆಯಾಗಿವೆ. ಇವತ್ತು ಪೂರ್ವಾಹ್ನ ಅಮ್ಮನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಹೂವಿನ ಮೇಲೆ ಚೆಲ್ಲಿಕೊಂಡಿದ್ದ ಹನಿಗಳು ಸ್ವಾಗತ ಕೋರಿದವು. ಮನ ಪ್ರಫುಲ್ಲಿತವಾಯಿತು. ಎಂದಿನಂತೆ ಆ ನೆನಪನ್ನು ಶಾಶ್ವತವಾಗಿರಿಸಲು ಸೆರೆಹಿಡಿದೆ.
No comments:
Post a Comment