ಮೊದಲು ಕ್ಷಮೆ ಬೇಡುತ್ತೇನೆ! ಮತ್ತೆ ಮುಂದುವರಿಸುತ್ತೇನೆ.
ಸಾಧಾರಣ ಮೂರು, ನಾಲ್ಕು ತಿಂಗಳು ಗಣಕ ಯಂತ್ರದ ಪ್ರಪಂಚದಿಂದ ದೂರವಾಗಿ ನನ್ನ ಸಂಸಾರದಲ್ಲಿ ಮುಳುಗಿದ್ದೆ. ಮಕ್ಕಳ ಹಿತಕ್ಕೋಸ್ಕರ ಹೀಗೆ ಮಾಡಬೇಕಾಯಿತು. ಆದರೂ ಈ ಎರಡು ತಿಂಗಳು ಬೇಸಿಗೆಯ ರಜೆಯನ್ನು ವ್ಯರ್ಥಮಾಡದೇ ಕಲಾ ಶಿಬಿರವನ್ನೂ ಮತ್ತು ೧೦ನೇ ತರಗತಿಯ ಮಕ್ಕಳಿಗೆ ಸಂಸ್ಕೃತ ತರಗತಿಯನ್ನೂ ನಡೆಸಿ ಆರ್ಥಿಕ ಸಂಪಾದನೆಯ ಜೊತೆ ಕಲಾಸೇವೆಯನ್ನು ಮಾಡಿದ ತೃಪ್ತಿ ನನ್ನಲ್ಲಿ ಉಳಿದಿದೆಯಾದರೂ ನನ್ನ ಮತ್ತು ಪ್ರಪಂಚದ ಕೊಂಡಿಯಾದ ಅಂತರ್ಜಾಲದಿಂದ ದೂರ ಉಳಿದ ನೋವು ಇನ್ನೂ ದೂರವಾಗಲಿಲ್ಲ. ಪ್ರಾರಂಭದಲ್ಲಿ ಶೂರಳಂತೆ ಬ್ಲಾಗ್ ನಲ್ಲಿ ಮೊದಲ್ಮೊದಲು ನನ್ನ ಮನ ಬಿಚ್ಚಿ, ಒಂದು ದಿನ ಮಾಯವಾಗಿ ಹೋಗಬೇಕಾದ ಅಪಕೀರ್ತಿ ಹೊರಬೇಕಾಯಿತು. ಪರವಾಗಿಲ್ಲ.... ಮಕ್ಕಳಿಗೋಸ್ಕರ ಅಷ್ಟೆಲ್ಲ ಮಾಡಬೇಕಾದುದು ತಾಯಂದಿರ ಹೊಣೆಯಾಗಿದೆ. ಮೊದಲು ಗೃಹಿಣಿಯ ಧರ್ಮ ಮತ್ತೆ ಉಳಿದುದು ಅಲ್ಲವೇ?
ಕಲಾ ಶಿಬಿರದ ಕೆಲವೊಂದು ಚಿತ್ರ ಹಾಕಿ ನನ್ನ ಬರಹಕ್ಕೆ ಸಾಕ್ಷಿ ಕೊಡುತ್ತೇನೆ!
4 comments:
ಶೀಲಕ್ಕ, welcome back :)
ನಿಮ್ಮ ಶಿಬಿರದ ಮಕ್ಕಳನ್ನು ಅವರ ಕಲೆಗಳನ್ನು ನೋಡಿ ಖುಶಿಯಾಯಿತು. ಬ್ಲಾಗಿನಿಂದ ದೂರವುಳಿದಿದ್ದರೇನಂತೆ ಅದಕ್ಕಿಂತಲೂ ಒಳ್ಲೆ ಕೆಲಸವನ್ನೇ ಮಾಡುತ್ತಿದ್ದಿರಿ ಬಿಡಿ.
ನಾನು ಸಣ್ಣವನಿದ್ದಾಗ(ಈಗೇನು ಭಾರಿ ದೊಡ್ಡಕಾಗಿಲ್ಲ, ಆದ್ರೂ...) ಈ ರೀತಿ ಶಿಬಿರಗಳಲ್ಲಿ ಬಹಳ ಇಷ್ಟಪಟ್ಟು ಭಾಗವಹಿಸುತ್ತಿದ್ದೆ. ಚಿತ್ರಕಲೆ ನನ್ favourite.
ಆದರೆ ಇದೆಲ್ಲಾ ಕಲಿತು ಏನಾಗಬೇಕಿದೆ ಎಂದು ಕೇಳುವವರು ಈಗ ಬಹಳ ಮಂದಿಯಾಗಿದ್ದಾರೆಂಬುದೇ ವ್ಯಥೆ :(
ನಮಸ್ಕಾರ,
ನರೇಂದ್ರ ಪೈ ಅವರ ಓದುವ ಹವ್ಯಾಸದಲ್ಲಿ ಮುಳುಗಿದ್ದವನು, ನಿಮ್ಮ ಕಮೆಂಟಿನ ಜಾಡು ಹಿಡಿದು ಅಲ್ಲಿಂದ ಬಂದ ಹೊಸ ಮುಖ. ಸಂತಸ ಅಂದ್ರೆ ನಾನು ಬಂದ ದಿನವೆ ಮತ್ತೆ ಬ್ಲಾಗಿಗೆ ನೀವು ಮರಳಿರುವು.... ಮತ್ತೊಂದು ಬೇಸರ ಅಂದ್ರೆ ನಾನು ಹೊಸದಾಗಿ ಒಂದು ಬ್ಲಾಗನ್ನು ಕಂಡುಹಿಡಿದೆ ಅಂದುಕೊಂಡಿದ್ದೆ?? ಆದರೆ ನಮ್ಮ ಸೈನ್ಯವೆ ಇಲ್ಲಿದೆ :D(ವಿಕಾಸ,ಸುಶ್ರುತ).
-ಅಮರ
ಚಿಣ್ಣರ ಬಣ್ಣದ ಚಿತ್ರಗಳು ಬಹಳ ಸೊಗಸಾಗಿವೆ
ಮುದುಡಿದ ಮನ ಅರಳಿತು
ಅರಳುವಿಕೆಗೆ ನಿಮಿತ್ತವಾದ ಬ್ಲಾಗು
ಬಹಳ ಕಾಲ ಬಾಳಲಿ
ಗುರುದೇವ ದಯಾ ಕರೊ ದೀನ ಜನೆ
welcome back :)
wow..ಅವೆಲ್ಲಾ ಮಕ್ಕಳೇ ಚಿತ್ರಿಸಿದ್ದಾ? ಎಲ್ಲವೂ ಸೂಪರ್.
Post a Comment