ಕರ್ನಾಟಕದ ಹಣೆಬರಹ!
ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.
ಕುಮಾರಸ್ವಾಮಿಯ ಸಂಧಾನ ಕಾರ್ಯ ಯಶಸ್ವಿಯಾಯಿತೆಂದು ತೋರುತ್ತದೆ. ಸ್ವಲ್ಪವೇ ದಿನಗಳ ಹಿಂದೆ ಒಬ್ಬರ ಮೇಲೊಬ್ಬರು ವಾಗ್ಭಾಣವನ್ನು ಬಿಡುತ್ತಿದ್ದವರು ಈಗ ಮತ್ತೊಮ್ಮೆ ಒಂದಾಗಿದ್ದಾರೆ.. ಎಷ್ಟು ವಿಚಿತ್ರ! ರಾಜಕಾರಣದಲ್ಲಿ ಯಾವಾಗ ದೋಸ್ತಿಗಳಾಗುತ್ತಾರೆ, ಯಾವಾಗ ವೈರಿಗಳಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ..ಒಂದಂತೂ ಸತ್ಯ ... ಬಿ.ಜೆ.ಪಿಗೆ ಇನ್ನೂ ಬುದ್ಧಿ ಬಂದಿಲ್ಲ. ಈ ಜೆಡಿ(ಯೆಸ್) ನವರು ಯಾವಾಗ ಕಾಲೆಳೆಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಆದರೂ ಗದ್ದುಗೆಯ ಅಸೆ!
ಗೌಡನವರ ಆಲೋಚನೆಯೇನೋ? ಇಲ್ಲದ್ದಿದ್ದರೆ ಬಿ.ಜೆ. ಪಿಗೆ ಅಧಿಕಾರ ಕೊಡುತ್ತಿರಲ್ಲಿಲ್ಲ!
ಧರ್ಮಯುದ್ಧ, ನ್ಯಾಯಯುದ್ಧ ಎಲ್ಲಾ ಬದಿಗೆ ಸರೆಯಿತು... ಈಗ ಹೊಸ ಆಟ!
ಕೆಲವು ದಿನಗಳ ಹಿಂದೆ ಪೇಪರ್ ನಲ್ಲಿಯೆಡ್ಯೂರಪ್ಪ ನವರಿಗೆ ಮುಖ್ಯ ಮಂತ್ರಿಯಾಗುವ ಯೋಗವಿಲ್ಲವೆಂದು ಒಬ್ಬ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು.. ಯಡ್ಯೂರಪ್ಪರ ಪಟ್ಟಾಭಿಷೇಕವಾಗುತ್ತದೆಯೋ ಎಂದು ಕಾದು ನೋಡಬೇಕು!
3 comments:
ಹಲೋ ಶೀಲಾ,
ವಂದನೆಗಳು ಯಾದ್ ವ ಶೇಮ್ ಪುಸ್ತಕದ ಕುರಿತು ಯಾದ್ ಮಾಡಿದ್ದಕ್ಕೆ. ಸುಧಾದಲ್ಲಿ ಬರುತ್ತಿದ್ದಾಗ ಓದಿರಲಿಲ್ಲ, ಕೇಳಿದ್ದೆ. ಈಗ ಪುಸ್ತಕ ಬಂದು ಶೆಲ್ಫ್‌ಲ್ಲಿ ಕೂತಿದೆ, ಇನ್ನೂ ಓದಿಲ್ಲ. ಖಂಡಿತಾ ಓದುತ್ತೇನೆ. ಓದಿದ ಮೇಲೆ ಅದು ನನ್ನಿಂದ ಬರೆಯಿಸಿಕೊಳ್ಳುವಂತಿದೆ ಅನಿಸುತ್ತದೆ! ಸಂದರ್ಶನ ಓದಿ, ವಿವೇಕ್ ಅಪರೂಪಕ್ಕೆ ಹಂಚಿಕೊಂಡಿದ್ದಾರೆ. ಹಾಗೆಯೇ ಈ ಬಾರಿಯ ಪ್ರಜಾವಾಣಿ ವಿಶೇಷಾಂಕ ಸಿಕ್ಕಿದರೆ ಅದರಲ್ಲೂ ವಿವೇಕರ ಒಂದು ಒಳ್ಳೆಯ ಕತೆ ಇದೆ, ಓದಿ. ದಟ್ಸ್ ಕನ್ನಡ ಡಾಟ್ ಕಾಂ ನಲ್ಲಿ ವಿವೇಕರ ಶರವಣ ಎಕ್ಸ್‌ಪ್ರೆಸ್ ಎಂಬ ಒಂದು ಕತೆಯೂ ಇದೆ. ಸಾಧ್ಯವಾದರೆ ಅತ್ರಿಯಲ್ಲಿ ದೇಶಕಾಲ ಸಿಗುತ್ತದೆ, ಒಮ್ಮೆ ಓದಿ ನೋಡಿ, ಪತ್ರಿಕೆ ತುಂಬ ಚೆನ್ನಾಗಿದೆ.
ಯೋಗ ಪಡೆದುಕೊಂಡು ಬಂದದ್ದು ಕೇವಲ ಒಂದೇ ವಾರದ ಮಟ್ಟಿಗೆ, ಮತ್ತೆ ಅದು ಕೂಡಿ ಬರುವುದು ಎಷ್ಟರ ಮಟ್ಟಿಗೆ ಸಾಧ್ಯ?
ಯೋಗ ಸಿಕ್ಕಿದ್ದು ಕುಮಾರನ ದಯೆಯಿಂದ.... ಆದರೆ ಅಪ್ಪನಿಗೆ ಪಟ್ಟದ ಮೇಲೆ ಕಣ್ಣು..... ಹಾಗೆ ಸ್ಪೆಲ್ಲಿಂಗ್ ಬದಲಿಸಿ ಸಹ ಏನೂ ಉಪಯೋಗವಾಗಲಿಲ್ಲ. ಕೆಟ್ಟ ಯೋಗ ನಿಜವಾಗಿ ಕನ್ನಡ ಜನರದ್ದು. ಎಷ್ಟೆಲ್ಲ ಖರ್ಚು ಮಾಡಿ ವೈಭವದಿಂದ ಪ್ರಮಾಣವಚನ ಸ್ವೀಕರಿಸುವ ಕಾರ್ಯ ನಡೆಯಿತು... ಈ ರಾಜಕಾರಣಿಗಳಿಗೇನಾದರೂ ಆತ್ಮಪ್ರಜ್ಞೆಯೆಂಬುದು ಇದೆಯೆ? ಪುನಃ ಚುನಾವಣೆ, ಮತ್ತೆ ಹೊಸ ಶಾಸಕರ ಹೊಸ ಖರ್ಚುಗಳು ........ ಇದರ ಹೊಣೆಯೆಲ್ಲ ಬಡ ಪ್ರಜೆಗಳ ಮೇಲೆ. ಹುಂ ಏನು ಮಾಡುವುದು ಕೆಟ್ಟ ಯೋಗದ ಕರ್ನಾಟಿಗರು ಅನುಭವಿಸಲೇ ಬೇಕಲ್ಲವೆ......
Post a Comment