ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 September, 2007

ಕುಂಚ ಬೆರಳುಗಳ ಆಟ ಓಟ!

ಆತ್ಮ ತೃಪ್ತಿ ಕೊಟ್ಟ

‌ <------ಮುಗಿಸದಚಿತ್ರ


<-------ಮೊದಲ ಚಾರ್ ಕೋಲ್ ಚಿತ











ನನ್ನ ಮೊದಲನೇ ಮತ್ತು ಕೊನೆಯ ತೈಲ ಚಿತ್ರ!---->

14 comments:

Unknown said...

chennagi moodi bandive chitragaLu

harsha

Satish said...

ನೀವೇ ಬರ್ದಿದ್ದಾ (ಬಿಡಿಸಿದ್ದಾ), ನಂಬೋಕೇ ಆಗ್ತಾ ಇಲ್ಲ!
ಬಹಳ ಚೆನ್ನಾಗಿವೇ ರೀ...ನಮಗೊಂದು ಕಾಪಿ ಕೊಡಿ.

Sheela Nayak said...

ಸತೀಶ್, ನಂಬದ್ದಿದ್ದರೆ ಬಿಡಿ! ನನ್ನ ಹಸ್ತಾಕ್ಷರ ಗಮನಿಸಿ ನೋಡಿ!
ತಮಾಷೆ ಮಾಡಿದ್ದು ಬಿಡಿ....ಅಂತರಂಗಕ್ಕೆ ಆಗಾಗ ಹೋಗಿದ್ದುದ್ದರಿಂದ ನೀಮ್ಮನ್ನು ನಮ್ಮ ಮನೆಯ ನೆಂಟರೆಂದು ತಿಳಿದು ಹಾಗೆ ಬರೆದೆ... ಅಂದ ಹಾಗೆ ನೀವು ನನ್ನ ಬ್ಲಾಗಿಗೆ ಹೇಗೆ ಬಂದಿರಿ? ಹೇಗೂ ಇರಲಿ... ಸಂತೋಷ. ನಿಮ್ಮಂತಹ ಹಳಬರ ಪ್ರೋತ್ಸಾಹ ನಮ್ಮಂತವರಿಗೆ ಬಹಳ ಹುರುಪು ನೀಡುತ್ತದೆ....

Sheela Nayak said...

ಶ್ರೀಹರ್ಷ, Thanks ನಮ್ಮ ಮನೆಗೆ ಬಂದು ಪ್ರೋತ್ಸಾಹಿಸಿದಕ್ಕೆ....

ವಿ.ರಾ.ಹೆ. said...

ಶೀಲಕ್ಕ, ನನ್ನ ಬ್ಲಾಗ್ ನಲ್ಲಿ ನಿಮ್ಮ ಕಮೆಂಟ್ ನೋಡಿ ಆ ಮೂಲಕ ನಿಮ್ಮ ಬ್ಲಾಗ್ ಗೆ ಬಂದೆ . ನಿಮ್ಮ ಚಿತ್ರಗಳು ಸೂಪರ್. ಒಳ್ಳೆ ಕಲೆ ಇದೆನಿಮಗೆ. ನನಗೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಇತ್ತು ಸಣ್ಣವನಿದ್ದಾಗ !.

ಗೃಹಿಣಿ(ನೀವು ’ಗ್ರಹಿಣಿ’ ಎಂದು ಬರೆದಿದ್ದೀರ)ಯಾದ ನೀವು ಬ್ಲಾಗ್ ಮೂಲಕ ಮನಸಿನ ಪುಟಗಳನ್ನು ತೆರೆದು ವಿಚಾರಗಳನ್ನು ತಿಳಿಸುತ್ತಿರುವುದು ಸಂತೋಷ. ಹೀಗೇ ಮುಂದುವರೆಯಲಿ. thanx

Sheela Nayak said...

ಅರೇ ತಮ್ಮಾ,Thanks!ನಿಮ್ಮ ಅಕ್ಕಾ ಶಬ್ದ ಮನಸ್ಸಿಗೆ ಮುದ ನೀಡಿತು!ಅಂದ ಹಾಗೆನಿನ್ನ(ತಮ್ಮನನ್ನು ಏಕವಚನದಿಂದ ಕರೆಯುವ ಹಕ್ಕು ಅಕ್ಕನಿಗೆ ಇದೆಯಷ್ಟೇ?) ಅಭಿಪ್ರಾಯ ತಿಳಿದು ಸಂತೋಷವಾಯಿತು! ಇದೆಲ್ಲಾ ನಾನು ಕಾಲೇಜ್ ಮುಗಿಸಿ ಒಂದು ವರ್ಷ ಮನೆಯಲ್ಲಿದ್ದಾಗ ಮಾಡಿದ್ದು.... ಆ ಕೃಷ್ಣ, ನನ್ನ ಮಗನಿಗೆ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಅವನಿಗೆ ಸಹಾಯ ಮಾಡಲು ಮಾಡಿದ್ದು! ಈಗ ಮಾಡಲು ಸಾಧ್ಯವಾಗುದಿಲ್ಲ...ಬಹುಶಃ ಆ ನೋವನ್ನು ಮರೆಯಲೆಂದೇ ನಾನು ಬ್ಲಾಗ್ ಪ್ರಾರಂಭಿಸಿರಬಹುದು..ಬ್ಲಾಗ್ ನನ್ನ ಕನಸನ್ನು ನನಸು ಮಾಡಲು ಸಹಾಯ ಮಾಡಿತು?.....

Satish said...

ನೋಡಿದ್ರಾ, ನಿಮ್ಮಲ್ಲಿದ್ದ ಚಿತ್ರಗಳನ್ನೆಲ್ಲಾ ಒಂದೇ ಪೋಸ್ಟ್‌ಗೆ ಹಾಕಿ ಈಗ ಹೊಸ ಚಿತ್ರ ಬರೋವರೆಗೆ ನಮ್ಮನ್ನು ಕಾಯೋ ಹಾಗೆ ಮಾಡಿದ್ರಿ!

ವಿ.ರಾ.ಹೆ. said...

ಸತೀಶ್, ಅವರು ಈಗ ಮಾಡಲು ಸಾಧ್ಯವಾಗುದಿಲ್ಲ ಅಂದಿದ್ದಾರೆ. ಹಾಗೇ ಹೇಳಿದಾಕ್ಷಣ ಬಿಡಲಾಗುತ್ತದೆಯೆ? ಹೊಸ ಚಿತ್ರಗಳು ತಯಾರಾಗ್ತಾ ಇವೆ. ಇನ್ನು ಸ್ವಲ್ಪ ದಿನದಲ್ಲಿ ಬಂದೇ ಬಿಡುತ್ತವೆ ಅನ್ನೋ ಭರವಸೆ ನಮ್ದು. ಅಲ್ವಾ ಶೀಲಕ್ಕ? ಕಾಯೋದ್ರಲ್ಲೂ ಖುಷಿ ಇರುತ್ತದೆ. ಹೇಳೋದು ಮರೆತಿದ್ದೆ..ತಮ್ಮನಿಗೆ ಏಕವಚನವೇ ಖುಷಿ. :-)

Pramod P T said...

ಹೇಗಿದ್ದೀರಾ ಶೀಲಾ ಅವರೆ,
ನನ್ನ ಬ್ಲಾಗ್ನಲ್ಲಿನ ನಿಮ್ಮ ಪ್ರತಿಕ್ರಿಯೆ ತುಂಬಾ ಖುಶಿ ಕೊಟ್ಟಿದೆ.
ಹಾಗೆಯೆ ನಿಮ್ಮ 'ಕುಂಚ ಬೆರಳುಗಳ ಆಟ ಓಟ' ಮನಸ್ಸಿಗೆ ಹಿಡಿಸಿತು. pencil sketch ನ ಕೈಚಳಕ ಅಧ್ಬುತ!!
ಆದರೆ oil painting ಕೊನೆದ್ಯಾಕೆ ಅಂತ ಗೊತ್ತಾಗ್ತಿಲ್ಲಾ...ಅಷ್ಟಕ್ಕೂ ಅದು ಮೊದಲ oil painting ಅಂತ ಅನ್ಸೋದೆ ಇಲ್ಲಾ... ತುಂಬಾ ಚೆನ್ನಾಗಿದೆ.. ಮುಂದುವರೆಸಿ...

Sheela Nayak said...

ಸತೀಶ್, ನನ್ನ ಚಿತ್ರಗಳಿಗೆ ಕಾಯ್ತಿರಾ? ಕ್ಷಮಿಸಿ...... ನಿಮಗೆ ಪ್ರತ್ಯುತ್ತರಿಸಲು ತುಂಬಾಸಮಯ ತೆಗೆದುಕೊಡೆ....ಏನು ಮಾಡಲಿ...ಗ್ರಹಿಣಿಯರ ಹಣೆಬರೆಹವೇ ಹಾಗೆ! ಅದರಲ್ಲೂ ಈಗ ಮಕ್ಕಳಿಗೆ ದಸರಾ ರಜೆ! ನಮಗೆ ಸಜೆ!
ಇರಿ ಇನ್ನೂ ಒಂದೆರಡು ಚಿತ್ರಗಳಿವೆ... ಹಾಕುತ್ತೇನೆ. ಅಲ್ಲಿಯವರೆಗೂಸ್ವಲ್ಪ ತಾಳ್ಮೆಯಿಂದಿರಿ!ಮದುವೆಯಾಗುವಾಗ ಕುಂಚ ಕೆಳಗಿಟ್ಟು ಸೌಟು ಕೈಗೆತ್ತಿಕೊಂಡೆ. ಹಾಗಾಗಿ ಅಷ್ಟೇ ಚಿತ್ರಗಳಿರುವುದು.ನೀವು ಬರೆದ ಬೆನಜಿರ್ ಭುಟ್ಟೋ ಬಗ್ಗೆನೂ ಪ್ರತಿಕ್ರಿಯಿಸಲೂ ಸಮಯವಿಲ್ಲ. ಹೇಗೋ ನನ್ನಿಷ್ಟದ ಬ್ಲಾಗ್ ಗಳನ್ನು ಅರ್ಧರ್ಧ ಓದುತ್ತಿದ್ದೇನೆ....ಏನಿದ್ದರೂ ನಿಮ್ಮ ಪ್ರತಿಕ್ರಿಯೆ ನನ್ನಲ್ಲಿ ಮತ್ತೆ ಚಿತ್ರ ಬಿಡಿಸುವ ಹುಮ್ಮಸು ತಂದಿದೆ. -:)

Sheela Nayak said...

ಸರಿ ವಿಕಾಸ್, ನಿನ್ನ ವಾದ ಸರಿ! ನಿನ್ನ ಪ್ರೇರಣೆ ವ್ಯರ್ಥವಾಗುವುದಿಲ್ಲ. ಮತ್ತೆ ಕುಂಚ ಕೈಗೆತ್ತಿಕೊಳ್ಳುತ್ತೇನೆ.

Sheela Nayak said...

ನಮಸ್ಕಾರ ಪ್ರಮೋದ್, ನಿಮ್ಮ ಕೈಚಳಕದ ಎದುರು ನನ್ನದೇನೂ ಅಲ್ಲ. ಆದರೂ ನಿಮ್ಮ ಮೆಚ್ಚುಗೆ ನನಗೆ ಮುದ ನೀಡಿತು! ಕೃಷ್ಣನ ಚಿತ್ರ ಮಾತ್ರ ಪೆನ್ಸಿಲಿನಿಂದ ಬೀಡಿಸಿದ್ದು... ಬಾಕಿ ಕಪ್ಪು ಬಿಳಿ ಚಿತ್ರಗಳು ಚಾರ್‍ಕೋಲಿನಿಂದ ಮಾಡಿದ್ದು. ಇವುಗಳ ಹಿಂದೆ ನನ್ನ ಗುರುಗಳಾದ ಬಿ.ಜಿ.ಮೊಹಮ್ಮದನವರ ಆಶೀರ್ವಾದವಿದೆ. ಅವರ ಮಾರ್ಗದರ್ಶನದಿಂದ ನಾನು ಇಷ್ಟು ಮಾಡಲು ಸಾಧ್ಯವಾಯಿತು. ಈಗ ನನಗೆ ತಿಳಿದುದನ್ನೆಲ್ಲಾ ನನ್ನ ಮಕ್ಕಳಿಗೆ ಧಾರೆಯೆರೆದ್ದಿದ್ದೇನೆ. ನನ್ನ ಮಗನೂ ತುಂಬಾ ಚೆನ್ನಾಗಿ ಮಾಡುತ್ತಾನೆ. ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ್ದಿದ್ದಾನೆ.ಈಗ ಪ್ರಥಮ ಪಿಯು ಆದುದರಿಂದ ಚಿತ್ರಗಳನ್ನು ಬಿಡಿಸುವುದಿಲ್ಲ. ಹಾಗಾಗಿ ನಾನು ಇನ್ನು ಮುಂದೆ ಬಹುಶಃ ಬಿಡಿಸಲು ಪ್ರಾರಂಭಿಸುತ್ತೇನೆ.

ನರೇಂದ್ರ ಪೈ said...

ಆತ್ಮೀಯ ಶೀಲಾ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಹಿಂದಿನ ನಿಮ್ಮ ಪ್ರತಿಕ್ರಿಯೆಗೆ ನಾನು ನನ್ನದೇ ಬ್ಲಾಗ್‌ನಲ್ಲಿ ಉತ್ತರಿಸಿದ್ದೆ, ನೀವು ಗಮನಿಸಿದ್ದೀರೋ ಇಲ್ಲವೋ ತಿಳಿಯದು. ನಿಮ್ಮ ಬ್ಲಾಗ್‌ಗೂ ಬರುತ್ತಿರುತ್ತೇನೆ. ನೀವು ಬರೆದಿರುವುದು ಕಡಿಮೆ, ನಿಮ್ಮ ಚಿತ್ರಗಳೇ ಮಾತನಾಡುತ್ತಿವೆ ಇಲ್ಲಿ! ನಿಮ್ಮ ಚಿತ್ರಗಳನ್ನು ನೋಡುವಾಗ ಖುಶಿಯಾಗುತ್ತದೆ. ಚಿತ್ರ ಬಿಡಿಸುವುದಕ್ಕೆ ಎಂಥ ಏಕಾಗ್ರತೆ ಬೇಕು, ಎಂಥ ಪ್ರೀತಿಯ ತಾಳ್ಮೆ ಇರಬೇಕು! ಅವೆಲ್ಲ ನಿಮ್ಮಲ್ಲಿರುವುದು ಸಂತೋಷ.
ಇನ್ನು ಈ ಪುಟ್ಟ ಬದುಕಿನಲ್ಲಿ ನಾವು ರೂಪಿಸಿಕೊಳ್ಳುವ ಸಂಬಂಧಗಳು, ಸುಪ್ತವಾದ ಭಾವನಾತ್ಮಕ ಅನುಬಂಧಗಳು ಮತ್ತು ಸಾವೆಂಬ ಕೊನೆ ಈ ಎಲ್ಲದಕ್ಕೂ ಕಟ್ಟಿಕೊಡುವ ಒಂದು ಚೌಕಟ್ಟು - ಇವುಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ, ಯಾರು ಬರೆದರೂ ಮನಸ್ಸು ಕರಗುವುದೇ! ಅದರಲ್ಲಿ ವಿಶೇಷವಿಲ್ಲ. ಆದರೆ ನೀವು ಅದಕ್ಕೆಲ್ಲ ಸ್ಪಂದಿಸಿದ್ದು ವಿಶೇಷ. ಯಾಕೆಂದರೆ ಇವತ್ತು ಹೀಗೆ ಸ್ಪಂದಿಸಬಲ್ಲವರ ಸಂಖ್ಯೆ ಕಡಿಮೆ ಮತ್ತು ಅದಕ್ಕೆಲ್ಲ ಸಮಯವೂ ಇರುವುದಿಲ್ಲ! ಹಾಗಾಗಿ ದಿನವೂ ಹೀಗೆ ಒಂದು ಕ್ಷಣ ಸುಮ್ಮನೇ ಕುಳಿತು ನಡೆದು ಬಂದ ದಾರಿಯನ್ನು ಧೇನಿಸಿ ನೋಡುವ ವ್ಯವಧಾನವಿಲ್ಲದ ಬದುಕು ಸೊರಗುತ್ತಿದೆ, ಧಾವಂತದ ಓಟದಲ್ಲಿ, ಅಲ್ಲವೇ?
ನಿಮ್ಮ ಸ್ಪಂದನಕ್ಕೆ ಧನ್ಯವಾದಗಳು.

Sushrutha Dodderi said...

ಒಳ್ಳೇ ಚಿತ್ರಗಳು ಶೀಲಕ್ಕ. ಬಿಡಿಸುವುದನ್ನು ಬಿಡಬೇಡಿ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...