ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 August, 2007

ನಾಲ್ಕು ಮುದ್ರೆಗಳು!

                ನಿನ್ನೆ "The Times of India"ದಲ್ಲಿ, ಮಾತನಾಡುವ ಮರದಲ್ಲಿ ಬರುವ ಓಶೋನವರ ಬರಹ ಓದಿದೆ. ನಮ್ಮ ಆಧುನಿಕ ಜೀವನ ಶೈಲಿಗೆ ಹೇಳಿಸಿದ ಬರಹ ಎಂದು ಅನಿಸಿತು. ಆ ನಾಲ್ಕು ಮುದ್ರೆಗಳು ನಮ್ಮ ಹುಚ್ಚು ಮನಸಿಗೆ ಓಟಕ್ಕೆ ಕಡಿವಾಣ ಹಾಕಿತು ಎಂದು ಅನಿಸಿ, ಎಲ್ಲರಿಗೂ ತಿಳಿಸುವ ಎಂದು ಈ ನನ್ನ ಮೊದಲ ಬ್ಲಾಗ್ ಪ್ರಾರಂಭಿಸುತಿದ್ದೇನೆ.


                     ಅಂತಿಮವಾಗಿ ಮುಕ್ತಿ ಪಡೆಯಲು ಮಾನವನು ತನ್ನ ಒಳಗಿರುವ ನಾಲ್ಕು ದ್ವಾರಗಳ  ಬೀಗಗಳನ್ನು ಮುರಿದು ದಾಟಬೇಕು. ಮೊದಲನೇ ಮುದ್ರೆ ಕರ್ಮ ಮುದ್ರೆ, ನಮ್ಮ ಹೊರ ಕವಚ. ನಾವು ಯಾವ ಕೆಲಸ ಮಾಡುತ್ತಿದ್ದೇವೆಯೋ ಅದು ನಮಗೆ ಚೆನ್ನಾಗಿ ತಿಳಿದಿರಬೇಕು. ಕೋಪವೋ , ತಾಪವೋ, ಸುಖವೋ, ದುಃಖವೋ ಆದನ್ನು ಸರಿಯಾಗಿ ತಿಳಿದು ತಪಸ್ಸಿನಂತೆ ಮಾಡಬೇಕು.   ನಮಗೆ ಚೆನ್ನಾಗಿ ತಿಳಿಯದ ವಿಷಯಗಳು ನಮ್ಮ ಸುತ್ತಲೇ ತಿರುಗುತ್ತದೆ. ಅತೃಪ್ತಿಯನ್ನು ಹುಟ್ಟಿಸುತ್ತದೆ.
         
              ಎರಡನೇದು ಜ್ಞಾನ ಮುದ್ರೆ, ಸ್ವಲ್ಪ ಕೆಳಭಾಗದಲ್ಲಿರುವುದು. ನಾವು ಮಾಡುವ ಕರ್ಮ ಎಲ್ಲರ ಕಣ್ಣಿಗೆ ಕಾಣುತ್ತದೆ. ಆದರೆ ನಮ್ಮ ಭಾವನೆ ಯಾರಿಗೂ ಕಾಣುವುದಿಲ್ಲ! ನಾವು ಯಾವಾಗಲೂ ನಮಗೆ ಅನುಭವಕ್ಕೆ ಬಂದದನ್ನೇ ನಂಬಬೇಕು. ಉದಾಹರೆಣೆಗೆ ಯಾರಾದರು ನಮಗೆ ದೇವರಿರುವನೇ ಎಂದು ಕೇಳಿದರೆ ನಾವು ನಮಗೆ ನಿಜವಾಗಿ ಗೊತ್ತಿದ್ದ ವಿಷಯ ಹೇಳಬೇಕು. ನಮ್ಮ ಉತ್ತರದಲ್ಲಿ ಯಾವಾಗಲು ಪ್ರಾಮಾಣಿಕತನವಿರಬೇಕು. ಈ ಭಾವನೆ ಬೆಳೆಸಿಕೊಂಡಾಗ , ನಮಗೆ ನಿಜವಾದ ಸ್ವಾತಂತ್ರ್ಯದ ಅನುಭವವಾಗುವುದು.
             
        ಮೂರನೆಯ ಮುದ್ರೆ ಸಮಯ ಮುದ್ರೆ. ನಾವು ಈಗ ಕಾಲದಲ್ಲಿದ್ದೇವೆ. ಭೂತ ಕಾಲ ಕಳೆದಿದೆ, ಭವಿಷ್ಯದ ಕಾಲ ನಮಗೆ ತಿಳಿದಿಲ್ಲ. ಭೂತ, ಭವಿಷ್ಯಯದ ಬಗ್ಗೆ ನಾವು ಚಿಂತಿಸಿದರೆ, ಇಲ್ಲಾ ನಾವು ನೆನಪಿನಲ್ಲಿರುತ್ತೇವೆ ಅಥವಾ ಸ್ವಪ್ನದಲ್ಲಿರುತ್ತೇವೆ. ಇವೆರಡರನ್ನು ಒಡೆದರೆ ನಾವು ಮೂರನೆಯ ಕದ ತೆರದ ಹಾಗೆ. ಅಂದರೆ ನಾವು ವರ್ತಮಾನ ಕಾಲವನ್ನು ಪೂರ್ತಿಯಾಗಿ ಅನುಭವಿಸಬೇಕು. ಅಂದ ಮಾತ್ರಕ್ಕೆ ಇಷ್ಟ ಬಂದ ಹಾಗೆ ಮಾಡುವುದಲ್ಲ..ನಮ್ಮ ಇಂದಿನ ಕಾರ್ಯ ನಮ್ಮ ಭೂತ ಕಾಲದ ಅನುಭವದ ಆಧಾರ ಹೊಂದಿರಬೇಕು   ಹಾಗು ಮುಂದಿನ ಭವಿಷ್ಯಕಾಲದಲ್ಲಿ ಅದು ಬೀರುವ ಪರಿಣಾಮದ ಅರಿವಿರಬೇಕು.

             ನಾಲ್ಕನೇ ಬಾಗಿಲು, ಮಹಾಮುದ್ರೆ. ಪವಿತ್ರವಾದ ನಮ್ಮ  ಒಳಗಿನ ಭಾಗ. ಚಂಡಮಾರುತದ ಕೇಂದ್ರ. ಆಕಾಶದ ಹಾಗೆ ಖಾಲಿ ಜಾಗವಿದೆ ಈ ಒಳಭಾಗದಲ್ಲಿ. ಇದಕ್ಕೆ ಕಾಲ, ಜ್ಞಾನ, ಕರ್ಮದ ಪದರಗಳು. ಈ  ಮೂರು ದ್ವಾರಗಳನ್ನು ಮುರಿದು ಬಂದು ಇಲ್ಲಿ ತಲುಪಿದ ನಂತರ ಎಲ್ಲಾ ಬಂಧಗಳಿಂದ ಬಿಡುಗಡೆ. ಆತ್ಮವು ಪರಮಾತ್ಮನಲ್ಲಿ ಲೀನವಾಗುವುದು.  ಹುಟ್ಟು, ಸಾವುಗಳ ಬಂಧಗಳಿಂದ ಶಾಶ್ವತ ಬಿಡುಗಡೆ.   

3 comments:

ಸಂತೋಷಕುಮಾರ said...

ಕನ್ನಡ ಬ್ಲಾಗು ಲೋಕಕ್ಕೆ ಹಾರ್ಧಿಕ ಸ್ವಾಗತ..

Sheela Nayak said...

ಚಿರವಿರಹಿಗಳೇ thanks!
ನಾನಂತೂ ಯಾರು ನನ್ನ ಬ್ಲಾಗಿಗೆ ಬರುವುದನ್ನು ನಿರೀಕ್ಷಿಸಿರಲ್ಲಿಲ್ಲ.ನನ್ನ ಮನಸಿನ ಭಾವನೆಗಳನ್ನು ಹೊರಹಾಕುವದಕ್ಕಾಗಿಯೇ ಬರೆಯಲು ಪ್ರಾರಂಭಿಸಿರುವೆ. ನಿಮ್ಮ ಬ್ಲಾಗಿಗೆ ಭೇಟಿಕೊಟ್ಟೆ. ಬರವಣಿಗೆಯ ಶೈಲಿ ಚೆನ್ನಾಗಿದೆ. ಸದ್ಯದಲ್ಲೇ comments ನಿರೀಕ್ಷಿಸಿ!

Jagali bhaagavata said...

Nice one. baritaa iri.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...