ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 March, 2025

ಕಠಿಣ ಶ್ರಮ ಮತ್ತು ಪ್ರಾಮಾಣಿಕ ಯತ್ನವಿಲ್ಲದೆ ಕಾರ್ಯ...

ಯಥಾ ಏಕೇನ ಹಸ್ತೇನ ತಾಲಿಕಾ ನ ಸಂಪ್ರಪದ್ಯತೆ|
ತಥೋದ್ಯಮ ಪರಿತ್ಯಕ್ತ ಕರ್ಮಂ ನೋತ್ಪಾದ್ಯತೆ ಫಲಂ||

ಒಂದು ಹಸ್ತವು ಚಪ್ಪಾಳೆಯನ್ನು ಉತ್ಪಾದಿಸದು. ಅಂತೆಯೇ, ಕಠಿಣ ಮತ್ತು ಪ್ರಾಮಾಣಿಕ ಯತ್ನವಿಲ್ಲದ ಕಾರ್ಯ 

24 February, 2025

ಒಂದಿಷ್ಟು ಕೃತಜ್ಞತೆ ಸಲ್ಲಿಸಿ ನಿರಾಳಲಾಗಲು ಬಯಸುತ್ತೇನೆ!!!


       ಇಂದು ಅದ್ಯಾಕೋ ಮನಸು ತುಂಬಿ ಬಂದಿದೆ...ಅದರ ಕಾರಣಕರ್ತರಿಗೆ ಒಂದಿಷ್ಟು ಕೃತಜ್ಞತೆ ಸಲ್ಲಿಸಿ ನಿರಾಳಲಾಗಲು ಬಯಸುತ್ತೇನೆ.

           ಮೊದಲನೆಯ ಕೃತಜ್ಞತೆ  ನನ್ನೊಡೆಯ ಶ್ರೀರಾಮ ಮತ್ತವನ ಬಂಟ ಹನುಮನಿಗೆ!
   ಬದುಕಿನ ಪಥಗಳು ಮರುಭೂಮಿಯಾಗಿದ್ದರೂ ಅಲ್ಲಲ್ಲಿ ಓಯಸಿಸ್‍ಗಳನ್ನು ಸೃಷ್ಟಿಸಿ, ದಾರಿ ತಪ್ಪದಂತೆ ಹಲವು ಬಾರಿ ಕೈಹಿಡಿದು ನಡೆಸಿ, ಮರಳು ದಿಬ್ಬಗಳಲ್ಲಿ ಕಾಲುಗಳು ಹೂತುಹೋದಾಗ ಎತ್ತಿಕೊಂಡೇ ನಡೆದವನಿಗೆ ಮತ್ತೊಮ್ಮೆ ಶತಶತ ಪ್ರಣಾಮಗಳು!

     ಇಂದು ಅಪರಾಹ್ನ ಕ್ಯಾಂಪ್ ಮುಗಿದು ಮನೆಯ ಕಡೆ ಧಾವಿಸುತ್ತಿದ್ದವಳಿಗೆ ಅನಿರೀಕ್ಷಿತವಾಗಿ ಗಿರಿಯವರಿಂದ ಲಿಫ್ಟ್ ಸಿಕ್ಕಿತು. ಹೊಟ್ಟೆಯಲ್ಲಿ ಇಲಿಗಳ ಹಾರಾಟ, ತಲೆಯ ಮೇಲೆ ಸುಡುವ ಬಿಸಿಲು... ಇವೆಲ್ಲದರಿಂದಲೂ ಪಾರಾಗಿ ಬೇಗ ಮನೆ ಮುಟ್ಟಿದೆ. ಆತ್ಮೀಯ ಗಿರಿ ಕಾಮತ್ ಅವರಿಗೂ ಹಾಗೂ ಅವರಿಗೆ ಪ್ರೇರಣೆ ನೀಡಿದ ನನ್ನೊಡೆಯನಿಗೂ ವಂದನೆಗಳು!



           ಅಮ್ಮನ ಮನೆಯಲ್ಲಿದ್ದ ಬೀಗದ ಕೈ ತೆಗೆದುಕೊಳ್ಳಲು ಹೊರಟವಳಿಗೆ ಮೃಷ್ಟಾನ್ನ ಭೋಜನ ಕಾದಿತ್ತು! ಅಮ್ಮ ತಟ್ಟೆ ಹಾಕಿ, ನನಗೋಸ್ಕರ ತಯಾರಿಸಿದ ಬಾಳೆಕಾಯಿ ಉಪ್ಕರಿ, ಸೋರೆಕಾಯಿ ಹುಳಿ, ಮೆಣಸಿನ ಬೋಂಡ, ಕ್ಯಾಬೆಜ್ ಅಂಬಡೆ....ವ್ಹಾ...ತುಂಬಾ ದಿನಗಳ ನಂತರ ಸುಗ್ರಾಸ ಭೋಜನ ಬಡಿಸಿದರು! ಕೆಲಸ ಮಾಡಿ ಇಳಿದು ಹೋಗಿರುವೆನೆಂದು ಅಮ್ಮನಿಗೆ ಆತಂಕ... ಗಂಜಿನೀರಿನಲ್ಲಿ ಉಪ್ಪು, ತುಪ್ಪ ಹಾಕಿ ಕುಡಿಯಲು ಆಗ್ರಹ. ಧನ್ಯೋಸ್ಮಿ!!!
ಅಮ್ಮನಿಗೆ ನನ್ನ ತಮ್ಮಂದಿರ ಮೇಲೆ ಹೆಚ್ಚು ಪ್ರೀತಿ ಎಂದು ನನಗಿತ್ತು ಒಂದಿಷ್ಟು ಮುನಿಸು. ತುಂಟ ತಮ್ಮ ಮತ್ತು ಕಲಿಯಲು ಒಂದಿಷ್ಟು ಹಿಂದೆಯಿದ್ದ ತಮ್ಮಂದಿರ ನಿಭಾಯಿಸುತ್ತ ಅಂತಹುದೇನಿಲ್ಲದ ನನ್ನ ಬಗ್ಗೆ ನಿರಾತಂಕವಾಗಿದ್ದಳು ನನ್ನಮ್ಮ. ನನಗಾದರೋ ಅಮ್ಮನ ಪ್ರೀತಿಯಲ್ಲಿ ಸಿಂಹಪಾಲು ಬೇಕಿತ್ತು..ಆ ಸಣ್ಣ ಪ್ರಾಯದಲ್ಲಿ ಅಮ್ಮನ ಕಷ್ಟಗಳು ನಮಗೆ ಅರ್ಥವಾಗುತ್ತಿರಲಿಲ್ಲ. ಆದರೆ ಈಗ ನನ್ನ ಪಾಲಿಗೆ ಅಮ್ಮನ ಪ್ರೀತಿಯ ಸಿಂಹಪಾಲೇ ದೊರಕುತ್ತಿದೆ! ೪೩ ವರ್ಷದ ಮಗಳಿಗೆ ಕೈತುತ್ತು ನೀಡಲೂ ತಯಾರಿದ್ದಾಳೆ ಅಮ್ಮ. ಇಂತಹ ಅಮ್ಮನನ್ನು ಪಡೆದ ನಾನು ಧನ್ಯಳು. ಅಮ್ಮ, ನೀನಿಲ್ಲದ ಬದುಕು ಊಹಿಸುವುದೂ ಕಷ್ಟ. ಅಮ್ಮನ ಬಳಿ ನಾನು ಅವಳ ಋಣ ತೀರಿಸುವ ಬಗ್ಗೆ ಮಾತಾಡಿದರೆ ಆಕೆಗೆ ಸಿಟ್ಟೇ ಬರುತ್ತದೆ. ಅವಳದು ಒಂದೇ ಮಾತು- “ತಾಯಿ, ಮಕ್ಕಳ ಮಧ್ಯೆ ಋಣದ ಮಾತು ಎಂದೂ ಬರುವುದಿಲ್ಲ”. ಸರಿಯಮ್ಮ, ಆದರೆ ನನ್ನ ಆಶಯ ಏನೆಂದು ಕೇಳಿ. ಮುಂದಿನ ಜನ್ಮದಲ್ಲಿ ನೀವು ನನ್ನ ಮಗಳಾಗಿ ಹುಟ್ಟಬೇಕು!

      ಚಿಕ್ಕಂದಿನಿಂದಲೂ ಚಿತ್ರಕಲೆ ಮತ್ತು ಸಾಹಿತ್ಯದ ಸೆಳೆತವಿತ್ತು. ಬರೆಯುತ್ತಿದ್ದ ಬರಹಗಳು ಕಸದ ಬುಟ್ಟಿ ಸೇರುತ್ತಿದ್ದವು, ಇಲ್ಲವೇ ನನ್ನೊಡಲಲ್ಲಿಯೇ ಸಾವನ್ನಪ್ಪುತ್ತಿದ್ದವು. ೨೦೧೧ರ ಕೃಷ್ಣಾಷ್ಟಮಿಯಂದು ಹುಟ್ಟಿದ ಕವನವನ್ನು ಧೈರ್ಯದಿಂದ ಸಂಪದದಲ್ಲಿ ಹಾಕಿದೆ. ಕಾಗುಣಿತದ ತಪ್ಪುಗಳನ್ನು ಹಿತವಚನದಿಂದಲೇ ತಿದ್ದಿದ ಗುರು ಹಿರಿಯರೆಲ್ಲರಿಗೂ ಕೃತಜ್ಞತೆಗಳು!

      ನನ್ನೆಲ್ಲಾ ಚಟುವಟಿಕೆಗಳನ್ನು, ಬರಹಗಳನ್ನು ಇಷ್ಟಪಡುವ ನನ್ನ ಬ್ಲಾಗ್ ಬಂಧುಗಳಿಗೂ, ಫೇಸ್ ಬುಕ್ ಮಿತ್ರರಿಗೂ ಕೋಟಿ ಕೋಟಿ ನಮನ!
   
      ನನ್ನಲ್ಲಿ ವಿಶ್ವಾಸವಿಟ್ಟು, ನನ್ನನ್ನು ತಮ್ಮ ಕ್ಯಾಂಪಿನಲ್ಲಿ, ತಮ್ಮ ಚಟುವಟಿಕೆಗಳಲ್ಲಿ ಪಾಲುದಾರಳನ್ನಾಗಿ ಮಾಡಿದ ಆರ್. ಎಕ್ಸ್ ಯಜಮಾನಿಯರಾದ ವಂದನಾ ನಾಯಕ್, ಗಾಯತ್ರಿ ಭಟ್ ಮತ್ತು ಲಿಟ್ಲ್ ಅಬಿಯ ಒಡತಿ ರೇಶ್ಮಾ ಬಾಳಿಗಾ ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು!

ಯೋಗಾಯೋಗ!

07 October, 2021

ಪಶ್ಚಿಮ ಘಟ್ಟಗಳ ನೋಟ!


 

ಹೀಗೆ ಒಲವಿನೊಂದಿಗೆ ಅಂತರಂಗ ನಿವೇದನೆ!

 ಒಲವೇ,

 ಬೆಂಕಿಯ ಹೊಳೆಯುವ ಬಣ್ಣಕ್ಕೆ 

ಮರುಳಾಗದೆ ಇರಲಾಗುವುದೇ

ಎಲ್ಲರಂತೆ ನಾನೂ

ಹಾಗೆಂದು ನಾ ಪಾತರಗಿತ್ತಿಯಲ್ಲವಲ್ಲ

ಒಮ್ಮೆ ಕೈ ಸುಟ್ಟುಕೊಂಡೆಯಷ್ಟೆ!





29 December, 2019

ಮಂಕುತಿಮ್ಮನ ಗೆರೆಗಳು-2

ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು।
ಸನ್ನಿವೇಶದ ಸೂಕ್ಷ್ಮವರಿತು ಧೃತಿದಳೆದು।।
ತನ್ನ ಕರ್ತವ್ಯ ಪರಧಿಯ ಮೀರದುಜ್ಜುಗಿಸೆ।
ಪುಣ್ಯಶಾಲಿಯ ಪಾಡು॥-ಮಂಕುತಿಮ್ಮ



ಮಂಕುತಿಮ್ಮನಿಗೊಂದಿಷ್ಟು ಗೆರೆಗಳು...

ತತ್ವಸಾಕ್ಷಾತ್ಕಾರ ಚಿತ್ತಶುದ್ದಿಯಿನಹುದು।
ಚಿತ್ತಶೋಧನೆ ಮತಿಚಮತ್ಕಾರವಲ್ಲ।|
ಬಿತ್ತರದ ಲೋಕಪರಿಪಾಕದಿಂ ಸತ್ಕರ್ಮ|
ಸಕ್ತಿಯಿಂ ಶುದ್ಧತೆಯೂ-ಮಂಕುತಿಮ್ಮ।


ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...