ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 April, 2015

ರಾಜಾ ರವಿ ವರ್ಮ.. ಗುರು ನಮನ!



ಜನುಮ ದಿನದ ಶುಭ ಹಾರೈಕೆಗಳು ಗುರುಗಳೇ!!!

ಸ್ಥಾನ-ಮಾನ!!!

“ಮೇಡಮ್, ಕಲಾವಿದೆಯಾಗಿ ನಿಮ್ಮ ಸ್ಥಾನ ಯಾವುದು?”

ಹತ್ತನೇ ತರಗತಿಯ ಹಿಂದಿ ಕಲಿಯಲು ಬಂದ ರಿಯಾ ರೀನಾ ಅವರ ಅಮ್ಮ ನಮ್ಮ ಮನೆಯಲ್ಲೆಲ್ಲ ಹರಡಿದ್ದ ಪೈಂಟಿಂಗ್ ಗಳನ್ನು ನೋಡಿ ಕೇಳಿದಾಗ ನನಗೆ ದಂಗಾಯಿತು!

“ಅರೇ ಮೇಡಮ್, ನಮಗೆ ನಾವೇ ಅಂಕ ಕೊಡಲಾಗುತ್ತಾ! ಬ್ಲಾಗಗಳಲ್ಲಿ, ಇನ್ಸ್ಟಾಗ್ರಾಮ್ , ಟ್ವಿಟರ್, ಫೇಸ್ ಬುಕ್ ಗಳಲ್ಲಿ ನಮಗೆ ಸಿಗುವ ಇತರ ಕಲಾವಿದರ ಪ್ರತಿಕ್ರಿಯೆಗಳು.. ಅಲ್ಲದೆ ಕಲಾವಿದರು ಒಬ್ಬರನೊಬ್ಬರು ಭೇಟಿಯಾದಾಗ ಪರಸ್ಪರ ಕೊಡುವ ಮಾನ ಸಮ್ಮಾನಗಳು ಎಲ್ಲವನ್ನೂ ತಿಳಿಸುತ್ತವೆ. ನನ್ನ ಮಟ್ಟಿಗೆ ಇವೇ ಮಾನದಂಡಗಳು!

“ನನಗೆ ಅಂತಹ ಗುರುತರ ಸ್ಥಾನವಿನ್ನೂ ಸಿಕ್ಕಿಲ್ಲ.. ಮತ್ತು ನನಗೆ ಅದರ ಹಂಬಲವೂ ಇಲ್ಲ. ಬಹುಶಃ ಇಪ್ಪತ್ತೈದು ವರುಷಗಳ ಹಿಂದಿನ ಕನಸುಗಳ್ಯಾವುವೂ ಈಗಿನ್ನು ಉಳಿದಿಲ್ಲ!  ಕಲಾವಿದೆಯಾಗಿ ಇತರ ಮೆಚ್ಚುಗೆಗಳಿಸುವುದಕ್ಕಿಂತ ನನಗೆ ಆತ್ಮ ತೃಪ್ತಿ ಕೊಟ್ಟಿದೆಯೋ ಎಂಬುದು ಮುಖ್ಯ! ಬಹುಶಃ ಹೀಗೇ ಕಲಿಯುತ್ತ ಕಲಿಯುತ್ತ ಮುಂದಿನ ಜನ್ಮದಲ್ಲಿ ಪೂರ್ಣಪ್ರಮಾಣದ ಕಲಾವಿದೆಯಾಗಬಹುದೇನೋ!”

ಅಲ್ಲಿಂದಿಷ್ಟನ್ನು ಇಲ್ಲಿಂದಿಷ್ಟನ್ನು ಹೆಕ್ಕಿ.. ಅದಕ್ಕೊಂದಿಷ್ಟು ಸ್ವಂತಿಕೆಯನ್ನು ಬೆರೆಸಿ ಜವಾಬ್ದಾರಿಗಳ ನಡುವೆ ಹವ್ಯಾಸವನ್ನು ಪೋಷಿಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ!”



ಈ ಕೆಳಗಿನ ಪೈಂಟಿಂಗ್ ಮಾಡಲು ಬೇಕಾದ ಪರಿಕರ ಕೊಳ್ಳುವಾಗ  ಅವರಿಗೆ ಪ್ರಖ್ಯಾತ ಕಲಾವಿದರೊಬ್ಬರು ಕಂಡರಂತೆ ಈ ಮಕ್ಕಳಿಗೆ,.. ಅವರ ಬಳಿ ಹಸ್ತಾಕ್ಷರ ಪಡಕೊಂಡ ರಿಯಾ ರಿನಾ ಹೆಮ್ಮೆಯಿಂದ ತೋರಿಸಿದರು.. ನೀವು ಬಹಳ ಅದೃಷ್ಟವಂತರು ಎಂದಂದೆ!

ತಟ್ಟನೆ ಅವರಮ್ಮ ಮುಂದೊಂದು ದಿನ ನಿಮ್ಮ ಹಸ್ತಾಕ್ಷರವನ್ನೂ ಕೇಳುತ್ತಾರೆ ನೋಡಿ ಅಂದಾಗ ಸುಮ್ಮನೆ ನಕ್ಕು ಬಿಟ್ಟೆ..

(ರಿಯಾ ರೀನಾಳ ಪ್ರಿಯ ಹಿಂದಿ ಅಧ್ಯಾಪಿಕೆಗೆ ವರ್ಗವಾಗಿದೆ.. ನೆನಪಿನ ಕುರುಹಾಗಿ ಈ ಚಿತ್ರ ಜೊತೆಗೆ  ನಾನು ಬರೆದ ಮೊತ್ತ ಮೊದಲ ಹಿಂದಿ ಕವಿತೆಯ ಕ್ವಿಲಿಂಗ್ ಹೂ ಎಲೆಗಳ ಗ್ರೀಟಿಂಗ್ ಕಾರ್ಡ್ ಕೊಡುತ್ತಿದ್ದಾರೆ )

17 April, 2015

ಬ್ಯಾಲೆ


ಒಂದೆಲೆಯ ಬಲ!



ಒಲವು!!!

ಬಾಳಿಗಂತೂ ಸಾವೆ ಕೊನೆಯೆ?
ಅದರಾಚೆಗೂ ನಿನ್ನ ಒಲವೆ?
ಒಲವು ತಾನೆ ತನಗೆ ಮೇರೆ
ಒಲವಿಗಂತೂ ಮೇರೆ ಇರದು!

- ಕೆ.ಎಸ್, ನರಸಿಂಹಸ್ವಾಮಿ

06 April, 2015

||ಆರಾಧನೆ||

||ಹರ ಹರ ಮಹಾದೇವ||

||ಯೇSಪ್ಯನ್ಯದೇವತಾ ಭಕ್ತಾ ಯಜಂತೆ ಶೃದ್ಧಯಾನವ್ವಿತಾಃ

ತೇsಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್||

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...