ಪ್ರತಿ ವರ್ಷ ಮಂಗಳೂರಿನ ಆರ್‌ಎಕ್ಸ್‌ನವರು ಮಕ್ಕಳ ಶಿಬಿರವನ್ನು ಎಪ್ರಿಲ್ ತಿಂಗಳ ಎರಡನೆಯ ವಾರದಲ್ಲಿ ಹತ್ತು ದಿನ ಏರ್ಪಡಿಸುವರು. ೫ವರ್ಷದ ಮಗುವಿಂದ ೧೫ವರ್ಷದ ಮಕ್ಕಳು ಈ ಶಿಬಿರದಲ್ಲಿ ಬೆಳಿಗ್ಗೆ ೯ರಿಂದ ಸಂಜೆ ೪.೩೦ವರೆಗೆ ಪಾಲ್ಗೊಂಡು ಹೊಸ ಹೊಸ ಆಟ, ಕಲೆಗಳನ್ನು ಕಲಿಯುವರು. ಕೊನೆಯ ದಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಈ ವರ್ಷ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾನು ಪಾಲ್ಗೊಂಡಿದ್ದೆ. ಕೊನೆಯ ದಿನದ ನಡೆಯುವ ನಾಟಕದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದ ಅದಕ್ಕಾಗಿ ಕುವೆಂಪುನವರ ಕಿಂದರಿ ಜೋಗಿ ನಾಟಕವನ್ನು ಒಂದಿಷ್ಟು ರೂಪಾಂತರಗೊಳಿಸಿ ತುಳು ಭಾಷೆಯಲ್ಲಿ ಆಡಿಸುವ ನನ್ನ ನಿರ್ಧಾರ ನಮ್ಮ ಶಿಬಿರದ ಯೋಜಕರಿಗೆ ಇಷ್ಟವಾಯಿತು. ಪುಣ್ಯ ಕೋಟಿ ಗೋವಿನ ಹಾಡನ್ನು ಪುಟ್ಟ ಮಕ್ಕಳಿಂದ ನೃತ್ಯ ರೂಪಕವಾಗಿಯೂ, ಭಕ್ತ ಸುಧಾಮನ ಕತೆಯನ್ನು ಕೊಂಕಣಿ ಭಾಷೆಯಲ್ಲಿಯೂ ಮಕ್ಕಳಿಂದ ನಾಟಕವಾಡಿಸುವ ಹೊಣೆಹೊತ್ತ ನನಗೆ ತಯಾರಿ ನಡೆಸಲು ಹೆಚ್ಚು ದಿನಗಳು ಸಿಗಲಿಲ್ಲ. ಆದರೂ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್...ಹೀಗೆ ಎರಡೆರಡು ...ಹೊಣೆ. <ಕಿಂದರಿ ಜೋಗಿ> ನನ್ನ ಮೊದಲ ಸ್ಕ್ರಿಪ್ಟ್ ಇಲ್ಲಿದೆ ನೋಡಿ!
ಕಿಂದರಿ ಜೋಗಿ!
ಪಾತ್ರ ವರ್ಗ- ಪಟೇಲ, ಮಾದ, ಕಿಂದರಿ ಜೋಗಿ, ಪಾತಮ್ಮ, ಗವರಕ್ಕ. ವೀರೇಶ, ಶಿವಪ್ಪ, ಇಲಿಗಳಾಗಿ ೧೦ ಚಿಕ್ಕ ಮಕ್ಕಳು, ಮತ್ತು ೧೦,೧೨ ಮಕ್ಕಳು.
ಮೊದಲನೆಯ ಅಂಕ
ಊರಿನ ಜನರು ಎಲ್ಲರೂ ಚಿಂತಾಗ್ರಸ್ತರಾಗಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮಾತು ಬರದ ಮೂಕರಂತೆ ಒಬ್ಬರ ಮುಖವನ್ನು ಇನ್ನೊಬ್ಬರು ಮಿಕಿಮಿಕಿ ನೋಡುತ್ತಿರುವಂತೆ...ಒಂದು ಕ್ಷೀಣ ಸ್ವರ ಕೇಳುತ್ತದೆ.
ಶಿವಪ್ಪ-( ಕ್ಷೀಣವಾಗಿ ಸುರುವಾಗಿ ಮತ್ತೆ ಗಟ್ಟಿ ಸ್ವರ ಬರಬೇಕು) ಈ ಎಲಿತ ಎಂಚಿನ ಉಪದ್ರವ ಮಾರಾಯ! ಒಂಚೂರು ಪೋಡಿಗೆಲಾ ಇಜ್ಜಿ. ರಾತ್ರಿ ಪೂರಾ ಎಂಕ್ಲೆನ ಮೈಯೊಡು ಆರಾಮಾದ ತಿರ್ಗೊಂದುಪ್ಪುಂಡು!
ಪಾತಮ್ಮ- ( ಅಳುವಂತೆ ರಾಗವಾಗಿ) ಒಂಜಿ ಸಾಮಾನುಲಾ ಬುಡ್ಪುಜ್ಜಿಯೆ! ಅರ್ಧರ್ಧ ತಿಂದ ಪಾಡ್ದ ಗಮ್ಮತ್ತು ಮಲ್ಪರೆ!
ವೀರೇಶ- ಅಂದಂದ....ಒಂಜೊಂಜಿ ಎಲಿತ ಸೈಜ಼್ ತೂತರಾ! ಎಲ್ಲೆ ಪಿಲಿ ಲೆಕ್ಕ ತೋಜುಂಡು. ತೂಂಡ ಪೋಡಿಗೆ ಆಪುಂಡು. ಉಂದು ಪೂರಾ ಜೋಕುಳ ಕಣದ ತಿನ್ಪಿನ..ಅವು ಎಂಚಿನ ಮಾರಾಯ.....ಪೀಜ್......ಬರ್ಗ್...ತಿಂದದ ಅಂಚ ಆತಿನಿ.
ಹಿಂದಿನಿಂದ ಮಕ್ಕಳ ಧ್ವನಿ- ಪಿಜ್ಜಾ, ಬರ್ಗರ್..ಅಜ್ಜಾ.. ಹೆ..ಹೆ...ಹೆ...
ಗವರಕ್ಕ- (ಅಳುತ್ತಾ) ಆ..ಆ..ಆ...ಎನ್ನ ಎಡ್ಡೇ... ಮದಮೆದ ಸೀರೆ ಕಚ್ಚದ ಮಲ್ಲ ಮಲ್ಲ ತೂತ ಮಲ್ತದ ಬುಡ್ತುಂಡು. ( ಈಚೆ ಆಚೆಯಿದ್ದವರನ್ನು ...ಯಜಮಾನನನ್ನು ನೋಡಿ) ಈರ ಎಂಚಿನಾದ ಮಲ್ತದ ಈ ಎಲಿತ ಉಪದ್ರವ ಉಂತ್ವೊಡುಯೆ...ಅತ್ಯೆ...ನಿಕಲ ಪಂಡ್ಲೆಯೆ....
ಈ ನಾಟಕದ ಛಾಯಾ ಚಿತ್ರವನ್ನು ತೆಗೆಯಲು ಆಗಲಿಲ್ಲ..ಅದಕ್ಕಾಗಿ ಗೋವಿನ ಹಾಡು ಮತ್ತು ಹಾಡಿನ ಛಾಯಾ ಚಿತ್ರ ಹಾಕಿದ್ದೇನೆ. |
ಪಾತಮ್ಮ- ಅಂದಂದ...ಪಟೇಲರೇ...( ಯಜಮಾನರ ಕಡೆಗೆ ಎಲ್ಲರೂ ದೈನ್ಯದಿಂದ ನೋಡುವರು)
ಪಟೇಲ-( ಚಿಂತಾಕ್ರಾಂತನಂತೆ ನಟಿಸುತ್ತಾ ತಲೆಯ ಮೇಲೆ ಕೈಹಿಡಿದು, ತಲೆಯನ್ನು ಒತ್ತುತ್ತಾ) ಉಂದೊಂಜಿ ಮಲ್ಲ ಮಂಡೆ ಬಿಸಿ ಕೊರ್ತುಂಡು... ಎಂಚಿನ ಮಲ್ಪುಗ ಉಂದ ಎಲಿತ ಬಾದೆಗ? ಮಲ್ಲ ಕಿರಿಕಿರಿ... ಹಾ... ಒಂಜಿ ಕೆಲಸ ಮಲ್ಪೊಲಿ... ಅಂದ ಮಾದ... ಈ ಇತ್ತೆ ಒಂಜಿ ಮಲ್ಲ ಬೋರ್ಡ್ ಪಾಡ್ಲ... ತುಲ, ಯಾನ ಇಕ್ಕ ಬರೆದ ಕೊರ್ಪೆ... "ಏರಾಂಡ್ಲ ಈ ಎಲಿತ ಬಾದೆಡ ನಮ್ಮ ಬಚಾವ್ ಮಾಲ್ತಂಡ ಅಕ್ಲೆಗ್ ೫,೦೦೦ಕಾಸ್ ಪಟೇಲರ್ ಕೊರ್ಪೆರ್" ಪಂಡದ ತುಲಾ ಸಮಾ ಬರೆವಡ್... ಬಕ್ಕ... ಆಂದ...ಮಾರಾಯ... ಪಂಡ... ಸುಪಂಡಿ ಬ್ಯಾಲೆ ಮಲ್ತಿನಂಚೆನೆ ಮಲ್ತಂಡ ಎನ್ನಡ ಪೆಟ್ಟು ತಿನ್ನೊಡ್ಚಿ! ಗೊತ್ತಾಂಡಾ.. !!!!
ಮಲ್ಲಕ್ಕ- ( ಸಣ್ಣ ಸ್ವರದಿಂದ) ಅಂದಂದ... ಈ ಪಿಟ್ಟಾಸಿ ಪಟೇಲರ ಕಪಾಟಡ್ದ...ಕಾ...ಸ್ ಪಿದಾಯಿ ಬರ್ಪುಂಡಾ... ತೂವೊಡು... ಅತ್ತೇ!!! ( ಹತ್ತಿರ ಕುಳಿತ್ತಿದ್ದ ಹೆಂಗಸಿನ ಬಳಿ ಹೇಳುವಳು)
ಗವರಕ್ಕ- ( ಮುಖವನ್ನು ಸಿಂಡರಿಸುತ್ತಾ) ಅಂದೇ... ಕಾಸ್ ಪಂಡದ ಜೀವ... ಅವು ಎಂಚಿನ ನಕಲಿ ನೋಟ್ ಕೊರ್ವೆರ ತೋಜುಂಡು..( ಹತ್ತಿರದಲ್ಲಿದವರ ಮುಖದಲ್ಲಿ ನಗೆ ಕಾಣುವುದು)
**********************************************
ಎರಡನೆಯ ಅಂಕ
ಮಾದ ಬೋರ್ಡ್ ನೇತಾಡಿಸುತ್ತಿದ್ದಾನೆ.
ಅಲ್ಲಲ್ಲಿ ಜನ ಗುಂಪು ಕಟ್ಟಿ ಬೋರ್ಡ್ ನೋಡಿ ತಮ್ಮ ತಮ್ಮಲ್ಲೇ ಪಿಸು ಮಾತನಾಡುತ್ತಿದ್ದಾರೆ. ಆಗಲೇ ಕೊಳಲನೂದುತ್ತ ಶಂಕರ ಜೋಗಿಯ ಪ್ರವೇಶವಾಗುತ್ತದೆ.
ಶಂಕರ ಜೋಗಿ ಬೋರ್ಡಿನ ಬಳಿ ಬರುತ್ತಾನೆ..
ಜೋಗಿ- ಎಂಚಿನ ಉಂದು? ಯಾರು ಈ ಊರಿನವರನ್ನು ಇಲಿಯ ಕಾಟದಿಂದ ಪಾರು ಮಾಡುವರೋ, ಅವರನ್ನು ನಮ್ಮ ಪಟೇಲರು ೫,೦೦೦ ರೂ ಗಳನ್ನು ಕೊಟ್ಟು ಸತ್ಕರಿಸುವರು. ಅರೇ ಯಾನ
ಉಂದು ಒಂಜಿ ಚುಟುಕಿಡ ಮಲ್ಪುವೆ.. ತೂಕ, ಪಾತೆರ್ದ್ ತೂಕ.
ತುಸು ದೂರದಲ್ಲೇ ಪಟೇಲ ಮತ್ತು ಅವನನ್ನು ಸುತ್ತುವರೆದು ನಿಂತ ಗುಂಪಿನ ಹತ್ತಿರ ಬರುವನು.
ಜೋಗಿ- ನಮಸ್ಕಾರ ಯಜಮಾನೆರೆ... ತೂಂಡಾ ನಿಕಲ ಭಾರಿ ಕಷ್ಟದ ಉಳ್ಳೆರೆಂದು ಎಕ್ಕ ತೋಜುಂಡು... ಯಾನ ಈ ಮಾತ ಎಲಿನ ದೂರ ಕೊಣ್ಪೋಪೆ. ಈರ ಪಂಡಿಲೆಕ್ಕ ೫೦೦೦ರೂಪೀಸ್ ಕೊರ್ಪರಾ?
ಪಟೇಲ- ( ಮುಖದಲ್ಲಿ ನಗೆ ಕಾಣಿಸಿಕೊಳ್ಳುತ್ತದೆ) ನಮಸ್ಕಾರ ನಮಸ್ಕಾರ... ಈರ್ನ ಎಂಕಲ್ನ ಮಲ್ಲೇಶ ಸ್ವಾಮಿನೇ ಮೂಲು ಕಣತಿನಿ ತೋಜುಂಡು. ಮಾದ ಬಕ್ಕ ನೆನಪು ಮಾಲ್ಪಲ... ಬರ್ಪುನ ಸಂಡೇ ಒಂಜಿ ಮಲ್ಲ ಪೂಜೆ ಮಲ್ಪೆರೆ ಉಂಡು ಪಂಡದ ಪೂಜಾರೆಗ ಪಣ್ಣೊಡು.
( ಅವರು ಮಾತನಾಡುತ್ತಿರವಾಗ ಹೆಗ್ಗಣವೊಂದು ಮಲ್ಲಕ್ಕನ ಕೈಯಿಂದ ಆಕೆ ತಿನ್ನುತ್ತಿದ್ದನ್ನು ಕಸಿದು ಓಡುತ್ತದೆ. ಎಲ್ಲರೂ ಕಣ್ಣು ದೊಡ್ಡದು ಮಾಡಿ ಅತ್ತ ನೋಡುತ್ತಾರೆ...ಅವಳ ಹತ್ತಿರ ಕುಳಿತಿದ್ದ ಮಗು ಹೆದರಿ ದೊಡ್ಡದಾಗಿ ರಾಗ ಎಳೆಯುತ್ತದೆ.)
ಪಂಡ್ಲೆ, ಪಂಡ್ಲೆ.. ಎಂಚಿನ ಪ್ಲಾನ್ ಈರ್ನ್? ಇತ್ತೆ ಈರೇ ಎಲಿತ ಉಪದ್ರವ ತೂದರತ್ತ. ಪಂಡ ಈರ್ ವೊವ್ಲುಡ್ದ್ ಬತ್ತಿನಿ?
ಜೋಗಿ- (ಮುಗಳ್ನಗುತ್ತಾ ) ಯಾನ ಘಟ್ಟಡ್ದ ಮೇಲ್ದ ಜನ.. ತಿರುಗುಂದೇವುಪ್ಪು
ನತ್ತ ಅಂಚ ಎಂಕ್ ನಿಕಲ್ನ ಲಾಂಗ್ವೇಜ್ಲಾ ಬರ್ಪುಂಡ್! ತುಲೆ ಯಜ್ಮಾನರೇ.. ಪಂಡಿ ಲೆಕ್ಕ ಈರ್ ಯಂಕ್ ಐನ್ ಸಾವಿರಾ ರೂಪೀಸ್ ಕೊರಡು.. ಬಕ್ಕ ಭಾಷೆ ತಪ್ಪೆರಬಲ್ಲಿ... ತಪ್ಪಂಡ... ಬಕ್ಕ ತೂಲೆ!
ಅಲ್ಲಿದ್ದ ಜನರೆಲ್ಲಾ ಸಂತೋಷದಿಂದ ಒಬ್ಬನೊಬ್ಬರು ಅಭಿನಂದಿಸುವರು... ಮತ್ತು ಪಟೇಲರತ್ತ ತಿರುಗಿ,
ಎಲ್ಲರೂ- ಪಂಡಿಲೆಕ್ಕ ಕೊರ್ಪೆ ಪಂಡ್ಲೆ ಪಣ್ಣಲೆ ಯಜಮಾನರೇ, ಪಂಡ್ಲೆ.. ಪಂಡ್ಲೆ...
ಪಟೇಲ-( ಎಲ್ಲರತ್ತ ಒಮ್ಮೆ ನೋಡುತ್ತಾ... ಸ್ವಗತದಲ್ಲಿ- ಹುಂ, ಪಿಟ್ಟಾಸಿ ಜನ...ಬುದ್ಧಿ ಕಲ್ಪವೆ ನಿಕಲೆಗ! ತುಲೆ, ಹುಂ) ಆವು ಮಾರಾಯ್ರೇ. ಈರ್ ಒಂಜಿ ಸರ್ತಿ ಎಂಕ್ಲೆನ್ ಎಲಿತ ಉಪದ್ರವಡ ಬಚಾವ್ ಮಲ್ಪುಲೆ. ಪ್ರಾಮಿಸ್ ಮಲ್ಪೆ... ಖಂಡಿತ ೫,೦೦೦ ರೂಪೀಸ್ ಕೊರ್ಪೆ.
ಶಂಕರ ಕಿಂದರಿ ಕೊಳನ್ನು ಊದುವನು.
ಹ್ಮೂಂ,. ಇಲಿಗಳು ಬರುವುದು ಕಾಣುವುದಿಲ್ಲ....
ಜನ ಮುಖಮುಖ ನೋಡುತ್ತಾರೆ. ಮಕ್ಕಳೆಲ್ಲಾ ಅಲ್ಲಿ ಸೇರುತ್ತಾರೆ. ಆಗ ಗವರಕ್ಕನ ದೊಡ್ಡ ಮಗ ಶರವಣ ಎದ್ದು ನಿಲ್ಲುತ್ತಾನೆ.
ಶರವಣ- ಅಂಕಲ್, ಅಂಕಲ್... ಎಕ್ಸಕ್ಯೂಜ್ ಮಿ... ಡು ಯು ನೋ, ಮೈಕಲ್ ಜಾಕ್ಸನ್ ಸಾಂಗ್ಸ್.. ಆರ್ ಸಲ್ಮಾನ್ ಖಾನ್ಸ್... ಸಾಂಗ್ಸ್... ಅವು ಪಾಡಂಡ ಬರ್ಪೆರಾ ತೂಲೆ. ಈ ಓಲ್ಡ್ ಸಾಂಗ್‍ಗ್ ಪಿರಾಯಿ
ಬರ್ಪುಜೆರ.
ಎಲ್ಲರೂ ನಗುತ್ತಾ ತಮ್ಮತಮ್ಮಲ್ಲೇ ಪ್ರತಿಕ್ರಿಯಿಸುತ್ತಾರೆ.
ಕಿಂದರಿ-( ಹುಬ್ಬನ್ನು ಮೇಲಕ್ಕೆತ್ತಿ... ಬಾಯಿಯನ್ನು ಅಗಲಕ್ಕೆ ಬಿಡಿಸಿ) ಅಬ್ಬಬ್ಬ!!! ಜೋಕಳೆಗ ಸಮ ಎಲಿನಕಲು... ಬಕ್ಕ,ಅವುಲ ಬರ್ಪುಂಡ್... ಈತ ಮುಟ್ಟ ಊದಿನಿಜ್ಜಿ.. ಇನಿ ಅವುಲಾ ಮಲ್ಪುಗ. ಈ ಕೆಟ್ಟ ಕಲಿ ಕಾಲಡ ನಂಕ ಮಾತ ಕಲ್ಪೊಡತ್ತಾ.. ಇಜ್ಜಾಂಡಾ ಬದಿಕೆರೆ ಆಪುಂಡಾ!
ಕಿಂದರಿ ಚೀಲದಿಂದ ಕೊಳಲನ್ನು ( ಬೇಕಾದರೆ ಆಧುನಿಕತೆ ತೋರಿಸಲು ಸೆಕ್ಸಫೋನು ವಾದನ ಉಪಯೋಗಿಸಬಹುದು) ತೆಗೆದು.... ಇಲ್ಲಿ ಯಾವುದೇ ಇತ್ತೀಚಿನ ಸಿನೆಮಾ ಹಾಡನ್ನು ಊದುವಂತೆ ನಟಿಸಬಹುದು. ಹಿನ್ನಲೆಯಲ್ಲಿ ಆ ಸಂಗೀತ ಕೇಳಿಬರುವುದು.
(ನಾನು ವಾಂಟೆಡ್ ಚಿತ್ರದ ಜಲ್ವಾ ಹಾಡನ್ನು ಹಾಕಿ ಮಕ್ಕಳಿಗೆ ಅದೇ ತರದ ಸ್ಟೆಪ್ ನನ್ನ ಮಗಳ ಕೈಯಲ್ಲಿ ಕಲಿಸಿದ್ದೆ.)
ಜೋಗಿ- ಈ ಮೊಬೈಲ್ ಈಗ ಉಪಯೋಗ ಆಂಡ... ಮುರಾಣಿ ಆಯಿ ಬಾಲೆ ಯಂಕ್ ಪೊಸಪೊಸ ಸಾಂಗ್ ಫೀಡ್ ಮಲ್ತದ ಕೊರ್ತನತ್ತ... ಅಂಚ ಯಾನ್ ಇವು ಮಾತ ಕೇಣದ್ ಕೇಣದ ಕಲ್ತೆ. ( ಬಡಬಡಿಸುವನು. )
ಸಂಗೀತವನ್ನು ಕೇಳಿ ಇಲಿಗಳೆಲ್ಲಾ ಸಂದುಗೊಂದುಗಳಿಂದ ನಾಟ್ಯವಾಡುತ್ತ ಬರುವರು. ಕೆಲವು ಅಲ್ಲಿ ಕುಳಿತಿದ್ದ ಹೆಂಗಸರ ಹಿಂದಿನಿಂದ ಬರುತ್ತವೆ. ಇಲಿಗಳ ಪಾತ್ರವನ್ನು ೫,೬ ವಯಸ್ಸಿನ ಮಕ್ಕಳು ಮಾಡಿದರೆ ಒಳ್ಳೆಯದು. ಇಲಿಗಳ ಪ್ರವೇಶವಾಗುತ್ತಿದ್ದಂತೆ ಅಲ್ಲಿ ಕುಳಿತ್ತಿದ್ದ ಜನರು ಬೆಚ್ಚಿ ಹಿಂದೆ ಓಡಬೇಕು. ರಂಗದ ಎದುರುಗಡೆ ಜೋಗಿ ಅವನ ಹಿಂದೆ ಮಕ್ಕಳು ಹಾಡಿಗೆ ತಕ್ಕ ತಾಳ ಹಾಕುತ್ತಾ ೫ ನಿಮಿಷ ನೃತ್ಯ ಮಾಡಬೇಕು. ಜೋಗಿ ಮುಂದೆ ಇಲಿಗಳ ಪಾತ್ರದ ಮಕ್ಕಳು ಹಿಂದೆ ಹಿಂದೆ.. ನದಿ ತೀರ ಸೃಷ್ಟಿಸಬೇಕು. ನೀಲಿ ಸೀರೆಯನ್ನು ನೀರಿನ ಅಲೆಗಳಂತೆ ಅಲ್ಲಾಡಿಸಬೇಕು. ಇಲಿಗಳು ಸೀರೆಯ ಕೆಳಗೆ ನುಸುಳುವಂತೆ ಸೀರೆಯನೆತ್ತಿ ಅನುಕೂಲ ಮಾಡಿಕೊಡಬೇಕು.
**********************
ಮೂರನೆಯ ಅಂಕ
ಕಿಂದರಿಯ ಪ್ರವೇಶವಾಗುವುದು. ಜನರೆಲ್ಲಾ ಸಂತೋಷದಿಂದ ಒಬ್ಬರನೊಬ್ಬರು ಅಭಿನಂದಿಸುವರು. ಯಾರೂ ಕಿಂದರಿಯನ್ನು ಗಮನಿಸುವುದಿಲ್ಲ.
ಕಿಂದರಿ- ( ಪಟೇಲ ಬಳಿ ಬರಲು ಯತ್ನಿಸುವನು) ಪಟೇಲರೇ, ಪಟೇಲರೇ ... ( ಜನರ ಗಮನವನ್ನು ತನ್ನೆಡೆ ಸೆಳೆಯಲು ಯತ್ನಿಸುವನು) ಕೊರ್ಲೆ...ಕೊರ್ಲೆ..ಎನ್ನ ಬಹುಮಾನ.. ಕಾಸು... ೫,೦೦೦.
ಪಟೇಲ- (ಜೋರಾಗಿ ನಗುವನು. ಜನರನೆಲ್ಲಾ ನೋಡುತ್ತಾ) ಪೋ ಮಾರಾಯ...೫,೦೦೦ ಕಾಸಗೆ... ಕುಶಾಲಾ... ಯಾನ ಇಂಚೆನ ಪಂಡಿನಿ... ಆಂಡಲಾ... ಈ ಒಂಜಿ
ಉಪಕಾರ ಮಲ್ತದೆ.. ಅಂಚಿ ನಿಕ್ಕ ನಮ್ಮ ಮಲ್ಲ ಥಾಂಕ್ಸ್!ಏ.... ಮಾದ, ಮಾದ, ತುಲಾ... ವೀರೇಶ, ಅಣ್ಣಪ್ಪ, ಶಿವಪ್ಪ, ಗವರಕ್ಕ, ಮಲ್ಲಮ್ಮ ನಿಕಲ ಥಾಂಕ್ಸ್ ಪಂಡೆರಾ... ಜೋಗಿಯಪ್ಪಗ, ಪಂಡ್ಲೆ.. ಪಂಡ್ಲೆ..
ಎಲ್ಲರೂ ಯಪ್ಪಾ....ಮಲ್ಲ ಥಾಂಕ್ಸ್ ಎನ್ನುವರು.
ಕಿಂದರಿ- ( ಮುಖದ ಮೇಲೆ ಬೇಸರ ಮೂಡುತ್ತದೆ... ನಂತರ ಕೋಪ ಕಾಣಿಸುತ್ತದೆ....ಕಣ್ಣು ದೊಡ್ಡದು ಮಾಡಿ ಜೋರಾದ ಸ್ವರದಿಂದ ) ಭಾಷೆ ತಪ್ಪುದೆರ. (ಎಲ್ಲರೂ ಗಪ್‌ಚಿಪ್ ಆಗುತ್ತಾರೆ)
ನಿಕ್ಲೆಗ್ ಉಂದ ಎಡ್ಡೆಅತ್ತ.... ಆಂಡಲಾ ಬಕ್ಕೊಂಜಿ ಸಲ ಪಣ್ಪೆ. ಮರ್ಯಾದೆರ ಎಂಕ್ ಕೊರ್ಪೆ ಪಂಡಿನ ಕೊರ್ಲೆ... ಇಜ್ಜಾಂಡ...
ಪಟೇಲ- ಪೋ ಪೋ ... ಕೊರ್ಪುಜಿ.. ಎಂಚಿನ ಮಲ್ಪೆ... ಅಟ್ಟಹಾಸದಲ್ಲಿ ನಗುವನು.
ಕಿಂದರಿ ಕೋಪದಿಂದ ಸುತ್ತಲೂ ನೋಡುವನು. ಮತ್ತಿನ್ನೊಮ್ಮೆ ಕೊಳಲನ್ನು ಎತ್ತಿಕೊಳ್ಳುವನು.
ಸ್ವಗತದಲ್ಲಿ- ಆವಾಗ ಜಲ್ವಾ ಈಗ ಮೈಕೆಲ್ ಜಾಕ್ಸನ್....ಊದುವನು. ಎಲ್ಲರೂ ಬೆರಗಾಗಿ ನೋಡುತ್ತಿದ್ದಂತೆಯೇ ಮಕ್ಕಳೆಲ್ಲಾ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಕಿಂದರಿಯನ್ನು ಹಿಂಬಾಲಿಸುವರು. ತಡೆಯಲು ಬಂದ ತಂದೆ ತಾಯಿಯರ ಕೈಯನ್ನು ನೂಕಿ ಮಾಟಕ್ಕೆ ಒಳಗಾದವರಂತೆ ಕಿಂದರಿಯನ್ನು ಹಿಂಬಾಲಿಸುವರು. ತಾಯಿಯು ಎತ್ತಿಕೊಂಡಿರುವ ಮಗು ಕೈಯಿಂದ ಜಾರಿ ಕಿಂದರಿಯನ್ನು ಕುಣಿಯುತ್ತಾ ಹಿಂಬಾಲಿಸುತ್ತದೆ. ಗ್ರಾಮಸ್ತರು, ಪಟೆಲರು ಮಾತು ಬಾರದ ಮೂಕರಂತೆ ಬಿಟ್ಟ ಬಾಯಿಯಿಂದ ದೃಶ್ಯವನ್ನು ನೋಡುವರು.
ಪರದೆ ಜಾರುತ್ತದೆ...