ನನ್ನ ಮನಸ್ಸು

02 February, 2014

ಹೊತ್ತು ಹದವಾಗಿದೆ..

ಒಲವೇ,
ಹೇಗೆ ಹೇಳಲಿ ನಿನಗೆ
ಹೇಳಲಾಗದಿರದು ನನಗೆ
ಹೊತ್ತು ಹದವಾಗಿದೆ||

ಹತ್ತು ನೂರು ಚುಕ್ಕಿಗಳು
ಹೊಳೆವ ಚಂದಮನೂ
ಹೊತ್ತು ಹದವಾಗಿದೆ||

ಹಗಲು ಮಂಟಪಕೆ
ಹೊದಿಸಿ ಕಪ್ಪು ಪರದೆ
ಹೊತ್ತು ಹದವಾಗಿದೆ||

ಹೊಳೆವ ಕಣ್ಣು
ಹಾಯಾಗಿ  ಅಡಗಿವೆ
ಹೊತ್ತು ಹದವಾಗಿದೆ||

ಹೆಜ್ಜೆ ಸದ್ದು ಆಲಿಸು
ಹೊರಗೆ ಬಂದುಬಿಡು
ಹೊತ್ತು ಹದವಾಗಿದೆ

ಹಾಯಾಗಿ ಮಡಿಲಲಿ
ಹಗುರವಾಗಿ ಮನಸಿನಲಿ
ಹೊತ್ತು ಹದವಾಗಿದೆ ||

ಹರಯ ಮರಳಿತು
ಹಚ್ಚಹಸಿರು ತುಂಬಿತು
ಹೊತ್ತು ಹದವಾಗಿದೆ ||


No comments:

Post a Comment