ನನ್ನ ಮನಸ್ಸು

11 July, 2013


ನಿಶೆಯ ಸೆರಗಿನಡೆಯಲಿ ಅವಿತು ಕಾವ್ಯಮಯ ಸಂಭಾಷಣೆಗಳ ಮತ್ತಿನಲಿ
ಮುಳುಗಿಸಿ ಅದೆಲ್ಲೋ ಮಾಯವಾಗಿಬಿಟ್ಟ ಒಲವ ಬಯಸಿಯೋ,
ಆಷಾಢ ಮಾಸದ ಹನಿಗಳ ಮೋಡಿಯನ್ನೇ ಹೊದಿಕೆಯಾಗಿಸಿ
ಹಳೆಯ ಹಾಡುಗಳನ್ನು ಬಿಗಿದಪ್ಪಿ ನೋವನ್ನೆಲ್ಲಾ ಮರೆವ ಆಸೆಯಿಂದಲೋ,
ಅಂತೂ ಹಾಸಿಗೆ ಬಿಟ್ಟೇಳದವಳನ್ನು ಪುಸಲಾಯಿಸಿ, ಕೆನ್ನೆ ತಟ್ಟಿ,
ಕೂದಲನು ಒಪ್ಪಗೊಳಿಸಿ, ಹನಿಗಳ ಹಿನ್ನೆಲೆಗೆ ಮೇಲು ದನಿಯ
ಉದಯರಾಗ ಹಾಡಿ ಎಬ್ಬಿಸಿದ ಆಷಾಢ ಮಾಸದ ಮುಂಜಾವು!




No comments:

Post a Comment