ನನ್ನ ಮಟ್ಟಿಗೆ ಇದು ಬಹಳ ಅಪರೂಪದ ಚಿತ್ರ. ಬಹುಶಃ ಛಾಯಾಚಿತ್ರಗ್ರಹಣಕಾರರು ಇಂತಹ ಚಿತ್ರ ಪಡೆಯಲು ಕಾಡು-ಮೇಡು ಸುತ್ತುತ್ತಾರೆ. ಪ್ರತೀದಿನ ಬಣ್ಣ ಬಣ್ಣದ ಚಿಟ್ಟೆಗಳು ನಮ್ಮ ತೋಟದ ವಿಹಾರಕ್ಕಾಗಿ ಬರುವುದಾದರೂ ಒಮ್ಮೆಯಾದರೂ ಅವುಗಳನ್ನು ಕ್ಲಿಕ್ಕಿಸಲಾಗಲಿಲ್ಲ. ಮೊನ್ನೆ ಶುಕ್ರವಾರ ಸುಮಾರು ಏಳು ಗಂಟೆಗೆ ಅಮ್ಮನಿಗೆ ಹಾಲು ಕೊಡಲು ಹೊರಟವಳಿಗೆ ಧ್ಯಾನ ಮಾಡುತ್ತಿರುವ ಚಿಟ್ಟೆಯ ದರ್ಶನವಾಯಿತು. ಅರೇ ಇದೇನಿದು, ಸುಮ್ಮನೆ ರೆಕ್ಕೆ ಮಡಚಿ ಕುಳಿತಿದೆ ಅಂತ ಆಶ್ಚರ್ಯವಾಯಿತು...ಕೂಡಲೇ ಕ್ಯಾಮರ ತಂದು ಫೋಟೊ ತೆಗೆದೆ. ಮನೆಪಾಠಕ್ಕೆ ಮಕ್ಕಳು ಬಂದಿದ್ದಾರೆ...ಮತ್ತೆ ಗಣಕಯಂತ್ರದಲ್ಲಿ ಹಾಕಿದರಾಯಿತು ಅಂತ ಅಂದುಕೊಂಡು ನನ್ನ ಡ್ಯೂಟಿಯಲ್ಲಿ ಮುಳುಗಿದೆ.... ಆ ವಿಷಯ ಮರೆತೇ ಹೋಗಿತ್ತು. ನನ್ನ ಕೆಲಸವೆಲ್ಲ ಮುಗಿದಾಗ ಅಪರಾಹ್ನ ೧.೪೫..ನೆನಪಾಯಿತು..ನೋಡಿದರೆ ಆಶ್ಚರ್ಯ..ಆ ಚಿಟ್ಟೆಯ ಜೊತೆ ಅದರ ಕೋಶವೂ ಚಿತ್ರದಲ್ಲಿ ಕಾಣುತ್ತಿದೆ...ಅರೇ ಅದು ಅದೇ ತಾನೆ ಕೋಶದಿಂದ ಹೊರಬಂದ ಚಿಟ್ಟೆ..ಹಾಗಾಗಿ ಹಾರದೆ ಅಲ್ಲಿ ಒಂದಿಷ್ಟು ಧ್ಯಾನ ಮಾಡುವವರಂತೆ ಕುಳಿತಿತ್ತು. ನನ್ನ ಅದೃಷ್ಟವನ್ನು ನೋಡಿ ನನ್ನ ಖುಷಿಗೆ ಪಾರೇ ಇಲ್ಲ. ಅಷ್ಟೆಲ್ಲ ಆದ ಮೇಲೆ ಅದನ್ನು ಬ್ಲಾಗನಲ್ಲಿ ಬರೆಯಲಾಗದೇ ಇದ್ದರೆ ಆದಿತೇ!!!
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
▼
05 August, 2012
ಅಪರೂಪದ ಚಿತ್ರ!!!
ನನ್ನ ಮಟ್ಟಿಗೆ ಇದು ಬಹಳ ಅಪರೂಪದ ಚಿತ್ರ. ಬಹುಶಃ ಛಾಯಾಚಿತ್ರಗ್ರಹಣಕಾರರು ಇಂತಹ ಚಿತ್ರ ಪಡೆಯಲು ಕಾಡು-ಮೇಡು ಸುತ್ತುತ್ತಾರೆ. ಪ್ರತೀದಿನ ಬಣ್ಣ ಬಣ್ಣದ ಚಿಟ್ಟೆಗಳು ನಮ್ಮ ತೋಟದ ವಿಹಾರಕ್ಕಾಗಿ ಬರುವುದಾದರೂ ಒಮ್ಮೆಯಾದರೂ ಅವುಗಳನ್ನು ಕ್ಲಿಕ್ಕಿಸಲಾಗಲಿಲ್ಲ. ಮೊನ್ನೆ ಶುಕ್ರವಾರ ಸುಮಾರು ಏಳು ಗಂಟೆಗೆ ಅಮ್ಮನಿಗೆ ಹಾಲು ಕೊಡಲು ಹೊರಟವಳಿಗೆ ಧ್ಯಾನ ಮಾಡುತ್ತಿರುವ ಚಿಟ್ಟೆಯ ದರ್ಶನವಾಯಿತು. ಅರೇ ಇದೇನಿದು, ಸುಮ್ಮನೆ ರೆಕ್ಕೆ ಮಡಚಿ ಕುಳಿತಿದೆ ಅಂತ ಆಶ್ಚರ್ಯವಾಯಿತು...ಕೂಡಲೇ ಕ್ಯಾಮರ ತಂದು ಫೋಟೊ ತೆಗೆದೆ. ಮನೆಪಾಠಕ್ಕೆ ಮಕ್ಕಳು ಬಂದಿದ್ದಾರೆ...ಮತ್ತೆ ಗಣಕಯಂತ್ರದಲ್ಲಿ ಹಾಕಿದರಾಯಿತು ಅಂತ ಅಂದುಕೊಂಡು ನನ್ನ ಡ್ಯೂಟಿಯಲ್ಲಿ ಮುಳುಗಿದೆ.... ಆ ವಿಷಯ ಮರೆತೇ ಹೋಗಿತ್ತು. ನನ್ನ ಕೆಲಸವೆಲ್ಲ ಮುಗಿದಾಗ ಅಪರಾಹ್ನ ೧.೪೫..ನೆನಪಾಯಿತು..ನೋಡಿದರೆ ಆಶ್ಚರ್ಯ..ಆ ಚಿಟ್ಟೆಯ ಜೊತೆ ಅದರ ಕೋಶವೂ ಚಿತ್ರದಲ್ಲಿ ಕಾಣುತ್ತಿದೆ...ಅರೇ ಅದು ಅದೇ ತಾನೆ ಕೋಶದಿಂದ ಹೊರಬಂದ ಚಿಟ್ಟೆ..ಹಾಗಾಗಿ ಹಾರದೆ ಅಲ್ಲಿ ಒಂದಿಷ್ಟು ಧ್ಯಾನ ಮಾಡುವವರಂತೆ ಕುಳಿತಿತ್ತು. ನನ್ನ ಅದೃಷ್ಟವನ್ನು ನೋಡಿ ನನ್ನ ಖುಷಿಗೆ ಪಾರೇ ಇಲ್ಲ. ಅಷ್ಟೆಲ್ಲ ಆದ ಮೇಲೆ ಅದನ್ನು ಬ್ಲಾಗನಲ್ಲಿ ಬರೆಯಲಾಗದೇ ಇದ್ದರೆ ಆದಿತೇ!!!
ಒಳ್ಳೆಯ ಸಚಿತ್ರ ಲೇಖನ.
ReplyDeleteಅಕ್ಕ, ಕೋಶ ಅಂದ್ರೆ ?
ReplyDeleteಕಿರಣ್, ಕೋಶ ಅಂದ್ರೆ ಪ್ಯುಪಾ.....ಚಿಟ್ಟೆಯ ಜೀವನ ಚಕ್ರ ಗೊತ್ತಲ್ವಾ?
ReplyDeleteBadari,:-)
ReplyDeleteBahala Chennagide :)
ReplyDeleteವಾವ್ಹ್ ಎನಿಸುವ ಚಿತ್ರಗಳು.....ಸುಂದರವಾಗಿವೆ...
ReplyDeleteThanks to Anitha Murali and Sushma!
ReplyDelete