ನನ್ನ ಮನಸ್ಸು

08 August, 2012

ಹನಿ ಹನಿ ಚಿತ್ತಾರ!


   ಹನಿ ಹನಿ ಮುತ್ತುಗಳು  ಚೆಲ್ಲಾಡಿವೆ ತೋಟದ ತುಂಬಾ...
  ಆರಿಸಿ, ಮಾಲೆಯ ಕಟ್ಟಲು ಅನುವಾದರೆ.....
  ಇಗೋ, ಕುಸುಮಗಳ ಅಪ್ಪಣೆ....
  ತಡೆ, ಅಗೋ ನಮ್ಮೊಡೆಯನು ಹೊನ್ನ ತೇರನೇರಿ ಬರುತಿಹನು..
  ಈ ಮುತ್ತು, ರತ್ನಗಳು ಅವಗೇ ಅರ್ಪಣೆ..
  ತಡಮಾಡಬೇಡ..
  ನಿನ್ನ ಮನೆಯಂಗಳದಲಿ ಹರಡಿಹ ಮುತ್ತುರತ್ನಗಳ..
  ನಿನ್ನ ಮನದಂಗಳದಲಿ  ಶಾಶ್ವತವಾಗಿ ಸೆರೆಯಾಗಿಸು.....
  ಅಷ್ಟೇ ಪ್ರಾಪ್ತಿ ನಿನಗೆ!!! 













2 comments:

  1. ಒಳ್ಳೆಯ ಸಚಿತ್ರ ಕವನ ಇದು. ರಮ್ಯ ಪರಿಸರದ ನಡುವೆ ಜೀವವನ ಸುಖ ಅನುಭವಿಸುವ ನೀವೆ ಧನ್ಯರು. ನಮ್ಮದೇನಿದೆ ಕಾಂಕ್ರಿಟ್ ಕಾಡು.

    ReplyDelete
  2. ನಿಜ ಬದರಿನಾಥ್, ಇಂತಹ ಸುಂದರ ಪರಿಸರ ಮತ್ತು ಪರಿಸರ ಪ್ರೇಮಿ ಹೆತ್ತಮ್ಮಳನ್ನು ಕೊಟ್ಟ ಆ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ! ಮೆಚ್ಚಿದಕ್ಕೆ ಧನ್ಯವಾದ!

    ReplyDelete