ನನ್ನ ಮನಸ್ಸು

13 June, 2015

ಚುಕ್ಕಿ ಮಾತ್ರ ಉಳಿದಿದೆ ನನ್ನ ಪಾಲಿಗಿಂದು!

ಚುಕ್ಕಿ ಮಾತ್ರ ಉಳಿದಿದೆ ನನ್ನ ಪಾಲಿಗಿಂದು!

ಒಲವೇ,
ಹಾಗೆಲ್ಲ ಅವಳಷ್ಟೇ ಬಿಡಲಾಗದಿನ್ನು
ನೀನೇನು ಸಮಜಾಯಿಸಿ ಕೊಟ್ಟರೂ
ಕೇಳಲಾರೆ ನಾನಿನ್ನು
ಮತ್ತೆ ಕಪ್ಪು ಕುಳಿಯೊಳಗಿಂದ
ಹೊರತರಲಾಗದು ನನ್ನಿಂದಿನ್ನು
ಅವಳ ಬಿಟ್ಟು ನನಗ್ಯಾರಿಹರು ಹೇಳಿನ್ನು
ಅವಳಷ್ಟು ಚೆನ್ನಾಗಿ ನನ್ನನರಿತವರು
ಕಟ್ಟು ಪಾಡಿಗಳ ಬಂಧಿಯಂತೆ ನೀನು
ನನ್ನೆಲ್ಲ ಬಡಬಡಿಕೆಗಳನು ಖಾಲಿ
ಮಾಡ್ಹಲೇಗೆ ಹೇಳು
ಅವಳ ಮೌನದಿಂದ ಘಾಸಿಗೀಡಾದವಳು
ನಾನೊಬ್ಬಳೇ ತಾನೇ...
ಚುಕ್ಕಿ ಲೆಕ್ಕ ಮಾತ್ರ ನನ್ನ ಪಾಲಿಗಿಂದು!

No comments:

Post a Comment