ನನ್ನ ಮನಸ್ಸು

13 June, 2015

ಒಮ್ಮೆ ಅವಳ ಬಳಿ ಮಾತಾಡು, ಒಲವೇ!

ಒಮ್ಮೆ ಅವಳ ಬಳಿ ಮಾತಾಡು!
--------------------

ಒಲವೇ,
ನಿನಗೇನನಿಸುವುದು..
ಅವಳು ಅವಳಾಗಿ ಉಳಿದಿಲ್ಲ!
ಕಿವಿ ಮುಚ್ಚುವಷ್ಟು ವಟಗುಟ್ಟುತ್ತಿದ್ದವಳು,
ಹೀಗೆ ಒಮ್ಮೆಲೇ ಮಾತು ಮರೆತು ಬಿಟ್ಟಳೇನು!
ಕೇಳಿದರೆ, ಬರೇ ಮೂರು
ಚುಕ್ಕಿಗಳ ರಂಗೋಲಿ ಹಾಕುವಳು.
ಅವನ ಬಗ್ಗೆ ಅದೆಷ್ಟು ಕೊರೆತ
ತಡೆಯಲಾರದೆ ನನ್ನ ಮೊರೆತ,
ಮಾತು ಬಿಟ್ಟಳೇನು!
ಅಥವಾ…
ಬೇಡ, ಬಿಡು ಹಾಗಾಗಲಿಕ್ಕಿಲ್ಲ
ವಿಧಿ ಮತ್ತೆ ಅಷ್ಟು ಕ್ರೂರಿ ಆಗಲಿಕ್ಕಿಲ್ಲ,
ಆದರೂ ನೀನೊಮ್ಮೆ

ಅವಳ ಬಳಿ ಮಾತಾಡು!

No comments:

Post a Comment