ನನ್ನ ಮನಸ್ಸು

13 January, 2015

ಒಲವೇ, ನೀ ಕಲಿಸಿದೆ ನನ್ನರಿವಿನ ಮಿತಿ..

ಒಲವೇ,

ನೀ ಹಚ್ಚಿದೆ ಹಣತೆ..
ಬೆಳಕು ಕಲಿಸಿತು ಒಲವು;

ಕಂಡೆ ನಿನ್ನ ಅಂದ..
ಚೆಲುವು ಕಲಿಸಿತು ಕಾವ್ಯ;

ಗೆಜ್ಜೆ ಕಟ್ಟಿದೆ ಕಾಲಿಗೆ
ಹೆಜ್ಜೆ ಕಲಿಸಿತು ಕುಣಿತ;

ನಿನ್ನ ನೋಟದಲಿ ಅರಸಿದೆ
ಅಮೂರ್ತತೆ ಕಲಿಸಿತು ಕಲೆ;

ಬೆಳೆದೆ ತ್ರಿವಿಕ್ರಮನಂತೆ ನನ್ನೊಳಗೆ
ನಾನೀಗ ಅರಿತೆ ನನ್ನರಿವಿನ ಮಿತಿ!


ನನ್ನ ಮಾತೃ ಭಾಷೆ ಕೊಂಕಣಿಯಲ್ಲಿ.. (ಮೊದಲ ಯತ್ನ)

ಮ್ಹೊಗ,

ಲಯಲೊ ತುವ್ಹೆ ದಿವ್ವೊ
ಉಜ್ವಾಡ ಮ್ಹೊಗು ದಿಸ್ಲೊ

ಚಂದಯಿ ಪಳಯಿಲೆ ತುಗೆಲೆ
ಬರಯಿಲೆ ಕಾವ್ಯ ಹಾಂವೆ

ಗೆಜ್ಜೆ ಬಂದ್ಲೆ ಪಾಯ್ಯಕ
ಶಬ್ದನ ಶಿಕಯಿಲೆ ನೃತ್ಯ

ಸೊದಿಲೆ ಸೃಷ್ಟಿ ಕಣಕಣಂತು
ಬುಡಯಿಲೆ ಕುಂಚ ರಂಗಂತು

ವಡಲೊ ತೂಂ ತ್ರಿವಿಕ್ರಮ ವರಿ
ಶಿಕಲಿ ಮಕ್ಕಾ ಗೊತನಾ ಕಸಲಿಂ

No comments:

Post a Comment