ನನ್ನ ಮನಸ್ಸು

10 October, 2014

ಈ ತಿರುವಿನಲ್ಲೇ ಮುನ್ನಡೆಯೋಣ! (ಭಾವಾನುವಾದ)



ಒಲವೇ,
ಈ ತಿರುವಿನಲೇ ಮುನ್ನಡೆಯೋಣವೇ,
ದಣಿದ ನಿಧಾನದ ಹೆಜ್ಜೆಯ ಹಾದಿಗಳವು;
ಶೀಘ್ರ ಸವೆಯುವ ಹೆಜ್ಜೆಯ ಬೀದಿಗಳವು;
ಈ ತಿರುವಿನಲೇ ಮುನ್ನಡೆಯೋಣ||

ಕಲ್ಲಿನ ಭವನದ ಗಲ್ಲಿಗಳು,
ಗಾಜಿನ ಗೂಡುಗಳ ಬೀದಿಗಳು,
ಹುಲ್ಲುಕಡ್ಡಿಯ ಗುಡಿಗಳು,
ಈ ತಿರುವು ಹಾದಿ ತೋರುತ್ತದೆ
ಈ ತಿರುವಿನಲೇ ಮುನ್ನಡೆಯೋಣವೇ||

ಬೀಸಿ ಹಾರಿ ಬಿರುಗಾಳಿಯಂತೆ
ಹಾಗೇ ಹಾದು ಹೋಗುತ್ತವೆ;
ಲಜ್ಜೆ ತೋರುತ ಹೆಜ್ಜೆಗಳ
ಲಯಗಳಿಗೆ  ಜತೆ ಕೊಡುತ್ತವೆ;
ಮೃದು ಹಾದಿಗಳಲ್ಲಿ ಅದೊಂದು ಹಾದಿ
ಇರಬಹುದೇ, ಐಕ್ಯಗೊಳಿಸಬಹುದು
ಈ ತಿರುವಿನಲೇ ಮುನ್ನಡೆಯೋಣವೇ||

ಬಲು ದೂರದಿಂದ ಬಂದಿರುವುದೆ ಆ ಹಾದಿ
ಕವಲಾಗುತ್ತದೆ ಸಮೀಪಿಸುತ್ತಲೆ                                          
ಒಂಟಿ  ಆ ಹಾದಿ,
ಸ್ತಬ್ಧ ಈ ಬೀದಿ
ಮತ್ತು ಇದೇ ಆ ಹಾದಿ ಇರಬಹುದು
ನನ್ನ ಯೋಚನೆ, 
ನಿನ್ನಡೆಗೆ ತಲುಪಿಸುವುದೇ
ಈ ತಿರುವಿನಲೇ ಮುನ್ನಡೆಯೋಣವೇ
ಒಲವೇ, ನಮ್ಮ ಗಮ್ಯ ಸಾಕಾರವಾಗುವುದು||



iss mod se jaate hai

No comments:

Post a Comment