ನನ್ನ ಮನಸ್ಸು

10 September, 2014

ನಿಷ್ಕಪಟ ಮಕ್ಕಳ ಮೆಚ್ಚುಗೆ ಮಾತು.. ಅದೇ ಒಂದು ಮೆಡಲು!

“ಏಯ್ ನೋಡೋ.. ಇಲ್ ಬಾ.. ದೂರ ನಿಂತು ನೋಡು, ಮ್ಯಾಮ್ ಮಾಡಿದ ಪೈಂಟಿಂಗ್ ಪ್ರಿಂಟ್ ಗಿಂತ ಚಂದ ಇದೆಯಲ್ವಾ!”
ಆ ಎಂಟು ವರ್ಷದ ಹುಡುಗಿ ಮಲಯಾಳಿಯಲ್ಲಿ ತಮ್ಮನಿಗೆ ಹೇಳಿದ್ದು ಪೂರ್ತಿಯಲ್ಲದಿದ್ದರೂ ಅರ್ಥವಾಗಿತ್ತು.. ಆ ಆರು ವರ್ಷದ ಪೋರ ಕೂಡಲೇ ನನ್ನ ಹತ್ರ ಬಂದು ಕಿವಿಯಲ್ಲಿ ಗುಟ್ಟು ಹೇಳುವನಂತೆ, ಲಿಯಾ ಹೇಳ್ತಿದ್ದಾಳೆ.. ನಿಮ್ ಚಿತ್ರ ಪ್ರಿಂಟ್ ಗಿಂತ ಚೆನ್ನಾಗಿದೆಯಂತೆ.. ಹೌದಲ್ವಾ ಮಿಸ್??? ನನ್ನನ್ನೇ ಹೌದ ಅಲ್ವಾ ಕೇಳ್ತಿದ್ದಾನೆ…

ನಂಗೆ ಮಕ್ಕಳ ಬಾಯಿಯಲ್ಲಿ ಬರುವ ಮೆಚ್ಚುಗೆ ಮಾತು ಅಂದ್ರೆ ತುಂಬಾ ತುಂಬಾನೇ ಖುಷಿ!!!


No comments:

Post a Comment