ನನ್ನ ಮನಸ್ಸು

05 February, 2014

ನಿನ್ನೆಯ ನಲ್ಲಿರುಳು...

ನಿನ್ನೆಯ ನಲ್ಲಿರುಳು..
-------------------------

ವಾದ ವಿವಾದ..
ಮಾತಿಗೆ ಮಾತು..

ಕಡು ನೀಲಿರಂಗಿನವಳು ಕೆಂಪು 
ಹೊನ್ನ ರಂಗಿನವಳು ಕಪ್ಪು

ಬಾಹುಗಳ ಅಪ್ಪುಗೆ ಸಡಿಲು
ಕಣ್ಣೆವೆಗಳು ಮುಷ್ಕರ ಹೂಡಲು

ಬಿದಿಗೆ ಚಂದ್ರಮ ಸಾಕ್ಷಿಯಲ್ಲ
ಒಂಟಿಯಾಗಿ ಬಿಡಲೊಪ್ಪಲಿಲ್ಲ
ಕ್ಷಣ ಮಾತ್ರದಲಿ ತಲುಪಿದಳಲ್ಲ

ತೂಗುಮಂಚದಲಿ ಬೆಳದಿಂಗಳು
ಅವಳ ಕಾಲ್ಬುಡದಲಿ ಇವಳು
ಚುಕ್ಕಿಗಳ ವಾತ್ಸಲ್ಯ ಹೊದಿಕೆಯು 

ಮುಗಿಲ ಪಲ್ಲಕ್ಕಿಯಲಿ ನಲ್ಲಿರುಳು 
ಚಂದ್ರಮನ ಮಧ್ಯಸ್ಥಿಕೆ
ಮಡುಗಟ್ಟಿದ ಕಪ್ಪು ಕಂಗಳು
ಆಕ್ಷೇಪದ ಹನಿ ಜಾರುತಿರೆ

ನೋಟ ಸೋಲನೊಪ್ಪಿತು
ಕಣ್ಣೆವೆಗಳು ಮುಚ್ಚಿದವು
ಬಿಂಬವನು ಅಡಗಿಸಿದವು!

No comments:

Post a Comment