ನನ್ನ ಮನಸ್ಸು

11 July, 2013

ನೀ ಬಿಟ್ಟ ಬಾಣಗಳು ಗುರಿ ಮುಟ್ಟಿವೆ
ಹೋಳಾದ ಮನದ ತುಂಬಾ ಕೆಂಬಣ್ಣದ ಓಕುಳಿ
ನೋವ ತಡಕೊಳ್ಳಬಲ್ಲೆ
ಕಸುವಿದೆ ಇನ್ನೂ ನನ್ನಲಿ
ಗಾಯವೂ ಮಾಗುವುದು ಕ್ರಮೇಣ
ಕುರುಹು ಮಾತ್ರ ಉಳಿಯದಿರಲಿ ಎಂಬ ಆಶಯ!

No comments:

Post a Comment