ನನ್ನ ಮನಸ್ಸು

25 July, 2013

-
ರಭಸದಿಂದ ಬೀಸುವ ಗಾಳಿ
ಒಂದೇ ಸಮನೆ ಸುರಿಯುವ ಮುಸಲಧಾರೆ
ಕಣ್ಮುಚ್ಚಾಲೆಯಾಡುವ ವಿದ್ಯುದ್ದೀಪ
ಮನಸ್ಯಾಕೋ ರಚ್ಚೆ ಹಿಡಿದ ಮಗುವಿಂತೆ ಆಡಿದಾಗ
ನಿಶೆಯ ಓಲೈಕೆಗ್ಯಾವುದಕೂ ಬಗ್ಗದಾಗ
ರೆಪ್ಪೆಗಳು ತೆರೆದೇ ಉಳಿದಾಗ
ಎಂದಿನಂತಿಲ್ಲದೆ ಇಂದು ಕಿಂಕಿಣಿ ನಾದ ಹೊರಡಿಸುವ ಬಳೆ
ನವಿರಾದ ಪರಿಮಳ ಚೆಲ್ಲುವ ಮಲ್ಲಿಗೆ ಮಾಲೆ
ಹೆಜ್ಜೆ ಹೆಜ್ಜೆಗೂ ಗೆಜ್ಜೆಯ ನಾದ..
ಬಂದಳು...
ಸೆಳೆದೇ ಸೆಳೆದಳು...
ಸೆರೆಗ ಹೊದಿಸಿ ರೆಪ್ಪೆ ಮುಚ್ಚಿಸಿ
ಬೆಚ್ಚಗಿನ ವಾತ್ಸಲ್ಯದ ಮಡಿಲಲಿ ಮಲಗಿಸಿ
ಸುಪ್ರಭಾತದ ಹಾಡಿ ಮನಮುದಗೊಳಿಸಿದಳು
ಕರುಣಾಮಯಿ ಮುಂಜಾನೆ!


******************


ರಭಸದಿಂದ ಬೀಸುವ ಗಾಳಿ
ಒಂದೇ ಸಮನೆ ಸುರಿಯುವ ಮುಸಲಧಾರೆ
ಕಣ್ಮುಚ್ಚಾಲೆಯಾಡುವ ವಿದ್ಯುದ್ದೀಪ
ಮನಸ್ಯಾಕೋ ರಚ್ಚೆ ಹಿಡಿದ ಮಗುವಿಂತೆ ಆಡಿದಾಗ
ನಿಶೆಯ ಓಲೈಕೆಗ್ಯಾವುದಕೂ ಬಗ್ಗದಾಗ
ರೆಪ್ಪೆಗಳು ತೆರೆದೇ ಉಳಿದಾಗ
ಎಂದಿನಂತಿಲ್ಲದೆ ಇಂದು ಕಿಂಕಿಣಿ ನಾದ ಹೊರಡಿಸುವ ಬಳೆ
ನವಿರಾದ ಪರಿಮಳ ಚೆಲ್ಲುವ ಮಲ್ಲಿಗೆ ಮಾಲೆ
ಹೆಜ್ಜೆ ಹೆಜ್ಜೆಗೂ ಗೆಜ್ಜೆಯ ನಾದ
ಬಂದಳು,
ಬರ ಸೆಳೆದಳು,
ಸೆರೆಗ ಹೊದಿಸಿ, ರೆಪ್ಪೆ ಮುಚ್ಚಿ
ಜೋಗುಳ ಹಾಡಿ ಒಯ್ದಳು
ತನ್ನ ಲೋಕಕೆ
ನಿದ್ರಾದೇವಿ!





No comments:

Post a Comment