ನನ್ನ ಮನಸ್ಸು

26 June, 2013

“ಕುಂಚಗಳನ್ನು ಮರಳಿಸುವಿಯಾ?”
ದೈನ್ಯತೆಯ ನುಡಿ!
“ಸಾಧ್ಯವಿಲ್ಲ”
ಬಿರುನುಡಿ!
“ಹೋಗಲಿ, ನನ್ನ ಕೆಮರಾ ಕೊಡುವಿಯಾ?”
“ನಿನ್ನ ಛಾಯಾಗ್ರಹಣದ ದಿನಗಳು ಮುಗಿದವು ಹೆಣ್ಣೇ!”
ಬಿರುನುಡಿ ಬಾಣದಂತೆ ಬಂದಿತು!
“ಬರಹವನ್ನೂ ಕಿತ್ತುಕೊಳ್ಳುವಿಯಾ?”
“.... “
ಮೌನವನ್ನು ಸೀಳುವಂತೆ ಕೇಳಿಸಿತು ಬಿಕ್ಕುತ್ತಿರುವ ಶಬ್ದ!
ತಟ್ಟನೆ ಎಚ್ಚರವಾಯಿತು. ಆ ಬಿಕ್ಕುತ್ತಿರುವ ಶಬ್ದ ನನ್ನೊಳಗಿನಿಂದಲೇ ಬರುತ್ತಿದೆ.

ಅಬ್ಬಾ! ಎಂಥ ಕನಸು!

No comments:

Post a Comment