ನನ್ನ ಮನಸ್ಸು

08 May, 2012

ನನ್ನ ಕೈಗಳ ಜೊತೆ ನಿನ್ನ ಕೈಗಳನೂ ಜೋಡಿಸೋ!







ಕತ್ತಲಿನ ಗೂಡಾಗಿತ್ತೆನ್ನ ಹೃದಯ
ಎಲ್ಲಿಂದಲೋ ನೀ ಬಂದೆ
ನಂದಾದೀಪವ ಬೆಳಗಿದೆ!
ಆ ಬೆಳಕಲ್ಲಿ ಮಿಂದಿತೆನ್ನ ಮನವು.
ಅಯ್ಯೋ, ಜೋರಾದ ಗಾಳಿ 
ಬೀಸುತ್ತಿದೆ ಇದ್ದಕ್ಕಿದ್ದಂತೆ,
ಗಾಳಿಗೆ ಬೆದರಿ ದೀಪದ
ಪ್ರಕಾಶವು ಮಂಕಾಗುತ್ತಿದೆ.
ಮೂಡುತ್ತಿರುವ ನನ್ನದೇ ನೆರಳು, 
ವಿವಿಧ ಆಕಾರ ತಾಳುತ್ತಿದೆ!
ಗುಮ್ಮನಂತೆ ನನ್ನ ಬೆದರಿಸುತ್ತಿದೆ!
ಇನ್ನೂ ಏಕೆ ಸುಮ್ಮನಾಗಿರುವೆ,
ಗಾಳಿಗೆ ಆರದಂತೆ ಹಿಡಿದಿರುವ 
ನನ್ನ ಕೈಗಳ ಜೊತೆ ನಿನ್ನ ಕೈಗಳನೂ ಜೋಡಿಸೋ!

No comments:

Post a Comment