ನನ್ನ ಮನಸ್ಸು

22 May, 2017

ಮೊದಲ ಮಣ್ಣಿನ ಘಮಲು- ನಿನ್ನಿರುವಿನ ಸುಳಿವು!

ಒಲವೇ,
ಅಂದೊಮ್ಮೆ ಹುಡುಕುತ್ತ ನಿನ್ನ
ಅಲೆಯುತ್ತಿದೆ
ಹಾದಿ ಬೀದಿ, ತಿರುವು ಕವಲು
ಅರಸುತ್ತಿದ್ದೆ
ಬೆಟ್ಟ-ಗುಡ್ಡ,  ಗುಡಿ-ಗೋಪುರ
ಲೆಕ್ಕ ಮರೆತು ಹೋಗಿದೆ!
ತಿರುವಿ ಹಾಕಿದ ಹೊತ್ತಗೆಗಳ ಪುಟಗಳು,
ಆಲಿಸಿದ ಮಸ್ತಕಗಳ ಮಾತುಗಳು;
ಸೋತು ಕೈ ಚೆಲ್ಲಿ ಕುಳಿತ
ನನ್ನ ನಾಸಿಕದೊಳಗೆ ನುಸುಳಿದ
ಆಗ ತಾನೆ ಸುರಿದ ಮಳೆಗೆ
ಆರ್ದ್ರವಾದ ಮಣ್ಣಿನ ಘಮಲು
ಅದೇ ನಿನ್ನಿರುವಿನ ಸುಳಿವು!



No comments:

Post a Comment