ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
24 May, 2017
ಮತ್ತೆ ಮತ್ತೆ ಮಾರ್ದನಿಸುವೆ!
ಒಲವೇ,
ನನಗಿದರ ಅರಿವಿದೆ ಕಣೋ,
ನೀನೊಂದು ಮಹಾ ಪರ್ವತ
ಮತ್ತು ನಿನ್ನ ಕರೆದಾಗಲೆಲ್ಲ
ಮತ್ತೆ ಮತ್ತೆ ಮಾರ್ದನಿಸುವೆ!
ಒಲವು ಮತ್ತು ತಿರುವಿನ ಹಾದಿ!
ಒಲವೇ,
ತಿರುವಿನ ಹಾದಿಯಲಿ ನಾವು ಎದುರುಬದುರಾದೆವು
ನಮ್ಮ ಹೆಜ್ಜೆಗಳು ಸದ್ದಿಲ್ಲದೆ ಜತೆಗೂಡಿದವು.
ಅದೊಂದು ದಿನ ಹಾದಿ ಕವಲೊಡೆಯಿತು,
ಮತ್ತು
ಛಾಯೆಗಳು
ಅಲ್ಲೇ ಉಳಿದವು!
22 May, 2017
ಮೊದಲ ಮಣ್ಣಿನ ಘಮಲು- ನಿನ್ನಿರುವಿನ ಸುಳಿವು!
ಒಲವೇ,
ಅಂದೊಮ್ಮೆ ಹುಡುಕುತ್ತ ನಿನ್ನ
ಅಲೆಯುತ್ತಿದೆ
ಹಾದಿ ಬೀದಿ, ತಿರುವು ಕವಲು
ಅರಸುತ್ತಿದ್ದೆ
ಬೆಟ್ಟ-ಗುಡ್ಡ, ಗುಡಿ-ಗೋಪುರ
ಲೆಕ್ಕ ಮರೆತು ಹೋಗಿದೆ!
ತಿರುವಿ ಹಾಕಿದ ಹೊತ್ತಗೆಗಳ ಪುಟಗಳು,
ಆಲಿಸಿದ ಮಸ್ತಕಗಳ ಮಾತುಗಳು;
ಸೋತು ಕೈ ಚೆಲ್ಲಿ ಕುಳಿತ
ನನ್ನ ನಾಸಿಕದೊಳಗೆ ನುಸುಳಿದ
ಆಗ ತಾನೆ ಸುರಿದ ಮಳೆಗೆ
ಆರ್ದ್ರವಾದ ಮಣ್ಣಿನ ಘಮಲು
ಅದೇ ನಿನ್ನಿರುವಿನ ಸುಳಿವು!
ಇರಲಿ ಹೀಗೆ ಅನುರಾಗದ ಹೊನಲು!
ಒಲವೇ,
ತಿಳಿದಿರು
ವವರು ಹೇಳುತ್ತಿರುವರು
ಮುಗಿಯದ ಹಾದಿಯಂತೆ ಈ ಬದುಕು
ಆದರೇನಂತೆ
ಕೊನೆಯ ತನಕ ಇರಲು
ನಿನ್ನೀ ಅನುರಾಗದ ಹೊನಲು!
21 May, 2017
ಬಾಲ್ಕನಿ!
19 May, 2017
ಬಾಲ್ಕನಿ ಸರಣಿ ಚಿತ್ರಗಳು..
ನೋವು-ನಲಿವು ಮತ್ತು ಒಲವು!
ಒಲವೇ,
ಯಾಕೀ ನೋವು ಈ ಪರಿತಾಪ
ನಿನಗಿಲ್ಲವೇಕೆ ಒಂದಿಷ್ಟು ಸಂತಾಪ!
ನನ್ನ ಪ್ರಲಾಪಕೆ ನಗುಮೊಗದುತ್ತರ..
“ನೋವಿನ ಅನುಭೂತಿ ಇರದ
ನಲಿವಿಗೆ ಕಾಸಿನ ಬೆಲೆಯಿಲ್ಲ;
ಗಾಯಗಳು ಸೋರದೇ ಕೀವಾಗದೇ
ನಿನ್ನೊಳಗಿನ ನನ್ನಿರುವು
ಅರಿವಾಗುವುದೇ!”
ಬಿರುಕಿರದೆ ಸಾಗುವುದ್ಹೇಗೆ
ನನ್ನ ಬೆಳಕಿನ ರೇಖೆಗಳು ನಿನ್ನೊಳಗೆ!”
ಒಲವೇ,
ನೋವಿನ ಅನುಭೂತಿ ಇರದ
ನಲಿವಿಗೆ ಕಾಸಿನಷ್ಟು ಬೆಲೆಯಿಲ್ಲ;
ಗಾಯಗಳು ಸೋರದೇ ಕೀವಾಗದೇ
ನನ್ನೊಳಗಿನ ನಿನ್ನಿರುವು
ಅರಿವಾಗುವುದೇ,
ಬಿರುಕಿರದೆ ಸಾಗುವುದ್ಹೇಗೆ
ಬೆಳಕಿನ ರೇಖೆಗಳು ನನ್ನೊಳಗೆ!
18 May, 2017
ಬೊಗಸೆ ತುಂಬ ಪಾರಿಜಾತ ಗಂಧ!
ಒಲವೇ
,
ಹ್ಮ್
,
ನನಗೇನೂ ನೆನಪಾಗುತ್ತಿಲ್ಲವಲ್ಲ
ನನ್ನೊಲವೇ ಅದ್ಹೇಗೆ
,
ಅದ್ಯಾವಾಗ
ನನಗಿಷ್ಟು ನೀನಾದೆ ಸುಪರಿಚಿತ
ನೆನಪಿಸಿಕೊಳ್ಳಲು ಮನದಾಳಕೆ
ಇಳಿದ ಹಾಗೆ ಮತ್ತಿಷ್ಟು ಹತ್ತಿರ
ನಿನ್ನೀ ನಸುನಗೆ
,
ಬಿರುನಗೆ
ನಿನ್ನೀ ಪಿಸುನುಡಿ
,
ಆಲಾಪ
ಯಾವೂದೂ ಅಪರಿಚಿತವಲ್ಲ
ಮತ್ಯಾವುದೋ ಜನುಮದ ಪಳೆಯುಳಿಕೆ
ಸುಮ್ಮನೇ ನಸು ನಗುತ್ತೇನೆ
ಬೊಗಸೆ ತುಂಬಾ ಪಾರಿಜಾತ ಗಂಧ!
ಸುಭಾಷಿತ- ಅನುವಾದ
ವಿದ್ಯಾ ವಿವಾದಾಯ ಧನಂ ಮುದಾಯ
ಖಲಸ್ಯ ಶಕ್ತಿಃ ಪರಪೀಡನಾಯ|
ಸಾಧೋಸ್ತು ಸರ್ವಂ ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ||
ಒಲವೇ,
ವಿದ್ಯೆ ಅರಸನಂತೆ ಮೆರೆಯಲು,
ಧನ ಸರಿ-ಸಮಾನರಿಲ್ಲವೆಂದು ತೋರಲು,
ಪರರ ಹೀಗಳೆಯಲೇ ಖಳನ ಸಾಮರ್ಥ್ಯವೆಲ್ಲವೂ!
ಇದಕೆ ವಿಪರೀತವು ಸಜ್ಜನರ ನಡೆಯು
ಅರಿವು ಬೆಳೆಸಲು ಮತ್ತು ಬೆಳೆಯಲು
ಸಂಪತ್ತು ಪರರ ಕಣ್ಣೊರಸಲು
ಶಕ್ತಿ ತನ್ನವರನು ಭದ್ರವಾಗಿಡಲು!
,
ಸಣ್ಣ ಕ್ಯಾನ್ವಾಸ್.. ಚಿತ್ರಕಲೆ!
17 May, 2017
ಮಿನಿ ಕಾನ್ವಾಸ್!
ಮತ್ತೆ ಒಲವು ಅಕ್ಷರದ ರೂಪದಲ್ಲಿ...
ಒಲವೇ,
ನಾ ಹಾರಬಲ್ಲೆ
ಅನಂತದಷ್ಟು ಎತ್ತರ
ನೀನಂದಂತೆ ಇಲ್ಲವೀಗ
ನಮ್ಮಿಬ್ಬರ ಮಧ್ಯೆ
ಒಂದಿನಿತೂ ಅಂತರ!
ಒಲವೇ,
ಒಪ್ಪಿದೆ, ನೀನನ್ನುವಂತೆ ಹಣತೆಯೊಂದು
ಮತ್ತೊಂದು ಹಣತೆಯನ್ನು ಬೆಳಗಿದರೆ ಬೆಳಕಿನ ವ್ಯಾಪ್ತಿಗೆ ಎಣೆಯಿಲ್ಲ !
15 May, 2017
ಸಣ್ಣ ಕ್ಯಾನ್ವಾಸ್ನಲ್ಲಿ ಚಿತ್ರ ಕಲೆ!
12 May, 2017
ಚಿಟ್ಟೆ- ಜಲವರ್ಣ
Common Mormon (Paplio Polytes)
11 May, 2017
ಮೌನಂ ಶರಣಂ ಗಚ್ಛಾಮಿ!
ಜಲವರ್ಣ ಹಕ್ಕಿಗಳು
‹
›
Home
View web version