ನನ್ನ ಮನಸ್ಸು

04 November, 2015

ಮತ್ತೆ ಮುಗುಳುನಗದೇ ಇನ್ನೇನು ಮಾಡಲಿ!

ಒಲವೇ,

ಮುಗುಳುನಗದೇ ಮತ್ತೇನು ಮಾಡಲಿ,
ಸುಖಾ ಸುಮ್ಮನೆ ಗಂಟಲು ಹರಿದುಕೊಳ್ಳುವಿಯಲ್ಲ..
ಮತ್ತೆ ಮತ್ತೆ ಅದೇ ಹೇಳುತ್ತ, ಗೊಣಗುತ್ತ
ನಿನ್ನ ಸಾಧನೆಯಲ್ಲ ಮಣ್ಣು ಪಾಲಾಯಿತು, ಅಷ್ಟೇ!

ತ್ಯಾಗ ಬಲದಲ್ಲಿ ತ್ರಿವಿಕ್ರಮನೆತ್ತರಕೆ
ನೀನು ಬೆಳೆದದು ನೋಡುತ್ತಾ
ಕುತ್ತಿಗೆ ಉಳುಕಿದೆ ಅವನದು, ಇವನದು, ಅವರದು..
ಅದರ ಮೇಲೆ ಅಹಂಗೆ ಉಳಿಯ ಧಾಳಿ

ಅವನೊಬ್ಬನೇ ಅಲ್ಲ... ನೋಡು,
ಅವನಂತವರ ದಂಡೇ ಇದೆ ಮುಂದೆ, ಹಿಂದೆ...
ಹೆಣ್ಣು ಮುಷ್ಟಿಯೊಳಗೇ ಇರಲಿ
ಎಂಬ ಹಂಬಲ ಅವರಿಗೆಲ್ಲ

ಮತ್ತೆ ಮುಗುಳುನಗದೇ ಏನು ಮಾಡಲಿ ಹೇಳು!

No comments:

Post a Comment