ನನ್ನ ಮನಸ್ಸು

17 August, 2015

ತುಜ್ಸೆ ನಾರಾಸ್ ನಹಿ ಜ಼ಿಂದಗಿ...

ಇಲ್ಲ ಬದುಕೇ,
ನಿನ್ನ ಮೇಲೇನೂ ಕೋಪವಿಲ್ಲ
ಚಕಿತಳಾಗಿರುವೆ ನಾ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

ಚಿಂತಿಸಿರಲಿಲ್ಲ ಬದುಕಲು
ನೋವುಗಳನು ಹೊರಬೇಕಾಗುವುದೆಂದು
ನಸುನಕ್ಕರೂ, ನಗುವಿನ ಋಣ ತೀರಿಸಬೇಕಾಗುವುದೆಂದು
ಭಯವೀಗೀಗ ನನಗೆ ಮುಖವರಳಿಸಿದರೂ ಎಲ್ಲಾದರು
ತುಟಿಯ ಮೇಲೆ ಋಣ ಭಾರವಿರಿಸುವೆನೆಂದು ||

ಹಾಗಂತ ಬದುಕೇ,  ಇಲ್ಲ
ನಿನ್ನ ಮೇಲಿಷ್ಟೂ ಕೋಪವಿಲ್ಲ
ಚಕಿತಳಾಗಿರುವೆ ನಾ ಬರೇ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

ತುಂಬಿದರೆ ಇಂದು ಹೊರಲಾರದಷ್ಟು
ದಪ್ಪದ ಹನಿಗಳು ಉದುರುವವು
ನಾಳೇನಾಗುವುದೇನೋ
ಅದರರಿವಿಲ್ಲವೀ ಹನಿಗಳಿಗೆ
ಹಂಬಲಿಸುವವೇನೋ ಕಣ್ಣೂಗಳು
ಎಲ್ಲಿ ಯಾವಾಗ ಹೋಗಿದೆಯೇನೋ ಕಳೆದು
ಬಚ್ಚಿದ್ದೆ ಕಂಬನಿಯೊಂದನು||

ಹಾಗಂತ ಬದುಕೇ,  ಇಲ್ಲ
ನಿನ್ನ ಮೇಲಿಷ್ಟೂ ಕೋಪವಿಲ್ಲ
ಚಕಿತಳಾಗಿರುವೆ ನಾ ಬರೇ ಚಕಿತಳಾಗಿರುವೆ
ನಿನ್ನೆಲ್ಲ ಮುಗ್ಧ ಪ್ರಶ್ನೆಗಳಿಗೆ||

No comments:

Post a Comment