ನನ್ನ ಮನಸ್ಸು

08 November, 2014

ಮತ್ತೂ ನಿನ್ನ ಬಯಸದೇ ಇರಲಾರೆನಲ್ಲ...


ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!
----------------------------------
ನಾ ಒಲವು ತುಂಬಿ ಕೊಟ್ಟ ಗಡಿಗೆಯೆಲ್ಲೋ ಕನಯ್ಯ...
ಅಂದರೆ, ಅದೇಕೋ ಪಿಳಿಪಿಳಿ ಕಣ್ಣ ಬಿಟ್ಟು
ಮುಗ್ಧ ನೋಟ ಬೀರುವೆ!
ಗಡಿಗೆಯಲ್ಲಿ ತೂತಿತ್ತು ಕಣೇ..

ನೀ ತುಂಬಿಸಿ ಕೊಟ್ಟ ಅನುರಾಗ
ನಾ ನಡೆದ ಹಾದಿಯ ತುಂಬಾ ಚೆಲ್ಲಿ
ಗಡಿಗೆ ಖಾಲಿಯಾಯಿತು ಕಣೇ..
ನೀನೆಂದರೆ ನಾ ನಂಬುವೆನೆ ನಿನ್ನ, ಕಳ್ಳ!

ಸಿಕ್ಕಿರಬೇಕು ಮತ್ತೊಬ್ಬಳು ಮೋಹಕ ಚೆಲುವೆ..
ಅವಳ ಕಣ್ಣ ನೋಟದ
ಬಲೆಗೆ ನೀ ಮೀನಾಗಿ ಬಿದ್ದಿರುವೆ..

ನಿನ್ನ ಉತ್ತರೀಯಕಂಟಿಕೊಂಡಿರುವ
ಮಲ್ಲಿಗೆಯ ಪಕಳೆ ಸುಳ್ಳು ಹೇಳೊಲ್ಲವಲ್ಲ..
ನಿನ್ನ ಮುರಳಿಗೆ ಮೆತ್ತಿರುವ ತುಟಿಯ ರಂಗು
ಕತೆಯೊಂದನು ಹೇಳುತ್ತಿದೆಯಲ್ಲಾ...

ನಿನ್ನ ರಂಗಿನಾಟವನೆಲ್ಲ ನಾ ಬಲ್ಲೆನಲ್ಲ, ಮೋಹನ!

ಮತ್ತೂ ನಿನ್ನ ನಾ ಬಯಸದೆ ಇರಲಾರೆನಲ್ಲ!

1 comment:

  1. ಮಧುರ ಕವನ.."ನಮ್ಮ ನಾರಿಯರು ಅವರ ಗಂಡಂದಿರನ್ನು ಏನೇ ಮಾಡಿದರೂ ಮೆಚ್ಚಿ ಅನುಸರಿಸಿ ನಡೆಸುತ್ತಿರುವ ತತ್ವವೇ ಈ ಸಾಲುಗಳಲ್ಲಿ ಅಡಗಿದೆ " ಎಂಬ ಅರ್ಥ ಹೊಳೆಯುತ್ತದೆ ಈ ಕವಿತೆ ಓದಿದರೆ.;

    ReplyDelete