ನನ್ನ ಮನಸ್ಸು

09 October, 2014

ಅಂಗೈ ಚಿತ್ತಾರದ ರಂಗೀಗ ಗಾಢವಾಗಿದೆ!

ಒಲವೇ,

ಕೊನೆಗೂ ನಿಲುಕಿತು
ನಿನ್ನರಮನೆಯ ಹೆಬ್ಬಾಗಿಲು
ಅಂಗೈಯಲ್ಲಿನ ಗೋರಂಟಿ
ಚಿತ್ತಾರದ ರಂಗೀಗ
ಬಲು ಗಾಢವಾಗಿದೆ!

ಮುಸುಕೆಳೆಯುವ ತನಕ
ಮಂಕು ಕಣ್ಣಿಗೆ
ಕಂಡ ಬಾಗಿಲಿಗೆಲ್ಲ
ಬಡಿಯುತ್ತ ವ್ಯರ್ಥ
ಪಯಣ ಸಾಗಿತ್ತಲ್ಲ!

-ಪ್ರೇರಣೆ ರೂಮಿ

No comments:

Post a Comment