ನನ್ನ ಮನಸ್ಸು

13 October, 2014

ವಿಠಲನಿಗೊಂದು ಲೆಟರ್!









ವಿಠಲ,

ನಿನ್ನೆ ಬರೆದ ಲೆಟರ್ ಓದಿದ್ದಿಯಾ? ಹಾ! ಏನೆಂದೆ, ಪುರುಸೊತ್ತಿಲ್ಲ!!! ಹೌದಪ್ಪಾ, ಪಂಡರಾಪುರದತ್ತ ವಾರಿರೂಪದಲ್ಲಿ ಜನಸಾಗರ ಬರುತ್ತಿದೆ. ಅವರ ಯೋಗಕ್ಷೇಮದ ಜವಾಬ್ದಾರಿ ಇದೆಯಂದಿಯಾ! ಸರಿ ಬಿಡು. ನನ್ನನಂತು ನೀ ಅಲ್ಲಿಗೆ ಕರೆಸಿಲ್ಲ.. ಹಾಗಾಗಿ ನನ್ನ ಬಾಯಿಬಡುಕತನವನ್ನು ನೀ ಸಹಿಸಲೇಬೇಕು.



ಅಂದ್ಹಾಗೆ ರುಕುಮಿಣಿ ಏನಾದರೂ ಅಂದಳಾ? ಮೊನ್ನೆ ನವರಾತ್ರಿ ಸಮಯದಲ್ಲಿ ಅವಳ ದಶರೂಪ ಗೆರೆಗಳಲ್ಲಿ ಮೂಡಿಸುವ ಪ್ರೇರಣೆ ಕೊಟ್ಟಿದ್ದಳು. ಅವಳಿಗೆ ಮೆಚ್ಚಿಗೆ ಆಯ್ತಾ ಇಲ್ವಾ ಅಂತ ಕೇಳು!



ಬೈದವೇ, ಇವತ್ತೊಂದಿಷ್ಟು ಕಂಪ್ಲೈಂಟ್‌ಗಳಿವೆ.. ಹೌದೋ, ನಿನ್ನೆ ಬರೆಯುವಾಗ ಒಂದಿಷ್ಟು ತಾಳ್ಮೆ ಸಮಾಧಾನ ಇತ್ತು. ಹಾಗಾಗಿ ನಿನ್ನ ನಿರ್ಣಯವನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದೆ. ಇವತ್ತು ಬೆಳಿಗ್ಗೆ ಬೆಳಿಗ್ಗೆ ನಾಮದೇವ ವಿರಚಿತ “ಪಂಡರಿ ನಿವಾಸ ಸಖಾ ಪಾಂಡುರಂಗ” ಹಾಡು ತನ್ನಿಂದ ತಾನೇ ತುಟಿಯಿಂದ ಹೊರಬಂತು. ದಾಸವರೇಣ್ಯರಿಗೂ ನಿನ್ನ ಭೇದಭಾವದ ಬುದ್ಧಿಯಿಂದ ಅಸಮಾಧಾನ! ಕೆಲವರಿಗೆ ಮಾತ್ರ ನೀ ಧಾರಾಳಿ,  ನಾವೆಲ್ಲ ಯಾರು! ನಿನ್ನ ಸೃಷ್ಟಿಯೇ ಅಲ್ವೇ! ಬಿಡು, ಎಲ್ಲ ಸಜ್ಜನರೇ ಆಗಿದ್ದರೆ ನಿನ್ನ ಸಾಮ್ರಾಜ್ಯದಲ್ಲಿ ಮಸಾಲೆ ಇರ್ತಿರಲಿಲ್ಲ. ನಿಂಗೂ ಫಿಕ್ಷನ್ ಇಷ್ಟ! ಅಂದ ಮೇಲೆ ನನ್ನ ಕಂಪ್ಲೈಂಟ್ ಸುಮ್ನೆ ಕೇಳ್ಬೇಕು, ಗೊತ್ತಾಯ್ತಾ. 



 ಹ್ಮ್.. ಅಲ್ವೋ ಎಲ್ಲ ಭಕುತರ ಆಪಾದನೆ ಕೇಳಿದ್ಮೇಲೂ ಅದ್ಯಾಕೆ ಇಷ್ಟೊಂದು ಭೇದಭಾವ ತೋರಿಸ್ತಿಯಾ??? ವೃಂದಕ್ಕನನ್ನು ಕರೆಸಿಕೊಂಡಿದ್ದಿಯಾ! ಅವಳೇನು ನಿಂಗೆ ಲಂಚ ಕೊಟ್ಳು!  ಹೇಳೋ, ಕೇಶವಾ!





ಹೋಗ್ಲಿ, ನಿಂಗೆ ಕನ್ನಡ ಬರುತ್ತದೆ ತಾನೆ. ಇತಿಹಾಸದ ಪ್ರಕಾರ ನೀ ಒಂದಾನೊಂದು ಕಾಲದಲ್ಲಿ ಕನ್ನಡಿಗನಾಗಿದ್ದಿಯಂತೆ. ಈಗಂತೂ ನೀ ಪೂರ್ತಿ ಮರಾಠಿಗನಾಗಿದ್ದಿಯಾ! ಸಾರಿ, ಆಂಗ್ಲ ಭಾಷೆ ಏನು ಮಾಡಿದರೂ ಲೆಟರ್‌ನೊಳಗೆ ನುಸುಳಿಬಿಡುತ್ತೆ. ಮರಾಠಿಯಲ್ಲಿ ಬರೆಯಲು ಕಷ್ಟ.. ಒಂದಿಷ್ಟು ಅರ್ಥ ಮಾಡಿಕೊಳ್ಳಬಲ್ಲೆ.  ಅಡ್ಜಸ್ಟ್ ಮಾಡ್ಕೋಪ್ಪಾ ವೆಂಕಟಪ್ಪ!



ಇದೇನಿದು ಹೊಸ ವರಸೆ.. ಲೆಟರ್ ಬರೆದು ನಿನ್ನ ಮಾನ ಹರಾಜು ಹಾಕ್ತೇನಂತ ಅನಿಸಿದ್ರೆ ಸಾರಿ. ಮತ್ತೇನು ಮಾಡ್ಲಿ, ನಿನ್ನೆ ಅನುರಾಧ ಅವರ ಬುಕ್ ಬಿಡುಗಡೆಯ ಸಮಾರಂಭದಲ್ಲಿ ಅರ್ಪಿತಾಳ ಹಾಡು ಇತ್ತು ಗೊತ್ತಲ್ವಾ! ಅದನ್ನೂ ತಪ್ಪಿಸಿಬಿಟ್ಟೆ.

 ಅಲ್ದೇ, ನನ್ನ ಎಲ್ಲಾ ಫ್ರೆಂಡ್ಸ್‌ಗಳನ್ನು ವ್ಯಸ್ತದಲ್ಲಿರಿಸಿದ್ದಿಯಾ.. ನಾನೇನ್ ಮಾಡ್ಲಿ ಹೇಳು. ನಳಿನಿ ಯಾವುದೇ ಭಜನೆ ಪ್ರೋಗ್ರಾಮ್‍ನಲ್ಲಿ, ಉಪೇಂದ್ರಣ್ಣ ಅವರ ಅಭಿಮಾನಿಗಳ ಜತೆ, ನಮ್ಮ ನಾಯಕ್‌ರಿಗಂತೂ ನನ್ನ ಪೋಸ್ಟ್ ನೋಡೋಕ್ಕೂ ಪುರುಸೊತ್ತು ಇಲ್ಲ. ಈಗ ಹೇಳು, ನಿನ್ಗೆ ಕಾಗದ ಬರೆಯುವುದು ಬಿಟ್ರೆ ಬೇರೆ ಆಪ್‌ಶನ್ ಕೊಟ್ಟಿದ್ದಿಯಾ??

ಹೋಗ್ಲಿ ಬಿಡು, ನಿಂಗಿದರ ಅಭ್ಯಾಸ ಇದೆಯಲ್ವಾ, ನಿನ್ನ ಭಕ್ತವೃಂದದವರು ಏನಾದರೂ ಕೊಂಕು ಹುಡುಕ್ತಾ ಇರ್ತಾರೆ.

ಇವತ್ತಿಗೆ ಇಷ್ಟು ಆಪಾದನೆ ಸಾಕು ಬಿಡು!



 ಇವತ್ತೂ ನಾಮದೇವನ ಒಂದು ಅಭಂಗ ಅನುವಾದಿಸಿದ್ದೇನೆ, ಓದು! ಇಷ್ಟ ಆಗದಿದ್ರೆ ಏನೂ ಹೇಳ್ಬೇಡ, ಅರ್ಥ ಆಗ್ತದೆ. (ನಂಗೆ ಮರಾಠಿ ಅರ್ಥವಾಗೋದು ಅಷ್ಟಕ್ಕಷ್ಟೇ! ತಪ್ಪಾದ್ರೆ ಕೋಪ ಮಾಡ್ಕೊಳ್ಬೇಡಿ ಅಂತ ಒಂದ್ ಮಾತು ನಾಮದೇವಂಗೂ ಹೇಳ್ಬಿಡು)

ಅದರ ಜತೆ ಗೆರೆಗಳಲ್ಲಿ ಚಿತ್ರ ಬಿಡಿಸಿ ಸಂತರ ಜತೆಗೆ ನಿನ್ನ ನಾಮಾಮೃತವನ್ನು ಕೇಳುತ್ತಾ ನಲಿಯುತ್ತಾ ಪಂಡರಾಪುರದತ್ತ ಮನಸ್ಸಿನಲ್ಲೇ ಹೆಜ್ಜೆ ಹಾಕುತ್ತಿದ್ದೇನೆ. ಅದನ್ನೂ ನೋಡಲು ಮರೆಯದಿರು.



ಪಂಡರಾಪುರದೊಡೆಯನೇ, ಗೆಳೆಯನೇ

ಭಕುರತರ ಸಹಚರ್ಯೆ ಮಾಡೋ||



ಭಕುತರ ನೀ ಕೈವಶನಂತೆ ನಾರಾಯಣಾ

ಮತ್ಯಾಕೆ ಲಜ್ಜೆ ತೋರಲಿ ಮಾತು ಪೇಳಲು||



ಹಿಂದೆ ಬೇಡಿದವರದೆಲ್ಲ ಸಾಲ ತೀರಿಸಿದೆಯಂತೆ

ಮತ್ತೆ ನಂಗೊಬ್ಬನಿಗ್ಯಾಕೀ ಪರಿಯ ತಾಪ||



ಮತ್ತೂ ಮತ್ತೂ ನಿನಗಾಗುದಿಲ್ಲವೇ ಒಂದಿಷ್ಟೂ ಸಂಕೋಚ

ಹೇಳೋ ಕೇಶವಾ, ನನ್ನೊಡೆಯ, ಕೇಳುವೆ ನಾನು ನಾಮ||


https://www.youtube.com/watch?v=RM8sKmGUtAE










No comments:

Post a Comment