ನನ್ನ ಮನಸ್ಸು

22 October, 2014

ಬೆಳಕಿನ ಹಬ್ಬದ ಶುಭ ಹಾರೈಕೆಗಳು!

ಬೆಳಕು
----------

ಮದ, ಮೋಹ, ಮಾತ್ಸರ್ಯ, ಮನೋಭಿಲಾಷೆ, ಮಾನವೀಯತೆಯ ಉಲ್ಲಂಘನದ..
ಸುಂಟರಗಾಳಿಯ ಹೂಂಕಾರಕೆ ಅಳುಕದಿರದಿಲಿ,
ಮನದ ಗರ್ಭಗುಡಿಯ ಪುಟ್ಟ ಬೆಳಕು ಆರದಿರಲಿ;

ನಿಸ್ವಾರ್ಥ, ನಿರಹಂಕಾರ, ನಿರ್ಮಲ, ನಿಸ್ಪೃಹ, ನಿರಪೇಕ್ಷತೆ..
ಹಣತೆಯ ಬತ್ತಿಯನು ಬೆಳಗಿಸುವ ತೈಲವಾಗಲಿ,
ಬತ್ತದಿರಲೆಂದೂ, ನೀಡಲಿ ಆತ್ಮವನು ಹೊತ್ತ ಕಾಯಕೆ ಕಾಂತಿ, ಶಾಂತಿ;

ಬೆಳಕಿನ ಹಬ್ಬದ ಶುಭಾಶಯಗಳು!

||ಸರ್ವೇ ಜನಾಃ ಸುಖಿನೋ ಭವಂತಿ||

1 comment:

  1. ಹಿತಬಯಸೋ ಬಂಧುಬಾಂಧವರ ಆಸರೆಯ ಕೈಗಳು ನಮ್ಮ ಸುತ್ತಲಿದ್ದರೆ ಮನದ ಗುಡಿಯ ದೀಪ ಆರುವುದಿಲ್ಲ. ಶುಭಾಶಯಗಳು.

    ReplyDelete