ನನ್ನ ಮನಸ್ಸು

04 October, 2014

ನಾ ಬರೇ ಮಧ್ಯವರ್ತಿ ಒಲವೇ..



ಒಲವೇ,
ನನ್ನೆಲ್ಲಾ ಯೋಚನೆ ಮತ್ತು ಪರ್ಯಾಲೋಚನೆಗಳು ನಿನ್ನದೇ ಪ್ರಭಾವದ ಹೊಳಹಲ್ಲವೇ..
ನಿನ್ನದೇ ಪದಗುಚ್ಛ ಮತ್ತು ಆತ್ಮಾಭಿವ್ಯಕ್ತಕೆ ಬರೇ ಮಧ್ಯವರ್ತಿ ನಾನು ಎಂದೇ ಅನಿಸುವುದಲ್ಲವೇ!
-ರೂಮಿ ಪ್ರೇರಣೆ

(ದಶಮಿಯ ಸುಸಂದರ್ಭಕ್ಕೆ ದಶ ರೀತಿಯಲ್ಲಿ ಗೆರೆಗಳೊಂದಿಗೆ ಮೂಡಿ ಬಂದು, ಮಹಾಮಾಯೆ ಕಾಣದೆಯೂ ಕಾಣಿಸಿಕೊಂಡಳು. ಆ ಧನ್ಯತೆಯ ಹರುಷದಲ್ಲಿ ಮುಳುಗೇಳುತಿರುವಾಗಲೇ ಡಾಕ್ಟರ್ ಸಾಹೇಬರು ಹಂಚಿಕೊಂಡ ರೂಮಿಯ ನುಡಿ ಕಾಣಿಸಿ, ’ಅರೇ, ನನ್ನ ಮನದ ಮಾತುಗಳು’ ಅಂತ ಅನಿಸಿ ಸಹೃದಯದವರೊಡನೆ ಹಂಚಬೇಕೆನಿಸಿತು)

ಜತೆಗೆ ಅನುರಾಧ, ನಳಿನಿಯರಿಗೆ ವಿಶೇಷ ಕೃತಜ್ಞತೆಗಳು! ಹುರುಪಿನ ಮಾತು ಆಡಿ, ಬೆನ್ನು ತಟ್ಟಿ ಗೆರೆಗಳನ್ನೆಳೆಯುವ ದುರ್ಬಲ ಬೆರಳುಗಳಿಗೆ ವಿಶೇಷ ಬಲ ಕೊಟ್ಟಿದ್ದಿರಿ. ಹೃತ್ಫೂರ್ವಕ ವಂದನೆಗಳು!

No comments:

Post a Comment