ನನ್ನ ಮನಸ್ಸು

10 August, 2014

ನೂಲ ಹುಣ್ಣಿಮೆಯ ವಿಶೇಷ ಮುಂಜಾವು!

ನೂಲ ಹುಣ್ಣಿಮೆಯ ವಿಶೇಷ ಮುಂಜಾವು!
_____________________


ಕೆಂಪಂಚಿನ ಹಸಿರು ಝರಿ ಲಂಗ…
ಕೊರಳಲಿ ಎರಡೆಳೆಯ ಲಕುಮಿ ಪದಕದ ಮುತ್ತಿನ ಹಾರ…
ಕೆಂಪು ಹಸಿರು ಹರಳಿನ ಮುತ್ತಿನ ಝುಮುಕಿ…
ಹೊನ್ನಂಚಿನ ಹಸಿರು ರಿಬ್ಬನು ಬಿಗಿದ ಎರಡು ಪುಟ್ಟ ಜಡೆ…
ಬಣ್ಣ ಬಣ್ಣದ ಚಿತ್ತಾರದ ಬಿಳಿ ಕೊಡೆ ಭುಜಕೆ ಅವುಚಿ,
ಪಚ್ಚೆ ಗಾಜಿನ ಬಳೆಗಳ ಘಲ್ ಘಲ್… ಕೇಳಿಸುತ್ತಾ,
ಪುಟ್ಟ ಕೈಗಳಿಂದ ಲಂಗ ಒದ್ದೆಯಾಗದಂತೆ ಮೇಲೆತ್ತಿ,
ಅಣ್ಣ, ತಮ್ಮ, ತಂಗಿಯರೊಡನೆ ಪೈಪೋಟಿ ಮಾಡುತಾ
ತಾನೂ ಪವಿತ್ರ ನೂಲು ಹಾಕುವ ತವಕದಿ
ಮುಸಲ ಧಾರೆಯಂತೆ ಸುರಿಯುವ ಮಳೆಯ ಜತೆ
ಇಂದು ಬುವಿಗಿಳಿದ ಪುಟ್ಟ ಬಾಲೆ ಮುಂಜಾವು!

 (ಚಿತ್ರ ಕೃಪೆ ಅಂತರ್ಜಾಲ)

ಅಣ್ಣಂದಿರಿಗೆ, ತಮ್ಮಂದಿರಿಗೆ ಪ್ರೀತಿಪೂರ್ವಕ ನಮನಗಳು! :-)

ಸರ್ವೇ ಜನಾಃ ಸುಖಿನೋ ಭವಂತು!

No comments:

Post a Comment