ಭಕ್ತಿ-ನಂಬುಗೆ!
------------ ವರ್ತಮಾನ ಪತ್ರಿಕೆಯಲ್ಲಿ ಸುಬ್ರಮಣ್ಯದ ಮಡೆಸ್ನಾನದ ಬಗ್ಗೆ ಅಮ್ಮ ಓದುತ್ತಿದ್ದರು.. ಅಲ್ಲಿಗೆ ಬಂದ ನನ್ನ ಕಂಡು ತಲೆ ಎತ್ತಿ ಒಂದು ಮುಗುಳುನಗೆ ಚೆಲ್ಲಿದರು. “ಯಾಕೆ ನಗ್ತಿ ಅಮ್ಮ?” “ಅಲ್ವೆ, ನೀವು ಆಧುನಿಕ ಮನದವರು. ಇದೆಲ್ಲ ನೋಡಿ ನೀವು ಏನೆಲ್ಲ ಚರ್ಚೆಮಾಡ್ತಿರ್ಬಹುದೆಂದು ನೆನೆದು ನಗುಬಂತು!” “ಹೌದಲ್ವಾ ಅಮ್ಮ, ಎಂಜೆಲೆಗಳ ಮೇಲೆ ಉರುಳುವುದು.. ಅಂದರೆ!” “ನೆನಪಿದೆಯಾ ಶೀಲಾ ನಿಂಗೆ, ಯುಧಿಷ್ಟಿರನ ರಾಜಸೂಯ ಯಾಗದ ಕತೆ, ಅದೇ ಶುಕ, ಮುಂಗೂಸಿ..!” ತಟ್ಟನೆ ನೆನಪಿಗೆ ಬಂತು. ಪಾಂಡುವಿನ ನರಕಯಾತನೆಯ ವೀಕ್ಷಣೆಯನ್ನು ತಪ್ಪಿಸಲು ರಾಜಸೂಯ ಯಜ್ಞಮಾಡಿದನು ಧರ್ಮರಾಯ. ಕೃಷ್ಣ, ಸ್ವತಃ ಬ್ರಹ್ಮಾಂಡದ ಒಡೆಯನಾಗಿದ್ದರೂ ತಾನು ಉಚ್ಛಿಷ್ಠವನ್ನು ತೆಗೆಯುವ ಕಾರ್ಯವನ್ನು ನಿರ್ವಹಿಸಿದ್ದನು. ತೊಂಡರಿಗೆ ತೊಂಡನಾಗುವ ಅವನಿಗೆ ದೊಡ್ಡಸ್ತಿಕೆ ಯಾಕಿಲ್ಲ!!! ಬ್ರಾಹ್ಮಣರ ಸಂಖ್ಯೆ ಕೋಟಿ ದಾಟಿದಾಗ ಸ್ವರ್ಗದ ಗಂಟೆ ಒಂದು ಸಾರೆ ಢಣ್ ಎಂದು ಬಾರಿಸಿತು... ಧರ್ಮನು ಸಂತುಷ್ಟನಾದನು! ಸ್ವಲ್ಪ ಸಮಯದಲ್ಲೇ ಮತ್ತೊಮ್ಮೆ ಢಣ್.. ಮೇಲೆ ಮೇಲೆ ಗಂಟೆ ಬಾರಿಸುತ್ತಿದೆ. ಅರೇ, ಏನಿದು ವಿಚಿತ್ರ! ಉಚ್ಛಿಷ್ಠ ಪತ್ರಾವಳಿಗಳನ್ನು ಬಿಸುಟ ಎಲೆಗಳ ಗುಡ್ದದಲ್ಲಿದ್ದ ಅಗುಳುಗಳನ್ನು ಮುಕ್ಕುತ್ತಿದ್ದ ಗಿಳಿಯನ್ನು ಕಂಡರು. ಕೇಶವನಿಗೆ ಶುಕಮುನಿಯ ಗುರುತು ಹತ್ತಿ ಪರಿಚಯಿಸಿದನು. ಕಪಿಲ ಮಿನಿ, ಯಾಜ್ಞವಲ್ಕ, ದತ್ತಾತ್ರೇಯ ಮತ್ತು ಶುಕ ಮುನಿ ಇವರೆಲ್ಲರೂ ಮುನಿಶ್ರೇಷ್ಟರೆಂದು ಮಾಧವನು ಧರ್ಮನಿಗೆ ತಿಳಿಸಿದನು! ಹೌದಮ್ಮಾ! ನನಗೀಗ ಅರ್ಥವಾಯಿತು. ಸ್ವತಃ ತಪೋವರೇಣ್ಯರಾದ ಶುಕ ಮುನಿಗಳಿಗೆ ಆ ಅಹಂ ಇರಲಿಲ್ಲ. ಅವರಲ್ಲಿದ್ದದ್ದು ಬರೇ ಭಕ್ತಿಭಾವ, ನಂಬುಗೆ.. ಅವೆರಡು ಇದ್ದರೆ ಸಾಕು, ಹರಿಯು ಪ್ರಾಪ್ತಿಯಾಗುವನು!!! ಜನುಮಗಳ ಬವಣೆ ನೀಗುವುದು! |
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
▼
No comments:
Post a Comment