ನನ್ನ ಮನಸ್ಸು

02 June, 2014

ಮಿರ್ಜಾ ಗಾಲಿಬ್ ಕೆಹತೆ ಹೈ..

ಊರು ಬದಲಾಯಿಸುವರು ಅವರು,
ವೇಷ ಭೂಷಣ ಬದಲಾಯಿಸುವರು,
ಸಂಬಂಧಗಳನು ಕಡಿದು ಹಾಕಿ ಹೊಸದನ್ನು ಕಟ್ಟುವರು,
ಮೈತ್ರಿ ಬದಲಾಯಿಸುವರು ಸಮಯ ಸಾಧಕರಂತೆ,
ಏನನ್ನು ಬದಲಾಯಿಸಿದರೂ ಶಾಂತಿ-ಸಮಾಧಾನ ಸಿಗಲಿಲ್ಲವಲ್ಲ..
ತಮ್ಮನ್ನು ತಾವು ಬದಲಾಯಿಸಲು ಪ್ರಯತ್ನ ಪಡಲೇ ಇಲ್ಲವಲ್ಲ!

ಮಿರ್ಜಾ ಗಾಲಿಬ್ ಹೇಳುತ್ತಾನೆ,

"ಬದುಕೆಲ್ಲಾ ಇದೇ ತಪ್ಪು ಮಾಡಿದೆ ನಾನು
ಧೂಳು ಮುಖವನ್ನೇ ಮುಸುಕಿತ್ತು..
ನಾನಾದರೋ ಮತ್ತೆ ಮತ್ತೆ ತಿಕ್ಕುತ್ತಿದ್ದೆ ದರ್ಪಣವನ್ನು!"

-ಭಾವಾನುವಾದ

No comments:

Post a Comment